ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಬಿಐ ರೆಪೊ ದರ ಏರಿಕೆ: ಇನ್ನಷ್ಟು ಹೆಚ್ಚಾಗಲಿದೆ ಬ್ಯಾಂಕ್ ಸಾಲಗಳ ಇಎಂಐ ದರ

ಅಕ್ಷರ ಗಾತ್ರ

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಮತ್ತೊಮ್ಮೆ ರೆಪೊ ದರ ಹೆಚ್ಚಿಸಿರುವುದು ಗೃಹ ಮತ್ತು ಇತರ ಸಾಲಗಳ ಇಎಂಐ ಮೇಲೆಯೂ ಪರಿಣಾಮ ಬೀರಲಿದೆ. ವಿವಿಧ ಬ್ಯಾಂಕ್‌ಗಳ ಬಡ್ಡಿ ದರವೂ ಹೆಚ್ಚಾಗುವ ಸಾಧ್ಯತೆ ಇದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ಹಣಕಾಸು ನೀತಿ ಬಿಡುಗಡೆ ಮಾಡಿ, ರೆಪೊ ದರವನ್ನು ಶೇ 0.50ರಷ್ಟು ಹೆಚ್ಚಿಸುತ್ತಿರುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಪರಿಷ್ಕೃತ ರೆಪೊ ದರ ಶೇ 4.90 ಆಗಿದೆ.

ಮೇ 4ರಂದು ಸಹ ಆರ್‌ಬಿಐ ರೆಪೊ ದರವನ್ನು ಶೇ 0.40 ರಷ್ಟು ಹೆಚ್ಚಿಸಿತ್ತು.

ದೇಶದ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐಯಿಂದ ಪಡೆಯುವ ಸಾಲದ ಬಡ್ಡಿ ದರವೇ ರೆಪೊ ದರ. ಹೀಗಾಗಿ, ಆರ್‌ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕುಗಳು ಸಹ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಮೇ 4ರಂದು ರೆಪೊ ದರ ಹೆಚ್ಚಳವಾದ ಬೆನ್ನಲ್ಲೇ ಹಲವು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಬಡ್ಡಿ ದರ ಹೆಚ್ಚಳ ಮಾಡಿದ್ದವು.

ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಮೇ 5ರಂದೇ ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದವು. ಐಸಿಐಸಿಐ ಬ್ಯಾಂಕ್‌ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್ ರೇಟ್‌ (ಇಬಿಎಲ್‌ಆರ್‌) ಅನ್ನು ಶೇ 8.10ಕ್ಕೆ ಹೆಚ್ಚಿಸಿದ್ದರೆ, ಬ್ಯಾಂಕ್‌ ಆಫ್‌ ಬರೋಡಾ ಸಾಲದ ಮೇಲಿನ ಬಡ್ಡಿದರವನ್ನು ಅನ್ನು ಶೇ 6.90ಕ್ಕೆ ಏರಿಕೆ ಮಾಡಿತ್ತು.

ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಎಚ್‌ಡಿಎಫ್‌ಸಿ ಸಾಲದ ಮೇಲಿನ ಬಡ್ಡಿದರವನ್ನು ಜೂನ್ 7ರಂದು ಶೇ 0.35ರಷ್ಟು ಹೆಚ್ಚಳ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT