ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಡೂರು: ಅಭಿನಂದನಾ ಗ್ರಂಥ ಬಿಡುಗಡೆ

Published 11 ಜುಲೈ 2024, 13:49 IST
Last Updated 11 ಜುಲೈ 2024, 13:49 IST
ಅಕ್ಷರ ಗಾತ್ರ

ಸಂಡೂರು: ಇಲ್ಲಿನ ನಂದಿಹಳ್ಳಿಯಲ್ಲಿರುವ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಜ್ಞಾನ ಸರೋವರದಲ್ಲಿ ‘ಕರುಣಾಳು ಬೆಳಕು ಡಾ. ಬಿ. ಅಂಬಣ್ಣ–88’ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಈಚೆಗೆ ನಡೆಯಿತು.

ಸ್ನಾತಕೋತ್ತರ ಕೇಂದ್ರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದಿಂದ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಹಂಪಿ ಕನ್ನಡ ವಿ.ವಿ. ಪ್ರಾಧ್ಯಾಪಕ ವೆಂಕಟಗಿರಿ ದಳವಾಯಿ, ‘ವೈದ್ಯ ಅಂಬಣ್ಣ ಅವರ ಸಮಾಜ ಸೇವೆ ಮಾದರಿಯಾಗಿದೆ’ ಎಂದರು.

ಸಂಸದ ಈ. ತುಕಾರಾಂ ಕಾರ್ಯಕ್ರಮ ಉದ್ಘಾಟಿಸಿದರು. ಹಗರಿಬೊಮ್ಮನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವೆಂಕಟೇಶ, ರಂಗಕರ್ಮಿ ಮ.ಬ ಸೋಮಣ್ಣ, ಮಲ್ಲಯ್ಯ, ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ರವಿ.ಬಿ, ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಿ. ನಾಗನಗೌಡರು ಮಾತನಾಡಿದರು.

ರವಿ ಬಿ. ಮತ್ತು ಮಲ್ಲಯ್ಯ ಸಂಡೂರು ಗ್ರಂಥ ಸಂಪಾದಿಸಿದ್ದಾರೆ. ಅನ್ನಪೂರ್ಣ ತುಕಾರಾಂ, ರಂಗಭೂಮಿ ಕಲಾವಿದೆ ನಾಗರತ್ನಮ್ಮ, ಶಿಕ್ಷಕರಾದ ಎಚ್.ಎನ್. ಭೋಸ್ಲೆ, ನೀಲಾಂಬಿಕ, ಕಲ್ಪನಾ, ದೇವರಮನೆ ನಾಗಪ್ಪ, ಬಸವರಾಜ ಮಸೂತಿ, ಜಿ. ವೀರೇಶ್, ಅಕ್ಷತಾ, ಅಂಬಾದೇವಿ, ಶಿವರಾಮಪ್ಪ ರಾಗಿ, ಎ.ಎಂ. ಶಿವಮೂರ್ತಿ, ಎಂ. ಚಂದ್ರಶೇಖರಪ್ಪ, ಕಾರ್ತಿಕ್ ಕಾಳೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT