ಶುಕ್ರವಾರ, ಜೂನ್ 18, 2021
27 °C

ಭಾರ ಎನಿಸದ ಪುಟ್ಟ ಬರಹಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೀತಾ
ಮೂಲ: ದೇವದತ್ತ ಪಟ್ಟನಾಯಕ; ಕನ್ನಡಕ್ಕೆ: ಪದ್ಮರಾಜ ದಂಡಾವತಿ
ಪ್ರಕಾಶನ: ಮನೋಹರ ಗ್ರಂಥಮಾಲಾ, ಧಾರವಾಡ.

ದೂರವಾಣಿ: 0836–2441822

ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾಗಿ ನಿವೃತ್ತರಾದ ಸಿ.ವಿ. ತಿರುಮಲರಾವ್‌ ಅವರು ತಮ್ಮ ವೃತ್ತಿ ಬದುಕಿನ ಆಪ್ತ ಅನುಭವಗಳು ಹಾಗೂ ತಮ್ಮನ್ನು ಕಾಡಿದ ವ್ಯಕ್ತಿಗಳ ಕುರಿತು ಬರೆದ ಪುಟ್ಟ, ಪುಟ್ಟ ಲೇಖನಗಳ ಸಂಕಲನ ‘ಪೆಗಾಸಸ್‌’. ಶಿಕ್ಷಣ ಇಲಾಖೆಯ ಕಾರ್ಯವೈಖರಿಯ ಮೇಲೆ ಒಬ್ಬ ಕಾಳಜಿಯುಳ್ಳ ಅಧಿಕಾರಿ ಬೀರಿರುವ ಒಳನೋಟಗಳನ್ನಾಗಿಯೂ ಇಲ್ಲಿನ ಬರಹಗಳನ್ನು ನೋಡಬಹುದು.  ಸಮಸ್ಯೆಗಳಿಗೆ ಮಾನವೀಯ ನೆಲೆಯಲ್ಲಿ ಪರಿಹಾರ ಹುಡುಕುವ ಲೇಖಕರ ಮನೋಭಾವ ಗಮನಸೆಳೆಯುತ್ತದೆ.

ಕವಿ ಬೇಂದ್ರೆಯವರು ತಿರುಮಲರಾವ್‌ ಅವರನ್ನು ಹೆಚ್ಚಾಗಿ ಕಾಡಿದಂತೆ ತೋರುತ್ತದೆ. ತಮ್ಮ ಈ ನೆಚ್ಚಿನ ಕವಿಯ ಕುರಿತು ಅವರು ಮೇಲಿಂದ ಮೇಲೆ ಪ್ರಸ್ತಾಪ ಮಾಡುತ್ತಾರೆ. ಕರೀಂಖಾನ್‌, ಕಾರಂತ, ಗೋವಿಂದೇಗೌಡರ ನೆನಪುಗಳೂ ಅವರನ್ನು ಕಾಡಿವೆ. ಕೃತಿಯಲ್ಲಿರುವ ಪುಟ್ಟ, ಪುಟ್ಟ ಬರಹಗಳು ಓದಲು ಭಾರ ಎನಿಸುವುದಿಲ್ಲ. ಪ್ರತೀ ಬರಹದ ಆರಂಭದಲ್ಲಿ ನೀಡಿರುವ ಮಹಾನ್‌ ಉಕ್ತಿಗಳು ಓದುಗರನ್ನು ಚಿಂತನೆಗೂ ಹಚ್ಚುತ್ತವೆ. ಶಿಕ್ಷಣ ಇಲಾಖೆಯಲ್ಲಿದ್ದೂ ಹಲಗೆ ಬಳಸದ ತಮ್ಮ ಕಾಯಕದ ಕುರಿತು ಸಂಧ್ಯಾ ಕಾಲದ ಹೊರಳುನೋಟ ಬೀರಿದ್ದಾರೆ ಲೇಖಕರು.  ಬರಹಗಳು ಹಾಗೂ ಉಕ್ತಿಗಳ ಮೂಲಕ ಓದುಗರಿಗೆ ಪುಟ್ಟ ಸಂದೇಶವನ್ನೂ ನೀಡುತ್ತಾ ಹೋಗುವುದು ಕೃತಿಯ ಆಶಯ. ಅವರ ಅನುಭವಗಳು ಶಿಕ್ಷಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರಿಗೂ ಪಾಠವಾಗಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು