ವ್ಯವಸ್ಥೆ ಇಲ್ಲದೇ ಉತ್ಪಾದನೆ ಹೆಚ್ಚಳ
ಸದ್ಯ ಹೊಸ ಗಣಿಗಳು ಕಾರ್ಯಾರಂಭವಾದರೆ, ಸಂಡೂರಿನಲ್ಲಿ ಒಟ್ಟಾರೆ ಕಬ್ಬಿಣದ ಅದಿರಿನ ಉತ್ಪಾದನೆಯೂ ಹೆಚ್ಚಲಿದೆ. ಅದರ ಸಾಗಾಟಕ್ಕೆ ವಾಹನ ಸಂಚಾರವೂ ಹೆಚ್ಚಾಗಲಿದೆ. ಸದ್ಯ ಈಗಿರುವ ರಸ್ತೆಗಳು, ಈಗಿನ ಅದಿರು ಲಾರಿಗಳ ಸಂಚಾರವನ್ನೇ ತಡೆದುಕೊಳ್ಳಲು ಆಗದಂಥ ಸ್ಥಿತಿಯಲ್ಲಿವೆ. ಉತ್ಪಾದನೆಗೆ ತಕ್ಕಂತೆ ಸಾಗಣೆ ವ್ಯವಸ್ಥೆಯೂ ಬಲಿಷ್ಠವಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಕೂಡ ಪ್ರತಿಪಾದಿಸಿದೆ. ಹೀಗಿರುವಾಗ ಗಣಿ ಮತ್ತು ಉತ್ಪಾದನೆ ಹೆಚ್ಚಿಸಿದರೆ ಸಂಡೂರಿನ ಸಾರಿಗೆ, ಸಂಚಾರ ವ್ಯವಸ್ಥೆ ಹಾಳಾಗಲಿದೆ. ಇದು ಅಪಘಾತಗಳಿಗೆ ಹಾದಿ ಮಾಡಿಕೊಡಲಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. 2020ರ ಜನವರಿಯಿಂದ 2024ರ ಡಿಸೆಂಬರ್ ಮಧ್ಯದ ಅವಧಿಯಲ್ಲಿ ಸಂಡೂರಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಒಟ್ಟು 1,110 ಮಂದಿ ಗಾಯಗೊಂಡಿರುವುದು ಜನಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಆಲದಹಳ್ಳಿ ಎಂಬುವವರು ಆರ್‌ಟಿಐ ಅಡಿಯಲ್ಲಿ ಪಡೆದ ಮಾಹಿತಿಯಲ್ಲಿ ಬಯಲಾಗಿತ್ತು. ಇದರ ಜತೆಗೆ ನೂರಾರು ಮಂದಿ ಮೃತಪಟ್ಟಿದ್ದಾರೆ.