ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಡ್ಲಿಗಿ: ಕ್ರಿಕೆಟ್ ಬೆಟ್ಟಿಂಗ್, ಇಬ್ಬರ ಬಂಧನ

Published 4 ಏಪ್ರಿಲ್ 2024, 14:21 IST
Last Updated 4 ಏಪ್ರಿಲ್ 2024, 14:21 IST
ಅಕ್ಷರ ಗಾತ್ರ

ಕೂಡ್ಲಿಗಿ: ಪಟ್ಟಣದ ಸೊಲ್ಲಮ್ಮ ಮರಕ್ಕೆ ಹೋಗುವ ರಸ್ತೆಯಲ್ಲಿ ಮೊಬೈಲ್ ಆ್ಯಪ್‌ ಮೂಲಕ ಕ್ರಿಕೆಟ್ ಬೆಟ್ಟಿಂಗ್ ನಡೆಸಿದ್ದ ಇಬ್ಬರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಪಟ್ಟಣದ ಶ್ರೀಧರ್ ಹಾಗೂ ಮುರಳಿ ಬಂಧಿತರು. ಐಪಿಎಲ್ ಪಂದ್ಯಾವಳಿಯ ಬೆಂಗಳೂರು-ಲಕ್ನೋ ತಂಡಗಳ ಮಧ್ಯ ಮಗಳವಾರ ಪಂದ್ಯ ನಡೆಯುತ್ತಿದ್ದ ವೇಳೆ ಮೊಬೈಲ್ ಆ್ಯಪ್‌ ಬಳಿಸಿ ತಂಡಗಳ ಸೋಲು ಗೆಲುವು ಕುರಿತು ಅಂಕಗಳ ಮೇಲೆ ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು ಬೆಟ್ಟಿಂಗ್ ಆಡಿಸುತ್ತಿದ್ದರು. ಇದರ ಸುಳಿವು ಪಡೆದ ಪಿಎಸ್‌ಐ ಧಜಂಜಯ ಮತ್ತು ಸಿಬ್ಬಂದಿ ದಾಳಿ ಮಾಡಿ ಬೆಟ್ಟಿಂಗಿಗೆ ಬಳಸಿದ್ದ ಎರಡು ಮೊಬೈಲ್ ಹಾಗೂ ₹8,200 ನಗದು ವಶಪಡಿಸಿಕೊಂಡಿದ್ದಾರೆ.

ಈ ಆ್ಯಪನ್ನು ಹಗರಿಬೊಮ್ಮನಹಳ್ಳಿಯ ಅಮರ್ ಎಂಬ ವ್ಯಕ್ತಿ ತಮಗೆ ನೀಡಿದ್ದು, ಬೆಟ್ಟಿಂಗ್ ಹಣದಲ್ಲಿ ಅತನಿಗೂ ಪಾಲು ಹೋಗುತ್ತಿದೆ ಎಂದು ಆರೋಪಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಬುಧವಾರ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT