ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

BSE Sensex, NIFTY | ಹೊಸ ಎತ್ತರಕ್ಕೆ ಜಿಗಿದ ಷೇರುಪೇಟೆ

Published 19 ಜೂನ್ 2024, 7:01 IST
Last Updated 19 ಜೂನ್ 2024, 7:01 IST
ಅಕ್ಷರ ಗಾತ್ರ

ಮುಂಬೈ: ಜಾಗತಿಕ ಮಾರುಕಟ್ಟೆಯಲ್ಲಿನ ಧನಾತ್ಮಕ ಪರಿಣಾಮ, ಬ್ಯಾಂಕ್ ಷೇರುಗಳ ಖರೀದಿ ಹಾಗೂ ವಿದೇಶಿ ನಿಧಿಯ ಒಳಹರಿವಿನಿಂದಾಗಿ ಷೇರು ಸೂಚ್ಯಂಕಗಳು ಬುಧವಾರ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ತಲುಪಿವೆ.

ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮತ್ತು ರಾಷ್ಟ್ರೀಯ ಷೇರುಪೇಟೆ ನಿಫ್ಟಿ ಹೊಸ ಎತ್ತರಕ್ಕೆ ಜಿಗಿತ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ 280.32 ಅಂಶ ಏರಿಕೆ ಕಂಡು 77,581.46 ಅಂಶಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 72.95 ಅಂಶ ಏರಿಕೆಯಾಗಿ 23,630.85 ಅಂಶಕ್ಕೆ ತಲುಪಿದೆ.

ಇಂಡಸ್‌ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಜೆಎಸ್‌ಡಬ್ಲ್ಯು ಸ್ಟೀಲ್, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹೀಂದ್ರ ಬ್ಯಾಂಕ್, ಇನ್ಫೋಸಿಸ್, ಟಾಟಾ ಕನ್ಸಲ್ಟನ್ಸಿ ಸರ್ವಿಸಸ್‌ (ಟಿಸಿಎಸ್‌) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಹೆಚ್ಚಿನ ಲಾಭ ಕಂಡಿವೆ.

ಟೈಟಾನ್, ಎನ್‌ಟಿಪಿಸಿ, ಪವರ್ ಗ್ರಿಡ್ ಮತ್ತು ಬಜಾಜ್ ಫಿನಾನ್ಸ್ ಕುಸಿತ ಕಂಡಿವೆ.

ಏಷ್ಯಾದ ಪೈಕಿ ಸಿಯೋಲ್, ಟೊಕಿಯೊ ಹಾಗೂ ಹಾಂಕಾಂಗ್ ಷೇರು ಮಾರುಕಟ್ಟೆಗಳು ಏರಿಕೆ ಕಂಡಿದ್ದು, ಶಾಂಘೈ ಕುಸಿತ ಕಂಡಿದೆ. ಮಂಗಳವಾರದ ವಹಿವಾಟಿನ ಅಂತ್ಯದ ಅಮೆರಿಕ ಷೇರುಪೇಟೆ ಏರಿಕೆ ಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT