ಜನ್ಮಕುಂಡಲಿಯ ಪ್ರಕಾರ ಪ್ರತಿ ರಾಶಿಗೂ ನಕ್ಷತ್ರಗಳಿರುತ್ತವೆ. 12 ರಾಶಿಗಳಿಗೆ 24 ನಕ್ಷತ್ರಗಳಿವೆ. ಇವು ಪ್ರತಿ ರಾಶಿಯವರ ಗುಣಗಳ ಮೇಲೆ ಪ್ರಭಾವ ಬೀರುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ನಕ್ಷತ್ರಕ್ಕೆ ಅನುಗುಣವಾಗಿ ಕೆಲವು ರತ್ನಗಳನ್ನು ಧರಿಸುವುದರಿಂದ ದೋಷಗಳು ಪರಿಹಾರವಾಗುವುದರ ಜೊತೆಗೆ ಶುಭಫಲ ಲಭಿಸಲಿದೆ ಎಂಬ ನಂಬಿಕೆ ಇದೆ. ಹಾಗಾದರೆ ಯಾವ ನಕ್ಷತ್ರದಲ್ಲಿ ಜನಿಸಿದವರು ಯಾವ ರತ್ನಗಳಿರುವ ಆಭರಣ ಧರಿಸಿದರೆ ಒಳಿತಾಗುತ್ತದೆ ಎಂಬುದನ್ನು ತಿಳಿಯೋಣ.
.ವಿಶ್ಲೇಷಣೆ | ಉದುರಿ ಬೀಳುತ್ತಿರುವ ನಕ್ಷತ್ರ.
ಜನ್ಮ ನಕ್ಷತ್ರಕ್ಕೆ ಅನುಸಾರವಾಗಿ ಧರಿಸಬೇಕಾದ ರತ್ನಗಳು:

ಅಶ್ವಿನಿ ಹಾಗೂ ಮೂಲ ನಕ್ಷತ್ರ: ಈ ನಕ್ಷತ್ರಗಳಲ್ಲಿ ಜನಿಸಿದವರು ಆಭರಣದಲ್ಲಿ ‘ವೈಢೂರ್ಯ’ವನ್ನು ಧರಿಸುವುದು ಶುಭಕರವಾಗಿದೆ.

ಪುನರ್ವಸು, ವಿಶಾಖ ಮತ್ತು ಪೂರ್ವಭಾದ್ರ ನಕ್ಷತ್ರ: ಈ ನಕ್ಷತ್ರಗಳಲ್ಲಿ ಜನಿಸಿದವರು ‘ಪುಷ್ಯರಾಗ’ವನ್ನು ಧರಿಸುವುದು ಶುಭಕರವಾಗಿದೆ.

ಆಶ್ಲೇಷ, ರೇವತಿ ಮತ್ತು ಜೇಷ್ಠ ನಕ್ಷತ್ರ: ಈ ನಕ್ಷತ್ರಗಳಲ್ಲಿ ಜನಿಸಿದವರು ಆಭರಣ ಅಥವಾ ಉಂಗುರದಲ್ಲಿ ‘ಪಚ್ಚೆ’ಯ ಹರಳನ್ನು ಧರಿಸುವುದು ಶುಭಕರವಾಗಿದೆ.

ಪುಷ್ಯ, ಉತ್ತರಭಾದ್ರ ಮತ್ತು ಅನುರಾಧಾ ನಕ್ಷತ್ರ: ಇವರು ‘ನೀಲ’ ರತ್ನವನ್ನು ಧರಿಸುವುದರಿಂದ ಶುಭಫಲ ಪಡೆಯಲಿದ್ದಾರೆ.

ಕೃತಿಕಾ, ಉತ್ತರಶಾಡ ಮತ್ತು ಉತ್ತರ ನಕ್ಷತ್ರ: ಕೆಂಪು ಬಣ್ಣದ ‘ಹವಳ’ ಧರಿಸುವುದು ಈ ನಕ್ಷತ್ರದವರಿಗೆ ಶುಭಫಲ ತಂದುಕೊಡಲಿದೆ.

ಭರಣಿ, ಪೂರ್ವಾಷಾಡ ಮತ್ತು ಪೂರ್ವ ಫಲ್ಗುಣಿ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರು ‘ವಜ್ರ’ದಿಂದ ತಯಾರಿಸಿದ ಆಭರಣ ಅಥವಾ ವಜ್ರದ ಹರಳನ್ನು ಧರಿಸುವುದು ಶುಭಕರವಾಗಿದೆ.

.ಜ್ಯೋತಿಷ | ತಾಂಬೂಲಕ್ಕೆ ಮಾತ್ರವಲ್ಲ, ಪೂಜೆಗೂ ಬೇಕು ವೀಳ್ಯದೆಲೆ: ಯಾಕೆ ಗೊತ್ತಾ?.

ಆರಿದ್ರಾ, ಸ್ವಾತಿ ಮತ್ತು ಶತಭಿಷಾ ನಕ್ಷತ್ರ: ಈ ನಕ್ಷತ್ರದಲ್ಲಿ ಜನಿಸಿದವರು ‘ಗೋಮೇಧಿಕ’ ರತ್ನವನ್ನು ಧರಿಸುವುದು ಶುಭಕರವಾಗಿದೆ.

ಮೃಗಶಿರ, ಚಿತ್ತಮತ್ತು ಧನಿಷ್ಠ ನಕ್ಷತ್ರ: ಈ ರಾಶಿಯವರು ‘ಹವಳ’ವನ್ನು ಧರಿಸಬೇಕು. ಹವಳದ ಹರಳಿರುವ ಆಭರಣಗಳನ್ನು ಧರಿಸುವುದು ಉತ್ತಮ.

ರೋಹಿಣಿ, ಶ್ರಾವಣ ಮತ್ತು ಹಸ್ತಾ ನಕ್ಷತ್ರ: ಮುತ್ತಿನಿಂದ ತಯಾರಿಸಿದ ಆಭರಣ ಅಥವಾ ‘ಮುತ್ತಿನ’ ಹರಳಿರುವ ಉಂಗುರವನ್ನು ಧರಿಸುವುದರಿಂದ ಶುಭಫಲ ನಿಮ್ಮದಾಗಲಿದೆ.

ಜನ್ಮ ನಕ್ಷತ್ರಕ್ಕೆ ಅನುಸಾರವಾಗಿ ಈ ರತ್ನಗಳು ಅಥವಾ ಇವುಗಳಿಂದ ತಯಾರಿಸಿದ ಉಂಗುರಗಳನ್ನು ಧರಿಸಿದರೆ, ಜಾತಕದ ದೋಷ ಹಾಗೂ ನವಗ್ರಹ ದೋಷಗಳು ದೂರವಾಗುತ್ತವೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.