ಭಾನುವಾರ, ಆಗಸ್ಟ್ 1, 2021
26 °C

ಷೇರು ಸಂಬಂಧಿತ ಎಂಎಫ್‌ ಒಳಹರಿವು ಮೇನಲ್ಲಿ 5 ತಿಂಗಳ ಕನಿಷ್ಠ ಮಟ್ಟಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಷೇರು ಸಂಬಂಧಿತ ಮ್ಯೂಚುವಲ್ ಫಂಡ್‌ಗಳಲ್ಲಿ‌ (ಎಂಎಫ್‌) ಬಂಡವಾಳ ಹೂಡಿಕೆಯು ಮೇ ತಿಂಗಳಿನಲ್ಲಿ 5 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದೆ.

ಮೇನಲ್ಲಿ ₹ 5,256 ಕೋಟಿ ಹೂಡಿಕೆಯಾಗಿದೆ. ಏಪ್ರಿಲ್‌ನಲ್ಲಿನ ಹೂಡಿಕೆ ₹ 6,213 ಕೋಟಿ ಇತ್ತು.

ಮ್ಯೂಚುವಲ್ ಫಂಡ್‌ ಉದ್ಯಮದಲ್ಲಿನ ಒಟ್ಟಾರೆ ಹೂಡಿಕೆಯು ಮೇನಲ್ಲಿ ₹ 70,813 ಕೋಟಿಗಳಷ್ಟಾಗಿದೆ. ಏಪ್ರಿಲ್‌ನಲ್ಲಿ ₹ 45,999 ಕೋಟಿ ಇತ್ತು.

ಲಾಕ್‌ಡೌನ್‌ ಇದ್ದರೂ ವ್ಯವಸ್ಥಿತ ಹೂಡಿಕೆ ಯೋಜನೆ (ಸಿಪ್‌) ಮೂಲಕ ತಿಂಗಳ ಬಂಡವಾಳ ಹೂಡಿಕೆ ₹ 8 ಸಾವಿರ ಕೋಟಿಯ ಗಡಿ ದಾಟಿದೆ. ಮೇನಲ್ಲಿ ₹ 8,123 ಕೋಟಿ ಹೂಡಿಕೆಯಾಗಿದೆ. 2019–20ರಲ್ಲಿ ತಿಂಗಳ ಹೂಡಿಕೆಯು ₹ 8,100 ಕೋಟಿಗಳಿಂದ ₹ 8,600 ಕೋಟಿಯ ಒಳಗಿತ್ತು.

ಚಿನ್ನದ ವಿನಿಮಯ ವಹಿವಾಟು ನಿಧಿಯಲ್ಲಿ (ಇಟಿಎಫ್‌) ₹ 815 ಕೋಟಿ ಹೂಡಿಕೆಯಾಗಿದೆ. ಏಪ್ರಿಲ್‌ನಲ್ಲಿ ₹ 731 ಕೋಟಿ ಹೂಡಿಕೆಯಾಗಿತ್ತು.

ಎಂಎಫ್‌ ನಿರ್ವಹಣಾ ಸಂಪತ್ತು
₹ 24.55 ಲಕ್ಷ ಕೋಟಿ: 
ಮೇ ಅಂತ್ಯಕ್ಕೆ
₹ 23.93 ಲಕ್ಷ ಕೋಟಿ: ಏಪ್ರಿಲ್‌ ಅಂತ್ಯಕ್ಕೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು