ಬಳ್ಳಾರಿ: ಕಾದಿರುವ ಹೆಂಚಿನ ಮೇಲೆ ಬಗೆ ಬಗೆಯ ದೋಸೆ ಹಾಕುತ್ತಿರುವ ದೃಶ್ಯ ಒಂದೆಡೆ, ಅವುಗಳನ್ನ ಬಾಯಿ ಚಪ್ಪರಿಸಿ ಸವಿಯುತ್ತಿರುವ ವರ್ಗ ಮತ್ತೊಂದೆಡೆ.

ಈ ದೃಶ್ಯ ಕಂಡು ಬಂದಿದ್ದು ನಗರದ ರಾಯಲ್ ಫೋರ್ಟ್ ಹೋಟೆಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಕ್ಷಿಣ ಭಾರತದ ದೋಸೆ ಹಬ್ಬದಲ್ಲಿ.
ದೋಸೆ ಹಬ್ಬದಲ್ಲಿ ಚಿಕ್ಕ ಮಕ್ಕಳು, ಯುವಕ–ಯುವತಿಯರು, ಮಹಿಳೆ ಯರು, ಪುರುಷರು ಪಾಲ್ಗೊಂಡು ವಿವಿಧ ಬಗೆಯ ದೋಸೆಗಳನ್ನು ಸವಿದರು. ಕೆಲವರು ದೋಸೆ ಹಾಕುತ್ತಿ ರುವುದನ್ನು ಕೆಲವರು ನಿಬ್ಬೆರಗಾಗಿ ನೋಡುತ್ತಿರುವುದು ಕಂಡು ಬಂತು.

ದೋಸೆ ಹಬ್ಬದಲ್ಲಿ ಬುಲೆಟ್ ಬೈಕ್, ಕಾರು ಇರಿಸಲಾಗಿತ್ತು. ಯುವತಿಯರು, ಚಿಣ್ಣರು ಬೈಕ್ ಮತ್ತು ಕಾರಿನ ಬಳಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಅಲ್ಲದೇ, ಡಿಜೆ ನಾದಕ್ಕೆ ಹೆಜ್ಜೆ ಹಾಕಿ ಸಡಗರ ಪಟ್ಟರು. ಬೆಳಿಗ್ಗೆ 7.30 ರಿಂದ ಮಧ್ಯಾಹ್ನ 2.30ರವೆರೆಗೆ ಸಂಜೆ 5 ರಿಂದ ರಾತ್ರಿ 10.30ರವರೆಗೆ ದೋಸೆ ಹಬ್ಬವನ್ನು ಆಯೋಜಿಸಲಾಗಿತ್ತು.

36 ಬಗೆಯ ದೋಸೆಗಳನ್ನು ಸವಿಯಲು ಹತ್ತು ವರ್ಷದ ಒಳಗಿನವರಿಗೆ ₹ 49 ಹಾಗೂ ಹತ್ತು ವರ್ಷ ಮೇಲಿನವರಿಗೆ ₹79 ದರ ನಿಗದಿ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.