ಮಹಾಲಕ್ಷ್ಮಿಯನ್ನು ಪೂಜಿಸುವಾಗ ನೆಲ್ಲಿಕಾಯಿ ದೀಪ ಬೆಳಗಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಅನೇಕರಲ್ಲಿದೆ. ಹಾಗಾಗಿ ಅನೇಕರು ಶುಕ್ರವಾರ ದೇವಿಗೆ ಪೂಜೆ ಸಲ್ಲಿಸುವಾಗ ನೆಲ್ಲಿಕಾಯಿ ದೀಪ ಹಚ್ಚುತ್ತಾರೆ. ಹಾಗಿದ್ದರೆ, ಇದರಿಂದ ಸಿಗುವ ಲಾಭಗಳೇನು ಎಂಬುದನ್ನು ನೋಡೋಣ.

ನೆಲ್ಲಿಕಾಯಿ ಮಹಾಲಕ್ಷ್ಮಿ ತುಂಬಾ ಪ್ರಿಯವಾದದ್ದು, ಶುಕ್ರವಾರ ಸಾಯಂಕಾಲ ಮಹಾಲಕ್ಷ್ಮಿಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಮಹಾಲಕ್ಷ್ಮಿಯ ಅನುಗ್ರಹ ದೊರೆಯುತ್ತದೆ.
.ಕಾರ್ತಿಕ ಮಾಸದಲ್ಲಿ ದೀಪವನ್ನು ಹೀಗೆ ಬೆಳಗಿಸಿದರೆ ಫಲ ಹೆಚ್ಚು: ಜ್ಯೋತಿಷ .ಗಮನಿಸಿ: ನವರಾತ್ರಿಯಲ್ಲಿ ಈ ಕೆಲಸಗಳನ್ನು ಮಾಡಬಾರದು ಎನ್ನುತ್ತೆ ಜ್ಯೋತಿಷ.

ನೆಲ್ಲಿಕಾಯಿ ಮಹಾಲಕ್ಷ್ಮಿಗೆ ತುಂಬಾ ಪ್ರಿಯವಾದದ್ದು ಎಂಬ ನಂಬಿಕೆ ಇದೆ. ಶುಕ್ರವಾರ ಸಾಯಂಕಾಲ ಮಹಾಲಕ್ಷೀಗೆ ನೆಲ್ಲಿಕಾಯಿ ದೀಪ ಹಚ್ಚುವುದರಿಂದ ಅನುಗ್ರಹ ದೊರೆಯುತ್ತದೆ.

ಮಹಾಲಕ್ಷ್ಮಿಗೆ ನೆಲ್ಲಿಕಾಯಿ ಚಟ್ನಿ ನೈವೇದ್ಯ ಮಾಡಿದರೆ, ಆಕೆ ಮನೆಯಲ್ಲಿ ಶಾಶ್ವತವಾಗಿ ನೆಲೆಸುತ್ತಾಳೆ. ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಶಂಕರಾಚಾರ್ಯರು ಬರೆದಿರುವ ಶ್ರೀ ಕನಕಧಾರಾ ಸ್ತೋತ್ರದಲ್ಲಿ ಉಲ್ಲೇಖಿಸಿದೆ.

ನೆಲ್ಲಿಕಾಯಿ ಚಟ್ನಿ ಅಥವಾ ನೆಲ್ಲಿಕಾಯಿ ಗೊಜ್ಜನ್ನು ಮಹಾಲಕ್ಷ್ಮಿಗೆ ನೈವೇದ್ಯ ಮಾಡಿ, ಬಳಿಕ ಅದನ್ನು ಸುಮಂಗಲಿಯರಿಗೆ ಪ್ರಸಾದದ ರೂಪದಲ್ಲಿ ನೀಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

ನೆಲ್ಲಿಕಾಯಿ ಹಾಗೂ ತುಳಸಿ ರಸವನ್ನು ಪಾರ್ವತಿಗೆ ನೈವೇದ್ಯ ಮಾಡಿ, ಕಾಮಾಲೆ ರೋಗ ಇರುವ ರೋಗಿಗಳಿಗೆ ಕುಡಿಸಿದರೆ, ಕಾಮಾಲೆ ರೋಗ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.

ನೆಲ್ಲಿಕಾಯಿಯನ್ನು ಶುಕ್ರವಾರದಂದು ಕನ್ಯೆ ಮತ್ತು ಮುತ್ತೈದೆಯರಿಗೆ ನೀಡಿದರೆ ಇಷ್ಟಾರ್ಥಗಳು ಸಿದ್ದಿಯಾಗುತ್ತದೆ ಎಂಬ ನಂಬಿಕೆ ಇದೆ.

ಪ್ರತಿದಿನ ದೇವರ ಮನೆಯಲ್ಲಿ ಶಂಖದ ಪಕ್ಕ ನೆಲ್ಲಿಕಾಯಿಯನ್ನು ಈಶಾನ್ಯ ದಿಕ್ಕಿನಲ್ಲಿ ಇಟ್ಟರೆ, ಕುಟುಂಬದಲ್ಲಿ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ಹೇಳಲಾಗುತ್ತದೆ.

ನೆಲ್ಲಿಕಾಯಿ ಉಪ್ಪಿನಕಾಯಿಯನ್ನು ಇತರರಿಗೆ ಹಂಚಿದರೆ ಗೃಹ ಕಲಹ ನಿವಾರಣೆಯಾಗಿ, ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.

ನೆಲ್ಲಿಕಾಯಿ ದೀಪವನ್ನು ತುಳಸಿ ಕಟ್ಟೆಯ ಮುಂದೆ ಹಚ್ಚಿದರೆ ಮನೆಯಲ್ಲಿ ಅಪಮೃತ್ಯು ನಿವಾರಣೆಯಾಗಿ ಆರೋಗ್ಯ ಭಾಗ್ಯ ಪ್ರಾಪ್ತಿಯಾಗುತ್ತದೆ.

ನೆಲ್ಲಿಕಾಯಿಯ ಮರಕ್ಕೆ ನಿತ್ಯ ಪೂಜೆ ಸಲ್ಲಿಸುವುದರಿಂದ ಧನ, ಆರೋಗ್ಯ, ಶಾಂತಿ ಹಾಗೂ ನೆಮ್ಮದಿ ಸಿಗಲಿದೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.