ಶುಕ್ರವಾರ, ಏಪ್ರಿಲ್ 16, 2021
22 °C

ಹೊಸ ಬಿಎಂಡಬ್ಲ್ಯು 6 ಸಿರೀಸ್‌ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐಷಾರಾಮಿ ಕಾರುಗಳನ್ನು ತಯಾರಿಸುವ ಬಿಎಂಡಬ್ಲ್ಯು ಇಂಡಿಯಾ ಕಂಪನಿಯು ತನ್ನ 6ನೇ ಸಿರೀಸ್‌ ಸೆಡಾನ್‌ನ ಸುಧಾರಿತ ಆವೃತ್ತಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ₹ 67.9 ಲಕ್ಷ ಇದೆ (ಎಕ್ಸ್ ಷೋರೂಂ).

ಪೆಟ್ರೋಲ್‌ ಎಂಜಿನ್‌ನ 630ಐ ಎಂ ಸ್ಪೋರ್ಟ್‌ ಬೆಲೆ ₹ 67.9 ಲಕ್ಷ ಇದೆ. ಡೀಸೆಲ್ ಟ್ರಿಮ್‌ 630ಡಿ ಎಂ ಸ್ಪೋರ್ಟ್‌ ಬೆಲೆ ₹ 68.9 ಲಕ್ಷದಿಂದ ಆರಂಂಭವಾಗಲಿದೆ ಎಂದು ಕಂಪನಿ ತಿಳಿಸಿದೆ.

ಅತ್ಯುತ್ತಮವಾದ ಐಷಾರಾಮಿ ಮತ್ತು ಆರಾಮದಾಯಕ ಸೌಕರ್ಯಗಳನ್ನು ನಿರೀಕ್ಷಿಸುವವರ ಆಯ್ಕೆಯ ವಾಹನ ಇದಾಗಿದೆ ಎಂದು ಬಿಎಂಡ‌ಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಂ ಪವ್ಹಾ ತಿಳಿಸಿದ್ದಾರೆ.

6 ಸಿರೀಸ್‌ನ ಸೆಡಾನ್‌ ಎಂಟು ಗಿಯರ್‌ಗಳ ಆಟೊಮ್ಯಾಟಿಕ್‌ ಟ್ರಾನ್ಸ್‌ಮಿಷನ್‌ ಹಾಗೂ ಏರ್ ಸಸ್ಪೆನ್ಶನ್‌ ಸೇರಿದಂತೆ ಹಲವು ಐಷಾರಾಮಿ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಕಂಪನಿ ತಿಳಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು