ಭಾನುವಾರ, ಸೆಪ್ಟೆಂಬರ್ 25, 2022
20 °C

ಕರ್ಣಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ವಿ. ಶಂಕರನಾರಾಯಣನ್ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್‌ ಅವರು ಶುಕ್ರವಾರ ಸಂಜೆ ಚೆನ್ನೈನಲ್ಲಿ ನಿಧನರಾಗಿದ್ದಾರೆ. 

ಅವರಿಗೆ 77 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅವರು ಅಗಲಿದ್ದಾರೆ. 

ಕರ್ಣಾಟಕ ಸಂಗೀತದ ಮೇರು ಶಿಖರ ಎನಿಸಿದ್ದ ಮಧುರೈ ಮಣಿ ಅಯ್ಯರ್ ಶೈಲಿಯಲ್ಲಿ ಹಾಡುತ್ತಿದ್ದ ಟಿ.ವಿ.ಶಂಕರನಾರಾಯಣನ್ ಅವರು 2003 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು. 

ವೆಂಬು ಅಯ್ಯರ್‌ ಅವರ ಮಗನಾದ ಶಂಕರನಾರಾಯಣನ್ ಅವರು ಮಣಿ ಅಯ್ಯರ್ ಅವರ ಸೋದರ ಸಂಬಂಧಿಯೂ ಹೌದು. 

ಪದ್ಮಭೂಷಣ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಟಿ. ವಿ. ಶಂಕರನಾರಾಯಣನ್ ಅವರಿಗೆ ಸಂದಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು