ಬಾದಾಮಿ: ‘ಗುಡ್ಡದ ಕಲ್ಲು ತೆಗೆದು ಕುಟುಂಬದ ಬದುಕು ಕಟ್ಟಿಕೊಂಡಿದ್ದೇವೆ. ನಮ್ಮ ಹೊಟ್ಟೆಗೆ ಕಲ್ಲು ಹೊಡೆಯಬೇಡಿ. ನಮ್ಮನ್ನು ಬದುಕಲು ಬಿಡಿ’ ಎಂದು ಹಳಗೇರಿ ಗ್ರಾಮದ ಭೋವಿ ವಡ್ಡರ ಕುಟುಂಬದವರು ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ಮಾಡಿದರು.

‘ನಮಗ ಹೊಲ ಇಲ್ಲ. ಯಾವುದೂ ಬೇರೆ ಉದ್ಯೋಗ ಗೊತ್ತಿಲ್ಲ, ಎರಡು, ಮೂರು ತಲೆಮಾರಿನಿಂದ ಕಲ್ಲು ತೆಗೆದು ಹೊಟ್ಟಿ ಜೀವನ ಮಾಡಕೋಂತ ಬಂದೀವಿ. ಒಮ್ಮಗೇ ಕೆಲಸ ಬಂದ್ ಮಾಡಿದರ ನಾವು ಏನ್ ತಿನ್ನೂನು ಹೇಳಿ ’ ಎಂದು ಭೋವಿ ವಡ್ಡರ ಸಮಾಜದ ದಾಸಪ್ಪ ಸೀಮಿಕೇರಿ ಕೇಳಿದರು.

ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಪ್ರತಿಭಟಿಸಿದರು. ಹಳಗೇರಿ ಗ್ರಾಮದ ಭೋವಿ ವಡ್ಡರ ಜನತೆ ಶಾಲಾ ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿ ಮಹೇಶ ಮರಿಯಣ್ಣನರ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಹಿಂಪಡೆದು ಗ್ರಾಮಕ್ಕೆ ಮರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.