ಶನಿವಾರ, ಜುಲೈ 31, 2021
21 °C

ವಾರ ಭವಿಷ್ಯ | 19-7-2020ರಿಂದ 25-7-2020ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ
ಸಂಪರ್ಕ: 8197304680

ಮೇಷ ರಾಶಿ(ಅಶ್ವಿನಿ ಭರಣಿ ಕೃತಿಕ 1)
ಕೆಲವೊಂದು ಜಂಜಾಟಗಳಿಗೆ ಅಂತ್ಯ ಹಾಡಲು ಯತ್ನಿಸುವಿರಿ. ಯಾರದೇ ಜಗಳ ಬಿಡಿಸಲು ಮಧ್ಯ ಪ್ರವೇಶಿಸಬೇಡಿ, ಅದರಿಂದ ನಿಮಗೆ ತೊಂದರೆ ಆಗಬಹುದು. ಹಣದ ತೊಂದರೆ ಅಷ್ಟು ಇರುವುದಿಲ್ಲ, ಆದರೆ ಧೈರ್ಯ ಕಡಿಮೆ ಇರುತ್ತದೆ. ನಿಮ್ಮ ಕೆಲವು ಕೆಲಸ ಕಾರ್ಯಗಳು ವೇಗ ಕಳೆದುಕೊಂಡಂತೆ ಅನಿಸಿದರೂ ಕೆಲಸಗಳು ಸಾಗುತ್ತವೆ, ಅದಕ್ಕಾಗಿ ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ. ಸರ್ಕಾರಿ ಮಟ್ಟದ ಮಾತುಕತೆಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಒಡವೆ ವ್ಯಾಪಾರಿಗಳಿಗೆ ನಿಧಾನವಾಗಿ ಬಾಕಿ ವಸೂಲು ಆಗುತ್ತದೆ. ವೃತ್ತಿಯಲ್ಲಿ ಗೌರವ ಹೆಚ್ಚುತ್ತದೆ.

ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಕುಟುಂಬ ಸಂತೋಷಕ್ಕೆ ಪ್ರಾಮುಖ್ಯತೆ ಕೊಡುವಿರಿ. ಕೈಕೆಳಗಿನ ಕೆಲಸಗಾರರನ್ನು ಅನುಮಾನಿಸಬೇಡಿ, ಹಾಗೆ ಮಾಡಿದಲ್ಲಿ ಆಗುವ ಕೆಲಸಗಳು ನಿಧಾನವಾಗುತ್ತವೆ. ಕೂಡಿಟ್ಟ ಹಣ ಖರ್ಚಾಗುತ್ತದೆ, ಖರ್ಚಿಗೆ ಕಡಿವಾಣ ಇರಲಿ. ಬಂಧುಗಳ ವ್ಯಾಜ್ಯದಲ್ಲಿ ಅತಿ ಭಾವುಕತೆ ಬೇಡ, ಅದು ನಿಮ್ಮ ಸೋಲಿಗೆ ದಾರಿಯಾಗಬಹುದು. ಕೃಷಿಕರಿಗೆ ಉತ್ತಮ ಬೆಳೆಯ ಭಾಗ್ಯವಿದೆ. ಕಬ್ಬಿಣದ ವ್ಯಾಪಾರ ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಮಕ್ಕಳಿಂದ ಧನಸಹಾಯ ಒದಗುತ್ತದೆ. ಸ್ವಂತ ಆರೋಗ್ಯದ ಕಡೆಗೆ ಗಮನವಿರಲಿ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಹಣದ ಸ್ಥಿತಿ ಸುಧಾರಿಸಲಿದೆ. ಸ್ನೇಹಿತರಿಗೆ ಸಹಾಯ ಮಾಡುವಾಗ ನೀವು ಸಾಲಕ್ಕೆ ಸಿಲುಕದಂತೆ ಎಚ್ಚರವಿರಲಿ. ವಿದ್ಯಾರ್ಥಿಗಳಿಗೆ ಸ್ವಲ್ಪ ಹೆಚ್ಚಿನ ಯಶಸ್ಸು ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಹಿತಶತ್ರುಗಳು ಹೆಚ್ಚಾಗಬಹುದು. ಸ್ವಂತ ಮನೆ ಹೊಂದಲು ಇಚ್ಚಿಸುವವರು ಅದಕ್ಕೆ ಸರಿಯಾದ ತಯಾರಿ ಮಾಡಿಕೊಳ್ಳಿ. ಪ್ರಯಾಣದಲ್ಲಿ ಸ್ವಲ್ಪ ಎಚ್ಚರ ವಹಿಸಿ. ಒರಟು ಮಾತಿನಿಂದ ವ್ಯವಹಾರಗಳಲ್ಲಿ ಮುಸುಕಿನ ಗುದ್ದಾಟ ಬಂದರೂ ಶಾಂತಿಯಿಂದ ಪರಿಹರಿಸಿಕೊಳ್ಳುವುದು ಉತ್ತಮ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಸಮಾಜದಲ್ಲಿ ನಿಮಗೆ ಗೌರವಾದರಗಳು ಹೆಚ್ಚುತ್ತವೆ. ಈ ಸಂದರ್ಭದಲ್ಲಿ ಸುಳ್ಳು ನುಡಿಯುವವರ ಒಡನಾಟ ಆಗಬಹುದು ಅಂಥವರ ಬಗ್ಗೆ ಎಚ್ಚರದಿಂದಿರಿ. ದೀರ್ಘಕಾಲದಿಂದ ನರಳುತ್ತಿರುವವರ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯ ವಾತಾವರಣ ಕಾಣಬಹುದು. ಉದರಕ್ಕೆ ಸಂಬಂಧಿಸಿದ ವ್ಯತ್ಯಾಸಗಳು ಇದ್ದಲ್ಲಿ ವೈದ್ಯಕೀಯ ಪರೀಕ್ಷೆ ಅಗತ್ಯ. ಬೆಲೆಬಾಳುವ ಲೋಹದ ವಸ್ತುಗಳನ್ನು ಮಾಡುವವರಿಗೆ ವ್ಯವಹಾರ ವೃದ್ಧಿಸುತ್ತದೆ. ಪಾರಂಪರಿಕ ಕೃಷಿಯಲ್ಲಿ ವಿಶೇಷ ಆಸಕ್ತಿ ಮೂಡುತ್ತದೆ. ಸಂಸಾರದಲ್ಲಿ ಇದ್ದ ಬಿಗುವಿನ ವಾತಾವರಣ ದೂರವಾಗುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ದೈಹಿಕವಾಗಿ ಮತ್ತು ಮಾನಸಿಕವಾಗಿ ದೃಢತೆ ಇದ್ದರೂ ಸಹ ಮನಸ್ಸಿನೊಳಗೆ ಆತಂಕವಿರುತ್ತದೆ. ಈಗ ಸದ್ಯಕ್ಕೆ ಉದ್ಯೋಗ ಬದಲಾವಣೆಯ ಚಿಂತೆ ಬೇಡ. ಅನವಶ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇರುತ್ತದೆ. ವಾರದ ಮಧ್ಯದಲ್ಲಿ ಹಣದ ಕೊರತೆ ಕಡಿಮೆಯಾಗುವ ಸಂಭವವಿದೆ. ವಿದ್ಯಾರ್ಥಿಗಳಿಗೆ ಉತ್ತಮ ವಾರ, ಅವರ ನಿರೀಕ್ಷೆಗಳು ಸ್ವಲ್ಪಮಟ್ಟಿಗೆ ಈಡೇರುತ್ತವೆ. ಅಪರಿಚಿತರು ನಿಮ್ಮ ಬಗ್ಗೆ ವಿಶೇಷ ಆಸಕ್ತಿ ತೋರಬಹುದು. ವೃತ್ತಿಯಲ್ಲಿ ಸಂತೋಷಕರ ವಾತಾವರಣ ಇರುತ್ತದೆ. ಮೂಳೆ ನೋವುಗಳ ಬಗ್ಗೆ ಗಮನ ಹರಿಸಿರಿ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಯಾರೊಂದಿಗೂ ಜಗಳ ಬೇಡ ಸ್ವಂತ ಉದ್ದಿಮೆ ಇಟ್ಟುಕೊಂಡಿರುವವರು ಕಾರ್ಮಿಕರೊಂದಿಗೆ ತಮ್ಮ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಅನಿವಾರ್ಯ.ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಮೇಲೆ ಬರುವ ದಾರಿಯನ್ನು ಕಂಡುಕೊಳ್ಳಿರಿ. ಅಧಿಕಾರಿಗಳ ವರ್ಗಕ್ಕೆ ಸ್ವಲ್ಪ ಸವಲತ್ತು ಹೆಚ್ಚಾಗುತ್ತದೆ. ಮಕ್ಕಳೊಡನೆ ಬಾಂಧವ್ಯ ಅಷ್ಟು ಉತ್ತಮವಾಗಿರುವುದಿಲ್ಲ. ಸರ್ಕಾರಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅಭಿವೃದ್ಧಿ ಇದೆ. ಸರ್ಕಾರಿ ಕಾಂಟ್ರಾಕ್ಟುಗಳನ್ನು ಮಾಡಿಸುವವರಿಗೆ ಅಭಿವೃದ್ಧಿ ಇರುತ್ತದೆ

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಹಠದ ಸ್ವಭಾವ ಅವಕಾಶಗಳನ್ನು ಕಳೆದುಕೊಳ್ಳುವಂತೆ ಮಾಡಬಹುದು. ಸಾರ್ವಜನಿಕ ಜೀವನದಲ್ಲಿ ಇರುವವರು ಹಟ ಬಿಡದಿದ್ದಲ್ಲಿ ಕೆಟ್ಟ ಹೆಸರು ಸಹ ಬರುತ್ತದೆ. ಬರುವ ಆದಾಯದಲ್ಲಿ ಸ್ವಲ್ಪ ಉಳಿಸಿ ಮುಂದಿನ ದಿನಗಳಿಗಾಗಿ ವಿಡಿಯೋ ಇಡಿರಿ. ಯಾವುದೇ ಕೆಲಸದಲ್ಲೂ ಆತುರ ಪಡದೆ ಮುಂದುವರೆಯುವುದು ಉತ್ತಮ. ಕೆಲವೊಂದು ಅಧಿಕಾರಗಳು ನಿಮ್ಮನ್ನು ಅರಸಿ ಬರುತ್ತವೆ ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಿರಿ. ಒಡಹುಟ್ಟಿದವರಿಂದ ನಿಮಗೆ ಸಹಾಯಗಳು ದೊರೆಯುತ್ತವೆ. ಆಸ್ತಿ ವಿಚಾರದಲ್ಲಿ ದಾಖಲೆಗಳ ಪರಿಶೀಲನೆ ಅತಿ ಮುಖ್ಯ. ಸರ್ಕಾರಿ ಕೆಲಸದಲ್ಲಿ ಇರುವವರಿಗೆ ಅಭಿವೃದ್ಧಿ ಇದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಇರುವ ಭೂಮಿ ಮಾರಿ ನಿಮ್ಮ ಅನುಕೂಲ ಜಾಗದಲ್ಲಿ ಭೂಮಿ ಕೊಳ್ಳುವ ಯೋಗ ಇದೆ. ಬೇರೆಯವರ ಸಾಂಸಾರಿಕ ವಿಚಾರಗಳಲ್ಲಿ ಮಧ್ಯವರ್ತಿ ಆಗಬೇಡಿ. ಇದು ನಿಮ್ಮ ಮೇಲೆ ಅಪವಾದ ಬರಲು ಕಾರಣವಾಗುತ್ತದೆ. ಸಾಲದ ವ್ಯವಹಾರ ಮಾಡುವುದು ಬೇಡ. ಇದ್ದಿದ್ದರಲ್ಲಿ ಹಣದ ಸ್ಥಿತಿ ಉತ್ತಮವಿರುತ್ತದೆ. ಹೆಂಡತಿಯು ಕೂಡಿಟ್ಟ ಹಣ ಕಷ್ಟಕ್ಕೆ ಕೊಡುವರು. ತಂದೆಯಿಂದ ಸಹಾಯ ನಿರೀಕ್ಷಿಸಬಹುದು. ಅನಿರೀಕ್ಷಿತವಾಗಿ ವ್ಯಾಪಾರ-ವ್ಯವಹಾರಗಳಲ್ಲಿ ಸ್ಥಾನ ಸಿಗುವುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಭೂಮಿಯ ವ್ಯವಹಾರ ವೃತ್ತಿಯನ್ನಾಗಿ ಮಾಡಿಕೊಂಡವರಿಗೆ ವ್ಯವಹಾರ ವೃದ್ಧಿಸುತ್ತದೆ. ಕಷ್ಟಕ್ಕಾಗಿ ಹಣ ಸಂರಕ್ಷಿಸುವಾಗ ಸರಿಯಾದ ಎಚ್ಚರ ವಹಿಸಿ. ಯಾರಿಗೂ ಮಾತುಕೊಟ್ಟು ಸಿಕ್ಕಿ ಹಾಕಿಕೊಳ್ಳಬೇಡಿ. ವಿದ್ಯಾರ್ಥಿಗಳು ಓದಿನ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ. ಬಂಧುಗಳು ಬೇಕೆಂದೇ ನಿಮ್ಮ ಬಳಿ ಹಣ ಕೇಳಲು ಬಂದು ನಿಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುವರು, ಇಂತಹವರ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ. ಆದಾಯದಲ್ಲಿ ಸ್ವಲ್ಪ ಕಡಿತ ಕಾಣಬಹುದು. ಕೃಷಿ ಭೂಮಿ ವಿಸ್ತರಣೆಗೆ ಈಗ ಸಕಾಲ. ವ್ಯಾಪಾರ-ವ್ಯವಹಾರಗಳಲ್ಲಿ ಅಭಿವೃದ್ಧಿ ಕಾಣಬಹುದು.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಆತ್ಮಸ್ಥೈರ್ಯದ ಕೊರತೆ ಕಂಡರೂ ನಿಮ್ಮ ಶ್ರದ್ಧೆ ನಿಮ್ಮನ್ನು ಕಾಯುತ್ತದೆ. ಈ ಹಿಂದೆ ನಿಮ್ಮನ್ನು ಹೀಯಾಳಿಸಿದ ವ್ಯಕ್ತಿಗಳು ಈಗ ನಿಮ್ಮಿಂದ ಸಹಾಯ ಅಪೇಕ್ಷಿಸಿ ಬರುವರು, ಇವರ ಬಗ್ಗೆ ಎಚ್ಚರವಿರಲಿ. ಕೆಲವರಿಂದ ನಿಮ್ಮ ಕೆಲಸ ಆಗುವುದೆಂದು ತಿಳಿದಿದ್ದರೂ ಸ್ವಾಭಿಮಾನಕ್ಕಾಗಿ ಅವರನ್ನು ಭೇಟಿ ಮಾಡುವುದಿಲ್ಲ, ಇದರಿಂದ ನಿಮಗೇ ನಷ್ಟ, ಭೇಟಿ ಮಾಡುವುದು ಉತ್ತಮ. ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾಲ. ಹಿರಿಯರೊಡನೆ ಇದ್ದ ತಿಕ್ಕಾಟ ಕೊನೆಗೊಳ್ಳುವ ಸಂದರ್ಭ. ಸಂಗಾತಿಯ ಕಡೆಯಿಂದ ನಿಮಗೆ ಪೂರಕ ಸಹಾಯ ದೊರೆಯುತ್ತದೆ.

ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಿರಿಯರ ಕೆಲಸಕಾರ್ಯಗಳಲ್ಲಿ ಯಶಸ್ಸು ಇರುತ್ತದೆ. ನಿರೀಕ್ಷಿಸಿದ್ದ ಮೂಲಗಳಿಂದ ಸ್ವಲ್ಪ ಹಣ ಹರಿದುಬರುತ್ತದೆ. ಯುವಕರು ಎಲ್ಲ ವಿಚಾರಗಳಲ್ಲೂ ಭಿನ್ನರಾಗ ಹಾಡುವುದು ಸರಿಯಲ್ಲ ಇದರಿಂದ ಉದ್ಯೋಗ ನಷ್ಟ ಕೂಡ ಸಂಭವಿಸಬಹುದು. ವೃತ್ತಿಯ ಸ್ಥಳದಲ್ಲಿ ಹೊಂದಾಣಿಕೆ ಅತಿ ಮುಖ್ಯ. ಕುಟುಂಬದಲ್ಲಿ ಹೊಂದಾಣಿಕೆಯ ಕೊರತೆ ಕಾಣಬಹುದು. ಆತ್ಮಸ್ಥೈರ್ಯ ಕಡಿಮೆ ಇದ್ದರೂ ಆತ್ಮೀಯರ ಸಲಹೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಸಮಾಜದಲ್ಲಿ ನಿಮ್ಮ ಮಾತಿಗೆ ಬೆಲೆ ಇರುತ್ತದೆ. ಹಿರಿಯರಿಗೆ ಕೀರ್ತಿ ಗೌರವ ಸಲ್ಲುವ ಯೋಗವಿದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಹಣದ ಕೊರತೆ ಕಡಿಮೆಯಾಗಿ ಮಾನಸಿಕ ದೃಢತೆ ಹೆಚ್ಚುತ್ತದೆ. ಕಡಿಮೆ ಖರ್ಚಿನಲ್ಲಿ ಆಗುವ ಸಣ್ಣ ಕೆಲಸಗಳಿಗೂ ಹೆಚ್ಚು ಖರ್ಚು ಮತ್ತು ಸುತ್ತಾಟ ಇರುತ್ತದೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಏಳಿಗೆ ಇರುತ್ತದೆ. ಸಂತಾನಕ್ಕಾಗಿ ಅಪೇಕ್ಷೆ ಪಡುತ್ತಿದ್ದವರಿಗೆ ಶುಭ ಸಮಾಚಾರ ಒದಗುವುದು. ಮಕ್ಕಳ ಹೆಸರಿನಲ್ಲಿ ಮಾಡುವ ವ್ಯವಹಾರದಲ್ಲಿ ಲಾಭವಿದೆ. ಅವರ ಹೆಸರಿನಲ್ಲಿ ಭೂಮಿ ಕೊಳ್ಳಬಹುದು. ನಿಮ್ಮ ನಾಯಕತ್ವದ ಗುಣ ಒಳ್ಳೆಯ ಹೆಸರು ತಂದರೂ ಕೆಲವು ಸಮಸ್ಯೆಗಳನ್ನು ಸಹ ತರುತ್ತದೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.