ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗಾಂಧಿ, ಶಾಸ್ತ್ರಿ ಎಲ್ಲರಿಗೂ ಸ್ಫೂರ್ತಿ: ಚರಂತಿಮಠ

ಜಿಲ್ಲೆಯ ವಿವಿಧೆಡೆ ಜಯಂತಿ ಆಚರಣೆ, ಸ್ವಚ್ಛತಾ ಅಭಿಯಾನ
Published : 2 ಅಕ್ಟೋಬರ್ 2024, 16:12 IST
Last Updated : 2 ಅಕ್ಟೋಬರ್ 2024, 16:12 IST
ಫಾಲೋ ಮಾಡಿ
Comments

ಬಾಗಲಕೋಟೆ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ ಬಹದ್ದೂರ್ ಶಾಸ್ತ್ರಿ ಸದಾಕಾಲ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ  ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.

ಬಿಜೆಪಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಿಂದ ಶಿವಾನಂದ ಜಿನ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿಯವರ ಪ್ರಭಾವ ಜಾಗತಿಕವಾಗಿದೆ. ಏಕತೆ, ಅಹಿಂಸೆ ಮಾರ್ಗ ಮಾನವ ಕುಲಕವನ್ನು ಪ್ರೇರೇಪಿಸುತ್ತವೆ ಎಂದರು.

ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ ಮಾತನಾಡಿದರು. ಮುಖಂಡರಾದ ಡಾ.ಎಂ.ಎಸ್.ದಡ್ಡೆನ್ನವರ, ಲಕ್ಷ್ಮೀನಾರಾಯಣ ಕಾಸಟ್‌, ಗುಂಡೂರಾವ್ ಶಿಂದೆ, ರಾಜು ನಾಯ್ಕರ, ಬಸವರಾಜ ಯಂಕಂಚಿ, ರಾಜು ರೇವಣಕರ, ಶಿವಾನಂದ ಟವಳಿ, ನಗರಸಭೆ ಅದ್ಯಕ್ಷೆ ಸವಿತಾ ಲೆಂಕೆಣ್ಣವರ, ಉಪಾಧ್ಯಕ್ಷೆ ಶೋಭಾ ರಾವ್, ಜ್ಯೋತಿ ಭಜಂತ್ರಿ, ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಉಮೇಶ ಹಂಚಿನಾಳ ಉಪಸ್ಥಿತರಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಧರ್ಮಂತಿ ಅಧ್ಯಕ್ಷತೆಯಲ್ಲಿ ಜಯಂತಿ ಆಚರಿಸಲಾಯಿತು.

ರಾಜೇಶ್ವರಿ ಹಿರೇಮಠ, ಸವಿತಾ ಹಿರೇಮಠ, ಬಸವರಾಜ ಅಂಬಿಗೇರ, ಶಿವಾನಂದ ಲೆಂಕೆನ್ನವರ, ಗಣೇಶ ನಾಯಕ, ಶೋಭಾ ಎ, ಮಂಜುಳಾ ಅಂಗಡಿ, ರೇಷ್ಮಾ ಫಣಿಬಂದ, ಕಿರಣ್ ಗಾಳಿ, ಶಿವಾನಂದ ಹೊಸಗೌಡರ, ಶಶಿ ದಂಡಿನ ಮತ್ತಿತರರು ಇದ್ದರು.

ಬಸವೇಶ್ವರ ಕಲಾ ಕಾಲೇಜು: ಭಜನೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.

ಪ್ರಾಚಾರ್ಯ ಎಸ್.ಆರ್. ಮೂಗನೂರಮಠ ಮಾತನಾಡಿದರು. ಪ್ರಾಧ್ಯಾಪಕರುಗಳಾದ ಕೆ.ವಿ. ಮಠ, ಆರ್.ಎಂ. ಬೆಣ್ಣೂರ, ಶ್ರೇಯಾ ಜೋರಾಪುರ ಹಾಗೂ ವಿದ್ಯಾರ್ಥಿಗಳು ಭಜನೆ ಮಾಡಿದರು. 

ಬಾಗಲಕೋಟೆಯಲ್ಲಿ ಬುಧವಾರ ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಸ್ವಚ್ಛತಾ ಅಭಿಯಾನ ಅಂಗವಾಗಿ ಕಸಗೂಡಿಸಿದರು
ಬಾಗಲಕೋಟೆಯಲ್ಲಿ ಬುಧವಾರ ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌. ಪೂಜಾರ ಸ್ವಚ್ಛತಾ ಅಭಿಯಾನ ಅಂಗವಾಗಿ ಕಸಗೂಡಿಸಿದರು

ಸ್ವಚ್ಛತಾ ಅಭಿಯಾನ

ಗಾಂಧೀಜಿ ಜಯಂತಿ ಅಂಗವಾಗಿ ಬಾಗಲಕೋಟೆಯ 50 ಹಾಸಿಗೆಗಳ ಆಸ್ಪತ್ರೆಯ ಬಳಿ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ವಿಧಾನ ಪರಿಷತ್ ಸದಸ್ಯ ಪಿ.ಎಚ್‌. ಪೂಜಾರ ನೇತೃತ್ವದಲ್ಲಿ ಕಸಗೂಡಿಸಿ ಸ್ವಚ್ಛಗೊಳಿಸಲಾಯಿತು.

ಮುಖಂಡರಾದ ಶೇಖರ ಮಾನೆ ವಿರೂಪಾಕ್ಷ ಅಮ್ರುತಕರ ಕಳಕಪ್ಪ ಬಾದವಾಡಗಿ ಕುಮಾರ ಗಿರಿಜಾ ಚಂದ್ರಕಾಂತ ಕೇಸನೂರ ಮಲ್ಲಿಕಾರ್ಜುನ ಸುರಪುರ ಶೈಲು ಅಂಗಡಿ ರಾಜು ಶ್ರೀರಾಮ ರಾಜು ಗೌಳಿ ಕೃಷ್ಣಾ ಚೌಧರಿ ಮಂಜುನಾಥ್ ಬಳ್ಳೂರ ನಗರಸಭಾ ಅಧಿಕಾರಿ ಮಾರುತಿ ನಡುವಿನಕೆರೆ ಸತೀಶ ಖಜ್ಜಿಡೋಣೆ ಮತ್ತಿತರರು ಇದ್ದರು.

ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಜಿಲ್ಲಾ ಘಟಕ: ನಗರಸಭೆ ಸಹಕಾರದೊಂದಿಗೆ ಎಪಿಎಂಸಿ ಕ್ರಾಸ್‌ನಲ್ಲಿರುವ ಎರಡು ಬಸ್ ನಿಲ್ದಾಣ ಮತ್ತು ರೋಟರಿ ಸರ್ಕಲ್‌ನಲ್ಲಿರುವ ಬಸ್ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ ಮಾಡಲಾಯಿತು. ಅರ್ಜುನ ಕೋರಿ ಗದಿಗೆಪ್ಪ ಅರಕೇರಿ ಹನುಮಂತ ಕಡ್ಲಿಮಟ್ಟಿ ವೇಗಾನಂದ ಕಲ್ಲೋಳಿ ಮಂಜುನಾಥ ನಾಲತವಾಡ ಯಮನಪ್ಪ ಎಲಗನ್ನವರ ರವಿದಾಸ ಲಮಾಣಿ ಯಲ್ಲಪ್ಪ ಕಡೆಮನಿ ಬಸವರಾಜ್ ಕಾಳಗಿ ಅನಿಲ್ ಪಾಟೀಲ ಮತ್ತಿತರರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT