ಸಾಧಾರಣ ಗಳಿಕೆ ಕೊಡುತ್ತಿದ್ದ ಮ್ಯೂಚುವಲ್ ಫಂಡ್ವೊಂದರಲ್ಲಿ ಮೂರು ತಿಂಗಳ ಹಿಂದೆ ನೀವು ₹1 ಲಕ್ಷ ಹೂಡಿಕೆ ಮಾಡಿದ್ದರೆ ಅದು ಇವತ್ತಿಗೆ ಸುಮಾರು ₹93 ಸಾವಿರಕ್ಕೆ ಇಳಿಕೆಯಾಗಿರುತ್ತಿತ್ತು. ಹೌದು, ಕಳೆದ ಮೂರು ತಿಂಗಳಲ್ಲಿ ಎಲ್ಲಾ ಈಕ್ವಿಟಿ ಮ್ಯೂಚುವಲ್ ಫಂಡ್ಗಳು ಸಹ ಶೇ 7ರಿಂದ ಶೇ 13ರವರೆಗೂ ಕುಸಿತ ಕಂಡಿವೆ. ಆರು ತಿಂಗಳ ಅಂಕಿ – ಅಂಶ ನೋಡಿದಾಗಲೂ ಮಾರುಕಟ್ಟೆಯಲ್ಲಿ ಶೇ 5ರಿಂದ ಶೇ 10ರಷ್ಟು ಇಳಿಕೆಯಾಗಿರುವುದು ಕಂಡು ಬರುತ್ತದೆ. ಷೇರು ಮಾರುಕಟ್ಟೆಯ ಸೂಚ್ಯಂಕಗಳ ಗಣನೀಯ ಕುಸಿತವೇ ಈ ಸಮಸ್ಯೆಗೆ ಮೂಲ ಕಾರಣವಾಗಿದೆ. ಷೇರುಪೇಟೆ ಸೂಚ್ಯಂಕ ನಿಫ್ಟಿ, ಕಳೆದ ಮೂರು ತಿಂಗಳ ಅವಧಿಯಲ್ಲಿ ಅಂದಾಜು ಶೇ 8ರಷ್ಟು ಕುಸಿತ ದಾಖಲಿಸಿದೆ. 2024ರ ಸೆಪ್ಟೆಂಬರ್ನಿಂದ ಲೆಕ್ಕಾಚಾರ ತೆಗೆದುಕೊಂಡರೆ ಈವರೆಗೆ ನಿಫ್ಟಿ ಸೂಚ್ಯಂಕ ಶೇ 11ಕ್ಕಿಂತ ಹೆಚ್ಚು ಇಳಿಕೆ ಕಂಡಿದೆ. ಆದರೆ ಅಸಲಿಗೆ ಸ್ಟಾಕ್ ಮಾರ್ಕೆಟ್ ಕುಸಿತಕ್ಕೆ ಕಾರಣವೇನು? ಮಾರುಕಟ್ಟೆ ನಕಾರಾತ್ಮಕ ಹಾದಿಯಲ್ಲಿರುವಾಗ ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಗಳನ್ನು ನಿಲ್ಲಿಸಬೇಕಾ? ಬನ್ನಿ, ಪ್ರಸ್ತುತ ಲಕ್ಷಾಂತರ ಹೂಡಿಕೆದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳೋಣ.

ಷೇರು ಮಾರುಕಟ್ಟೆ ಕುಸಿತಕ್ಕೆ ಕಾರಣವೇನು? ಷೇರುಪೇಟೆ ಕುಸಿತಕ್ಕೆ ಅನೇಕ ಜಾಗತಿಕ ಮತ್ತು ದೇಶೀಯ ವಿದ್ಯಮಾನಗಳು ಕಾರಣವಾಗಿವೆ. ಈಗ ಒಂದೊಂದೇ ಅಂಶಗಳನ್ನು ವಿವರವಾಗಿ ವಿಶ್ಲೇಷಣೆ ಮಾಡೋಣ.

ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ:

ಭಾರತೀಯ ಷೇರು ಮಾರುಕಟ್ಟೆಯು ದೇಶೀಯ ಹೂಡಿಕೆದಾರರು ಮತ್ತು ವಿದೇಶಿ ಹೂಡಿಕೆದಾರ ಮೇಲೆ ಅವಲಂಬಿತವಾಗಿದೆ. ಭಾರತೀಯ ಷೇರು ಮಾರುಕಟ್ಟೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮೊತ್ತದ ಹೂಡಿಕೆ ಹಣವನ್ನು ಇತ್ತೀಚೆಗೆ ಹಿಂತೆಗೆದುಕೊಂಡಿದ್ದಾರೆ. ಜನವರಿ ತಿಂಗಳಲ್ಲಿ ಈ ವರೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹64,154 ಕೋಟಿ ಹಿಂತೆಗೆದುಕೊಂಡಿದ್ದಾರೆ.

ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ:

ಅಮೆರಿಕ ಫೆಡರಲ್ ಬ್ಯಾಂಕ್ ಬಡ್ಡಿ ದರಗಳನ್ನು ಕಡಿತಗೊಳಿಸಿದರೆ ಅದರ ಅನುಕೂಲ ಭಾರತೀಯ ಷೇರುಪೇಟೆಗೆ ಆಗುತ್ತದೆ. ಆದರೆ ಡಿಸೆಂಬರ್ನಲ್ಲಿ ಅಮೆರಿಕದಲ್ಲಿ ಉದ್ಯೋಗ ಬೆಳವಣಿಗೆ ದರ ಉತ್ತಮಗೊಂಡಿರುವುದರಿಂದ ಬಡ್ಡಿ ದರ ಇಳಿಕೆ ನಿರ್ಧಾರವನ್ನು ಅಮೆರಿಕ ಫೆಡರಲ್ ಬ್ಯಾಂಕ್ ಮುಂದೂಡುವ ಸಾಧ್ಯತೆಯಿದೆ. ಬಡ್ಡಿ ದರ ಇಳಿಕೆ ಮಾಡದೆ ಇದ್ದಾಗ ಅಮೆರಿಕ ಡಾಲರ್ ಬಲಗೊಳ್ಳುತ್ತದೆ. ಭಾರತದ ರೂಪಾಯಿಯ ಮೌಲ್ಯ ಕುಸಿತವಾಗುತ್ತದೆ. ಇಂತಹ ಸಂದರ್ಭದಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರತೀಯ ಷೇರುಪೇಟೆಯಿಂದ ಹೊರ ನಡೆಯುತ್ತಾರೆ.

ಮಂದಗತಿಯ ಆರ್ಥಿಕ ಬೆಳವಣಿಗೆ:

2025ರ ಜಿಡಿಪಿ ಬೆಳವಣಿಗೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಶೇ 6.6ಕ್ಕೆ ಇಳಿಕೆ ಮಾಡಿದೆ. ಭಾರತದ ಆರ್ಥಿಕ ಸಮೀಕ್ಷೆಯಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 7ರಷ್ಟಿರಲಿದೆ ಎಂದು ಅಂದಾಜು ಮಾಡಲಾಗಿತ್ತು. ಜಿಡಿಪಿ ಹೆಚ್ಚಳವಾದರ ಆರ್ಥಿಕ ಬೆಳವಣಿಗೆಯಾಗಿ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚುತ್ತದೆ. ಆದರೆ ಜಿಡಿಪಿ ಕುಸಿತವಾದರೆ ವಸ್ತುಗಳು ಮತ್ತು ಸೇವೆಗಳಿಗೆ ಬೇಡಿಕೆ ಕುಸಿದು ಆರ್ಥಿಕತೆ ಕುಂಠಿತವಾಗುತ್ತದೆ.

ಆಂತರಿಕ ಮೌಲ್ಯಕ್ಕಿಂತ ಹೆಚ್ಚಳವಾದ ಷೇರಿನ ಬೆಲೆ:

ಒಂದು ಷೇರಿನ ಬೆಲೆ ಜಾಸ್ತಿ ಇದೆಯಾ, ಕಡಿಮೆ ಇದೆಯಾ ಅಥವಾ ಅತಿಯಾಗಿ ಬೆಲೆ ಏರಿಕೆಯಾಗಿದೆಯಾ ಎಂಬುದನ್ನು ಹೂಡಿಕೆದಾರರು ಗಮನಿಸುತ್ತಾರೆ. ಒಂದು ಷೇರಿನ ಬೆಲೆ ಅದರ ಆಂತರಿಕ ಮೌಲ್ಯಕ್ಕಿಂತ ವಿಪರೀತ ಜಾಸ್ತಿಯಾದರೆ ಒಂದು ಹಂತದಲ್ಲಿ ಆ ಷೇರಿನ ಬೆಲೆ ಕುಸಿತ ಕಾಣಲು ಶುರುವಾಗುತ್ತದೆ. ಈಗ ಮಾರುಕಟ್ಟೆಯಲ್ಲಿ ಇಂತಹ ಸನ್ನಿವೇಶವಿದೆ.

ತೈಲ ಬೆಲೆ ಹೆಚ್ಚಳ:

ತೈಲ ಬೆಲೆ ಹೆಚ್ಚಳ ಸಹ ಷೇರುಪೇಟೆ ಮೇಲೆ ನೇರ ಪರಿಣಾಮ ಬೀರಲಿದೆ. ಇತ್ತೀಚೆಗೆ, ಒಂದು ಬ್ಯಾರೆಲ್ ಬ್ರೆಂಟ್ ಕಚ್ಚಾ ತೈಲದ ಬೆಲೆ 80 ಡಾಲಗಿಂತಲೂ ಹೆಚ್ಚಾಗಿದೆ. ಪ್ರಸಕ್ತ ವರ್ಷದಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್ಗೆ 85 ಡಾಲರ್ವರೆಗೂ ಹೆಚ್ಚಳವಾಗುವ ಅಂದಾಜು ಇದೆ. ಭಾರತ ತೈಲ ಅವಲಂಬಿತ ರಾಷ್ಟ್ರ. ತೈಲ ಬೆಲೆ ಹೆಚ್ಚಳವಾದಾಗ ಭಾರತದ ತೈಲ ಆಮದು ವೆಚ್ಚವೂ ಏರಿಕೆಯಾಗುತ್ತದೆ. ಇಷ್ಟೇ ಅಲ್ಲದೆ, ತೈಲ ಬೆಲೆ ಹೆಚ್ಚಳ ನೇರವಾಗಿ ಉದ್ಯಮಗಳು ಮತ್ತು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.

ಷೇರುಪೇಟೆ ಕುಸಿತ ಎಸ್ಐಪಿ ಹೂಡಿಕೆ ನಿಲ್ಲಿಸಬೇಕಾ? ನಿಲ್ಲಿಸಿದ್ರೆ ಏನಾಗುತ್ತದೆ?:

ನೀವು ಮ್ಯೂಚುವಲ್ ಫಂಡ್ ಎಸ್ಐಪಿ ಮೂಲಕ ಹೂಡಿಕೆ ಮಾಡಿದಾಗ ಆ ಹೂಡಿಕೆ ಹಣದಿಂದ ಮತ್ತಷ್ಟು ಗಳಿಸಬೇಕು ಎನ್ನುವುದು ನಿಮ್ಮ ಉದ್ದೇಶವಾಗಿರುತ್ತದೆ. ಅಂದರೆ ಮ್ಯೂಚುವಲ್ ಫಂಡ್ ಹೂಡಿಕೆಯಲ್ಲಿ ಹಣ ಹಾಕಿದಾಗ ದೀರ್ಘಾವಧಿಯಲ್ಲಿ ಚಕ್ರಬಡ್ಡಿಯಲ್ಲಿ ಸಿಗುವಂತಹ ಲಾಭ ಲಭಿಸುತ್ತದೆ. ಆದರೆ ಎಸ್ಐಪಿ ಹೂಡಿಕೆ ನಿಲ್ಲಿಸಿದಾಗ ಹಣದ ಬೆಳವಣಿಗೆ ಕುಂಠಿತವಾಗುತ್ತದೆ. ಉದಾಹರಣೆಗೆ ಮುಂದಿನ 20 ವರ್ಷ ಪ್ರತಿ ತಿಂಗಳು ₹15 ಸಾವಿರ ಎಸ್ಐಪಿ ಹೂಡಿಕೆ ಮಾಡಿದರೆ ಒಟ್ಟು ₹36 ಲಕ್ಷ ಹೂಡಿಕೆಯಾಗಿರುತ್ತದೆ. ಈ ಹೂಡಿಕೆ ಮೇಲೆ ಶೇ 12ರಷ್ಟು ಗಳಿಕೆ ಲಾಭ ಸಿಕ್ಕರೆ 20 ವರ್ಷಗಳ ಬಳಿಕ ಒಟ್ಟು ₹1.5 ಕೋಟಿ ನಿಮ್ಮ ಬಳಿ ಇರುತ್ತದೆ. ಒಂದೊಮ್ಮೆ ಈ 20 ವರ್ಷಗಳ ಹೂಡಿಕೆ ಅವಧಿಯಲ್ಲಿ ಪ್ರತಿ ವರ್ಷ ₹15 ಸಾವಿರ ಮೊತ್ತದ ಒಂದು ಎಸ್ಐಪಿಯನ್ನು ತಪ್ಪಿಸುತ್ತೀರಿ ಎಂದುಕೊಳ್ಳಿ. ಆಗ ಎಸ್ಐಪಿಯಲ್ಲಿ ₹36 ಲಕ್ಷದ ಬದಲು ₹33.2 ಲಕ್ಷ ಹೂಡಿಕೆಯಾಗುತ್ತದೆ. ₹1.5 ಕೋಟಿ ರೂಪಾಯಿ ಸಿಗುವ ಜಾಗದಲ್ಲಿ ₹1.1 ಕೋಟಿ ಸಿಗುತ್ತದೆ. ಅಂದರೆ ಎಸ್ಐಪಿ ತಪ್ಪಿಸಿದರ ಪರಿಣಾಮ ₹40 ಲಕ್ಷ ಮೊತ್ತ ಕಡಿಮೆ ಸಿಗುತ್ತದೆ. ಹಾಗಾಗಿ ಎಸ್ಐಪಿ ನಿಲ್ಲಿಸುವುದರಿಂದ ದೀರ್ಘಾವಧಿಯಲ್ಲಿ ಲಾಭಕ್ಕಿಂತ ನಷ್ಟವೇ ಜಾಸ್ತಿ ಎನ್ನುವುದು ಗೊತ್ತಿರಲಿ.

ಎಸ್ಐಪಿ ಹೂಡಿಕೆ ನಿಲ್ಲಿಸಬೇಕೆ? ಅಧ್ಯಯನ ವರದಿ ಹೇಳುವುದೇನು?:

ವೈಟ್ ಓಕ್ ಕ್ಯಾಪಿಟಲ್ ಮ್ಯೂಚುವಲ್ ಫಂಡ್ಸ್ 1994ರಿಂದ 2024ರ ಅವಧಿಯನ್ನು ಗಣನೆಗೆ ತೆಗೆದುಕೊಂಡು ಒಂದು ಅಧ್ಯಯನ ನಡೆಸಿದೆ. ಮಾರುಕಟ್ಟೆ ಅತಿಯಾಗಿ ಹೆಚ್ಚಳ ಕಂಡ ದಿನ ಎಸ್ಐಪಿ ಹೂಡಿಕೆ ಮಾಡಿದರೆ ಏನಾಗುತ್ತದೆ, ಮಾರುಕಟ್ಟೆ ಅತಿಯಾಗಿ ಕುಸಿತ ಕಂಡ ದಿನ ಎಸ್ಐಪಿ ಹೂಡಿಕೆ ಮಾಡಿದರೆ ಏನಾಗುತ್ತದೆ, ಇದ್ಯಾವುದನ್ನೂ ಗಮನಿಸದೆ ಪ್ರತಿ ತಿಂಗಳ 15ರಂದು ಶಿಸ್ತುಬದ್ಧವಾಗಿ ಎಸ್ಐಪಿ ಹೂಡಿಕೆ ಮಾಡುತ್ತಾ ಸಾಗಿದರೆ ಏನಾಗುತ್ತದೆ ಎನ್ನುವ ಬಗ್ಗೆ ವರದಿ ಬೆಳಕು ಚೆಲ್ಲುತ್ತದೆ. ಆ ವರದಿಯ ಪ್ರಕಾರ, ಮಾರುಕಟ್ಟೆ ಅತಿಯಾಗಿ ಹೆಚ್ಚಳ ಕಂಡ ದಿನ ಹೂಡಿಕೆ ಮಾಡಿದವರಿಗೆ ಶೇ 14.5ರಷ್ಟು ಗಳಿಕೆ ಸಿಕ್ಕರೆ, ಮಾರುಕಟ್ಟೆ ಅತಿಯಾಗಿ ಕುಸಿತ ಕಂಡ ದಿನ ಹೂಡಿದವರಿಗೆ ಶೇ 15ರಷ್ಟು ಗಳಿಕೆ ದಕ್ಕಿದೆ. ಇದ್ಯಾವುದನ್ನೂ ಗಮನಿಸದೆ ಪ್ರತಿ ತಿಂಗಳ 15ರಂದು ಶಿಸ್ತುಬದ್ಧವಾಗಿ ಹೂಡಿಕೆ ಮಾಡುತ್ತಾ ಬಂದವರಿಗೆ ಶೇ 14.7ರಷ್ಟು ಗಳಿಕೆ ಲಾಭ ಸಿಕ್ಕಿದೆ. ಅಂದರೆ ದೀರ್ಘಾವಧಿಗೆ ಹೂಡಿಕೆ ಮಾಡುವಾಗ ಶಿಸ್ತುಬದ್ಧವಾಗಿ ಹೂಡಿದರೆ ಗಳಿಕೆಯಲ್ಲಿ ಹೆಚ್ಚು ವ್ಯತ್ಯಾಸವಾಗುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ.

ಕಿವಿಮಾತು:

ಮ್ಯೂಚುವಲ್ ಫಂಡ್ ಎಸ್ಐಪಿ ಹೂಡಿಕೆಗಳು ಮಾರುಕಟ್ಟೆ ಏರಿಳಿತಕ್ಕೆ ಒಳಪಡುತ್ತವೆ. ಆದರೆ ಅಲ್ಪಾವಧಿ ಕುಸಿತಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳಬಾರದು. ದೀರ್ಘಾವಧಿಯ ನೋಟದೊಂದಿಗೆ ಮ್ಯೂಚುವಲ್ ಫಂಡ್ನಲ್ಲಿ ಹೂಡಿಕೆ ಮಾಡಿದರೆ ಲಾಭದ ಸಾಧ್ಯತೆಯೇ ಹೆಚ್ಚು ಎನ್ನುವುದನ್ನು ಹಿಂದಿನ ದತ್ತಾಂಶಗಳು ಹೇಳುತ್ತವೆ. ಹಾಗಾಗಿ ಮಾರುಕಟ್ಟೆ ಕುಸಿತಕ್ಕೆ ಹೆದರಿ ಮ್ಯೂಚುವಲ್ ಫಂಡ್ ಹೂಡಿಕೆಗಳನ್ನು ನಿಲ್ಲಿಸಬೇಡಿ. ನೆನಪಿಡಿ, ಮಾರುಕಟ್ಟೆ ಕುಸಿತದ ಸಂದರ್ಭದಲ್ಲಿ ಹೂಡಿಕೆ ಮಾಡಿದಾಗ ಮ್ಯೂಚುವಲ್ ಫಂಡ್ನಲ್ಲಿ ಕಡಿಮೆ ಬೆಲೆಗೆ ಜಾಸ್ತಿ ಯೂನಿಟ್ಗಳು ಲಭಿಸುತ್ತವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ಅನಿಶ್ಚಿತತೆಯ ನಡುವೆ ಚೇತರಿಕೆ ಕಂಡ ಷೇರುಪೇಟೆ

ಜನವರಿ 31ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಚೇತರಿಸಿಕೊಂಡಿವೆ. 77500 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದಲ್ಲಿ ಶೇ 1.72ರಷ್ಟು ಗಳಿಸಿಕೊಂಡಿದೆ.

23508 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 1.8ರಷ್ಟು ಜಿಗಿದಿದೆ. ಆದರೆ ಒಟ್ಟಾರೆ 2025ರ ಜನವರಿ ತಿಂಗಳನ್ನು ಪರಿಗಣಿಸಿದಾಗ ಷೇರುಪೇಟೆ ಸೂಚ್ಯಂಕಗಳು ಭಾರಿ ಇಳಿಕೆ ದಾಖಲಿಸಿರುವುದು ಕಂಡುಬರುತ್ತದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಧ್ಯಮ ಶೇ 3.84 ಫಾರ್ಮಾ ಶೇ 1.98 ಮಾಹಿತಿ ತಂತ್ರಜ್ಞಾನ ಶೇ 1.98 ಮತ್ತು ಲೋಹ ವಲಯ ಶೇ 0.46ರಷ್ಟು ಕುಸಿತ ಕಂಡಿವೆ. ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 7.94 ಆಟೊ ಶೇ 3.14 ಫೈನಾನ್ಸ್ ಶೇ 3.14 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.67 ಬ್ಯಾಂಕ್ ಶೇ 2.52 ಎನರ್ಜಿ ಶೇ 1.9 ಎಫ್ಎಂಸಿಜಿ ಶೇ 1.11 ಮತ್ತು ಅನಿಲ ಮತ್ತು ತೈಲ ಸೂಚ್ಯಂಕ ಶೇ 1.1ರಷ್ಟು ಗಳಿಸಿಕೊಂಡಿವೆ.

ಇಳಿಕೆ – ಗಳಿಕೆ: ನಿಫ್ಟಿಯಲ್ಲಿ ಸನ್ ಫಾರ್ಮಾ ಶೇ 4.33 ಎಚ್ಸಿಎಲ್ ಟೆಕ್ನಾಲಜೀಸ್ ಶೇ 3.91 ವಿಪ್ರೊ ಶೇ 2.52 ಟೆಕ್ ಮಹೀಂದ್ರ ಶೇ 2.44 ಟಾಟಾ ಮೋಟರ್ಸ್ ಶೇ 2.44 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 2.07 ಅದಾನಿ ಎಂಟರ್ ಪ್ರೈಸಸ್ ಶೇ 1.2 ಟಿಸಿಎಸ್ ಶೇ 1.02 ಏರ್ಟೆಲ್ ಶೇ 0.97 ಬಿಪಿಸಿಎಲ್ ಶೇ 0.78 ಡಾ. ರೆಡ್ಡೀಸ್ ಲ್ಯಾಬ್ಸ್ ಶೇ 0.58 ಮತ್ತು ಐಷರ್ ಮೋಟರ್ಸ್ ಶೇ 0.24ರಷ್ಟು ಕುಸಿದಿವೆ.

ಭಾರತ್ ಎಲೆಕ್ಟ್ರಾನಿಕ್ಸ್ ಶೇ 8.4 ಹೀರೊ ಮೋಟೊಕಾರ್ಪ್ ಶೇ 7.16 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 6.81 ಬಜಾಜ್ ಫೈನಾನ್ಸ್ ಶೇ 6 ಬಜಾಜ್ ಆಟೊ ಶೇ 5.5 ಟ್ರೆಂಟ್ ಶೇ 4.81 ನೆಸ್ಲೆ ಇಂಡಿಯಾ ಶೇ 4.62 ಸಿಪ್ಲಾ ಶೇ 4.51 ಇಂಡಸ್ಇಂಡ್ ಬ್ಯಾಂಕ್ 4.39 ಹಿಂದುಸ್ತಾನ್ ಯುನಿಲಿವರ್ ಶೇ 4.32 ಎಕ್ಸಿಸ್ ಬ್ಯಾಂಕ್ ಶೇ 4.02 ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 3.86ರಷ್ಟು ಗಳಿಸಿಕೊಂಡಿವೆ.

ಮುನ್ನೋಟ:

ಈ ವಾರ ಪವರ್ ಗ್ರಿಡ್ ಡಿವೀಸ್ ಲ್ಯಾಬ್ಸ್ ಆದಿತ್ಯ ಬಿರ್ಲಾ ಕ್ಯಾಪಿಟಲ್ ಟೈಟನ್ ಏಷ್ಯನ್ ಪೇಂಟ್ಸ್ ಟಾಟಾ ಪವರ್ ಗ್ಲಾಂಡ್ ಫಾರ್ಮಾ ಟಾಟಾ ಕೆಮಿಕಲ್ಸ್ ಸಿಂಫನಿ ವಿಆರ್ಎಲ್ ಲಾಜಿಸ್ಟಿಕ್ಸ್ ಏರ್ಟೆಲ್ ಎಸ್ಬಿಐ ಬ್ರಿಟಾನಿಯಾ ಹೀರೊ ಮೋಟೊಕಾರ್ಪ್ ಐಟಿಸಿ ಎಂಆರ್ಎಫ್ ಎಲ್ಐಸಿ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಕೇಂದ್ರ ಬಜೆಟ್ನ ಘೋಷಣೆಗಳು ಆರ್ಬಿಐ ಹಣಕಾಸು ಸಮಿತಿ ಸಭೆಯ ತೀರ್ಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.