ಸೋಮವಾರ, ಆಗಸ್ಟ್ 3, 2020
23 °C
9 ದಿನಗಳ ಇಳಿಮುಖ ವಹಿವಾಟು ಅಂತ್ಯ

ಸೂಚ್ಯಂಕ 404 ಅಂಶ ಗಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಷೇರುಪೇಟೆಗಳು 9 ದಿನಗಳ ಇಳಿಮುಖ ವಹಿವಾಟಿನಿಂದ ಬುಧವಾರ ಹೊರಬಂದಿವೆ. 

ಅಮೆರಿಕ–ಚೀನಾದ ಮಾತುಕತೆಯಲ್ಲಿ ಸಕಾರಾತ್ಮಕ ಫಲಿತಾಂಶ ಹೊರಬೀಳುವ ನಿರೀಕ್ಷೆಯನ್ನು ಹೂಡಿಕೆದಾರರು ಹೊಂದಿದ್ದಾರೆ. ಇದರಿಂದಾಗಿ ಜಾಗತಿಕ ಷೇರುಪೇಟೆಗಳಲ್ಲಿ ಉತ್ತಮ ವಹಿವಾಟು ನಡೆದು, ಭಾರತದ ಮೇಲೆಯೂ ಅದರ ಪ್ರಭಾವ ಕಂಡುಬಂದಿತು.

ಲೋಹ, ಐ.ಟಿ ಮತ್ತು ಬ್ಯಾಂಕಿಂಗ್‌ ಷೇರುಗಳು ಗಳಿಕೆ ಹಾದಿಗೆ ಮರಳಿದವು. ವೇದಾಂತ ಶೇ 4.67ರಷ್ಟು ಗರಿಷ್ಠ ಏರಿಕೆ ಕಂಡಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು (ಬಿಎಸ್‌ಇ) ದಿನದ ವಹಿವಾಟಿನಲ್ಲಿ ಸಕಾರಾತ್ಮಕ ಮಟ್ಟದಲ್ಲಿಯೇ ಇತ್ತು. 404 ಅಂಶಗಳ ಏರಿಕೆಯೊಂದಿಗೆ 35,756 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರು‍ಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ, 131 ಅಂಶ ಹೆಚ್ಚಾಗಿ 10,735 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಸಂಪತ್ತು ವೃದ್ಧಿ: ಸೂಚ್ಯಂಕದ ಏರಿಕೆಯಿಂದ ಹೂಡಿಕೆದಾರರ ಸಂಪತ್ತು, ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು ₹ 1.78 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಷೇರುಪೇಟೆಯ ಬಂಡವಾಳ ಮೌಲ್ಯ ₹ 137.78 ಲಕ್ಷ ಕೋಟಿಗೆ ತಲುಪಿದೆ.

ರೂಪಾಯಿ: ಕರೆನ್ಸಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 23 ಪೈಸೆ ಹೆಚ್ಚಾಗಿ ಒಂದು ಡಾಲರ್‌ಗೆ ₹ 71.11ರಂತೆ ಮಾರಾಟವಾಯಿತು.

ಬ್ರೆಂಟ್‌ ಕಚ್ಚಾ ತೈಲ ಬೆಲೆ ಶೇ 0.56ರಷ್ಟು ಕಡಿಮೆಯಾಗಿ ಒಂದು ಬ್ಯಾರೆಲ್‌ಗೆ 66.08 ಡಾಲರ್‌ಗಳಿಗೆ ತಲುಪಿತು.

ವಹಿವಾಟಿನ ವಿವರ
1,623 ಅಂಶ: 9 ವಹಿವಾಟು ಅವಧಿಗಳಲ್ಲಿ ಸೂಚ್ಯಂಕದ ಇಳಿಕೆ
465 ಅಂಶ: 9 ವಹಿವಾಟು ಅವಧಿಗಳಲ್ಲಿ ನಿಫ್ಟಿ ಇಳಿಕೆ
₹ 713 ಕೋಟಿ:ವಿದೇಶಿ ಸಾಂಸ್ಥಿಕ ಹೂಡಿಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು