ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಪ್ರೇಮಪಲ್ಲವಿಗೆ ಗಟ್ಟಿಮೇಳದ ಸಾಥ್

ಐಪಿಎಸ್ ಜೋಡಿ ಲೋಕೇಶ ಜಗಲಾಸರ್–ಪದ್ಮಿನಿ ಸಾಹೊ ಮದುವೆ ಫೆ.16ಕ್ಕೆ
Last Updated 13 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಬಾಗಲಕೋಟೆ: ‘ಪದ್ಮಿನಿ ನನ್ನ ಐಪಿಎಸ್ ಬ್ಯಾಚ್‌ಮೇಟ್. ತರಬೇತಿ ಅವಧಿಯಲ್ಲಿ ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಆಕೆಯ ಸರಳತೆ, ಬದುಕಿನ ಬಗ್ಗೆ ಇರುವ ಬದ್ಧತೆ ನನಗೆ ಇಷ್ಟವಾಗಿತ್ತು. ಇಬ್ಬರೂ ಸಮಾನ ಮನಸ್ಕರು. ಕಳೆದ ವರ್ಷ ನಾನೇ ಪ್ರಪೋಸ್ ಮಾಡಿದ್ದು. ಅದಕ್ಕೆ ಅವರಿಂದಲೂ ಒಪ್ಪಿಗೆಯ ಮುದ್ರೆ ದೊರಕಿತು ಎಂದುಕಣ್ಣರಳಿಸಿದರು’ ಬಾಗಲಕೋಟೆ ಎಸ್ಪಿ ಲೋಕೇಶ ಜಗಲಾಸರ್.

ಇಬ್ಬರ ಪ್ರೇಮ ಪಲ್ಲವಿಗೆ ದೂರದ ಕಳಿಂಗ ನಾಡಿನಲ್ಲಿ (ಒಡಿಶಾ) ಫೆಬ್ರುವರಿ 16ರಂದು ಮದುವೆಯ ಮುದ್ರೆ ಬೀಳುತ್ತಿದೆ. ಹೀಗಾಗಿಬಾಗಲಕೋಟೆಯ ಪೊಲೀಸ್ ಬಳಗದಲ್ಲೂ ಮದುವೆ ಮನೆಯ ಸಂಭ್ರಮ ಕಳೆಗಟ್ಟಿದೆ.

‘ಪೋಷಕರಿಗೂ ಪ್ರೀತಿಯ ವಿಷಯ ತಿಳಿಸಿದೆವು. ಎರಡೂ ಕಡೆಯ ಹಿರಿಯರು ಮಾತನಾಡಿ ಮದುವೆ ನಿಶ್ಚಯ ಮಾಡಿದರು’ ಎಂದು ಹೇಳುತ್ತಾ ಲೋಕೇಶ್ ನಸುನಕ್ಕರು.ಫೆ.14ರಂದು ಪ್ರೇಮಿಗಳ ದಿನವನ್ನು ಸ್ಮರಣೀಯವಾಗಿಸಲು ಭಾವಿ ಪತ್ನಿಗೆ ಎರಡು ಇಳಕಲ್ ಸೀರೆ ಕಳಿಸಿಕೊಟ್ಟಿದ್ದಾರೆ.

ಓಡಿಶಾದ ಭುವನೇಶ್ವರದಲ್ಲಿ ಮದುವೆ ಸಮಾರಂಭ ನಡೆಯಲಿದೆ. ಫೆ. 20ರಂದು ಬೆಂಗಳೂರಿನ ಜಯನಗರದ ಪೂರ್ಣಿಮಾ ಕನ್ವೆನ್ಷನ್ ಸೆಂಟರ್‌ನಲ್ಲಿ ರಿಸೆ‍ಪ್ಷನ್ ನಡೆಯಲಿದೆ.

ಲೋಕೇಶ ಜಗಲಾಸರ್ ಹಾಗೂ ಪದ್ಮಿನಿ ಸಾಹೊ ಇಬ್ಬರೂ 2015ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳು. ಒಡಿಶಾದ ಕಲ್ಪನಾ ಹಾಗೂ
ಜಸೋಬಂತ್ ಸಾಹೊ ದಂಪತಿ ಪುತ್ರಿ ಪದ್ಮಿನಿ, ಐಪಿಎಸ್‌ನಲ್ಲಿ ಲೋಕೇಶ್ ಅವರಂತೆಯೇ ತಮ್ಮ ಮಾತೃ ರಾಜ್ಯದ (ಒಡಿಶಾ) ಕೇಡರ್‌ಗೆ ಆಯ್ಕೆಯಾಗಿರುವುದು ವಿಶೇಷ. ಸದ್ಯ ಅಲ್ಲಿನ ಬರ್ಗಾರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ.ಲೋಕೇಶ್ ಬೆಳಗಾವಿ ಜಿಲ್ಲೆ ಅಥಣಿ ತಾಲ್ಲೂಕಿನ ಬಿ.ಬಿ.ಜಗಲಾಸರ್ ಹಾಗೂ ಕಮಲಾಕ್ಷಿ ದಂಪತಿ ಪುತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT