ಶುಕ್ರವಾರ, ಜನವರಿ 17, 2020
20 °C

'ಪೊಲೀಸರಿಂದ ನಾಟಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಯ ಸಿಬ್ಬಂದಿ, ಅಪರಾಧ ತಡೆ ಮಾಸಾಚರಣೆಯಂಗವಾಗಿ ರಾಜರಾಜೇಶ್ವರಿ ನಗರದ ಬಾಲಕೃಷ್ಣ ರಂಗಮಂದಿರದಲ್ಲಿ ‘ಪರಿವರ್ತನೆ ನಿಮ್ಮಿಂದಲೆ’ ಎಂಬ ನಾಟಕ ಪ್ರದರ್ಶಿಸಿದರು.

ಈ ಮೂಲಕ ಸಾಮಾಜಿಕ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಈ ಕಾರ್ಯಕ್ರಮಕ್ಕೆ ಪುನಶ್ಚೇತನ ಎಂಬ ಸರ್ಕಾರೇತರ ಸಾಮಾಜಿಕ ಸಂಸ್ಥೆಯ ಸಹಕಾರ ನೀಡಿತ್ತು.

ನಾಟಕದಲ್ಲಿ ಮಕ್ಕಳ ಮೇಲಿನ ಅತಿಯಾದ ವ್ಯಾಮೋಹದಿಂದ ಆಗುವ ಪರಿಣಾಮ, ಗಂಡನ ಕುಡಿತದ ಚಟದಿಂದ ಆಗುವ ದುಷ್ಪರಿಣಾಮ, ಮನೆ ಕಳ್ಳತನ ಮತ್ತು ಅದನ್ನು ತಡೆಗಟ್ಟುವ ವಿಧಾನ, ಟ್ರಾಫಿಕ್ ಸಮಸ್ಯೆ, ಡ್ರಿಂಕ್ ಆ್ಯಂಡ್ ಡ್ರೈವ್, ಮಾದಕ ವಸ್ತುಗಳ ತಡೆಗಟ್ಟುವಿಕೆ, ಸಾಮಾಜಿಕ ಭದ್ರತೆ ಹೀಗೆ ಅನೇಕ ವಿಷಯಗಳ ಮೇಲೆ ಗಮನ ಹರಿಸಲಾಗಿತ್ತು. ಈ ನಾಟಕವನ್ನು ಆರ್ಯ ನಿರ್ದೇಶನ ಮಾಡಿದ್ದರು.

ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಿ, ರಾ.ರಾ. ನಗರದ ಇನ್‌ಸ್ಪೆಕ್ಟರ್‌ ನವೀನ್ ಸುಪೇಕರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು