ಬುಧವಾರ, ಫೆಬ್ರವರಿ 8, 2023
16 °C

ಹಾಸನ, ಮಂಡ್ಯ ಸೇರಿ 50 ನಗರಗಳಲ್ಲಿ ಇಂದಿನಿಂದ ಜಿಯೊ 5ಜಿ ಸೇವೆ ಪ್ರಾರಂಭ 

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕರ್ನಾಟಕದ ಹಾಸನ, ಮಂಡ್ಯ ಸೇರಿದಂತೆ ದೇಶದ 50 ನಗರಗಳಲ್ಲಿ ಇಂದಿನಿಂದ (ಮಂಗಳವಾರ) 5ಜಿ ಸೇವೆಗಳನ್ನು ಆರಂಭಿಸಲಾಗಿದೆ ಎಂದು ರಿಲಯನ್ಸ್ ಜಿಯೊ ತಿಳಿಸಿದೆ. 

ಹೊಸದಾಗಿ ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ ಎಂದು ಕಂಪನಿ ಹೇಳಿದೆ. 

ಕರ್ನಾಟಕ, ಆಂಧ್ರ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಹರಿಯಾಣ, ಜಾರ್ಖಂಡ್, ಪುದುಚೇರಿ ಮತ್ತು ಕೇರಳದಲ್ಲಿ 5ಜಿ ಸೇವೆ ವಿಸ್ತರಿಸಲಾಗಿದೆ ಎಂದು ಕಂಪನಿ ತಿಳಿಸಿದೆ. 

ಇದರೊಂದಿಗೆ ದೇಶದಲ್ಲಿ 17 ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳ 184 ನಗರಗಳಲ್ಲಿ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ. 

ಇಂದಿನಿಂದ ಪ್ರಾರಂಭವಾಗುವ 5ಜಿ ಸೇವೆ ಯಾವುದೇ ಹೆಚ್ಚುವರಿ ಶುಲ್ಕ ಇರುವುದಿಲ್ಲ. ಜತೆಗೆ ಗ್ರಾಹಕರು ಅನಿಯಮಿತ ಡೇಟಾವನ್ನು ಪಡೆಯಬಹುದಾಗಿದೆ. 

ಆಂಧ್ರ ಪ್ರದೇಶದ ಚಿತ್ತೂರು, ಓಂಗೋಲ್, ಕಡಪ, ಅಸ್ಸಾಂನ ನಾಗಾನ್, ಛತ್ತೀಸ್‌ಗಢದ ಬಿಲಾಸ್ಪುರ್, ಕೊರ್ಬಾ, ಗೋವಾದ ಪಣಜಿ, ಹರಿಯಾಣದ ಅಂಬಾಲಾ, ಹಿಸಾರ್, ಕರ್ನಾಲ್, ಪಾಣಿಪತ್, ರೋಹ್ಟಕ್, ಕರ್ನಾಟಕದ ಹಾಸನ, ಮಂಡ್ಯ ಜಿಲ್ಲೆಯ ಗ್ರಾಹಕರಿಗೆ 5ಜಿ ಸೇವೆ ಲಭ್ಯವಾಗಿದೆ. 

ಓದಿ... ವಿಡಿಯೊ | ಕುರ್ಚಿ ತರಲು ವಿಳಂಬ: ಕಾರ್ಯಕರ್ತರ ಮೇಲೆ ಕಲ್ಲು ತೂರಿದ ತಮಿಳುನಾಡು ಸಚಿವ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು