ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ (ವಿಎಸ್ಕೆಯು) ಗುರುವಾರ ನಡೆದ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರಾದ ಹಂಸಾ 4 ಮತ್ತು ರಾಜೇಶ್ವರಿ 3 ಚಿನ್ನದ ಪದಕ ಪಡೆದು, ಸಂಭ್ರಮಿಸಿದರು.

ಬಡತನದಲ್ಲಿ ಅರಳಿದ ಪ್ರತಿಭೆ: ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ತೆಕ್ಕಲಕೋಟೆಯ ಹಂಸಾ ಅವರ ತಾಯಿ ನಾಗಮ್ಮ ತರಕಾರಿ ಮಾರುತ್ತಾರೆ. ಅವರಿಗೆ ಹಂಸಾ ನಾಲ್ಕನೇ ಪುತ್ರಿ. ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುವ ಅವರು, ನಾಲ್ಕು ಚಿನ್ನದ ಪದಕಗಳನ್ನು ಪಡೆದರು.

‘ನನಗೆ ಪ್ರಾಧ್ಯಾಪಕಿ ಆಗುವ ಗುರಿಯಿದೆ. ಅದು ನನ್ನ ಕನಸಿನ ವೃತ್ತಿ. ಅದಕ್ಕೆ ಈಗಾಗಲೇ ತಯಾರಿ ನಡೆಸಿದ್ದೇನೆ. ಎಲ್ಲರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಸಿಗುತ್ತಿದೆ’ ಎಂದು ಹಂಸಾ ತಿಳಿಸಿದರು.

ಸಾಧನೆಗೆ ಗ್ರಾಂಥಾಲಯ ಕಾರಣ: ಸ್ನಾತಕೋತ್ತರ ಔದ್ಯೋಗಿಕ ರಸಾಯನಶಾಸ್ತ್ರದಲ್ಲಿ ಮೂರು ಚಿನ್ನದ ಪದಕ ಪಡೆದಿರುವ ರಾಜೇಶ್ವರಿ, ತಮ್ಮ ಸಾಧನೆಗೆ ಗ್ರಂಥಾಲಯ ಕಾರಣ ಎಂದಿದ್ದಾರೆ. ನಿತ್ಯ ಬೆಳಿಗ್ಗೆ 8ಕ್ಕೆ ಬಂದು ಇಡೀ ದಿನ ಪತ್ರಿಕೆ, ಪುಸ್ತಕಗಳನ್ನು ಓದುತ್ತಿದ್ದೆ. ಅಗತ್ಯ ಮಾಹಿತಿ ಪಡೆದುಕೊಳ್ಳುತ್ತಿದ್ದೆ’ ಎಂದು ರಾಜೇಶ್ವರಿ ತಿಳಿಸಿದರು.

ವೃತ್ತಿಯಲ್ಲಿ ಅಕ್ಕಸಾಲಿಗರಾದ ಗಿರೀಶ್ ಅವರ ಪುತ್ರಿ ರಾಜೇಶ್ವರಿ ಅವರು ಪ್ರಾಧ್ಯಾಪಕಿ ಆಗುವ ಗುರಿ ಹೊಂದಿದ್ದಾರೆ. ‘ಪ್ರೊಫೆಸರ್ ಆಗುವ ಗುರಿ ಇದೆ. ಅದಕ್ಕಾಗಿ ಪ್ರಯತ್ನ ನಡೆಸಿದ್ದೇನೆ’ ಎಂದು ಅವರು ತಿಳಿಸಿದರು.

ಮೂವರಿಗೆ ಡಾಕ್ಟರೇಟ್: ವೈದ್ಯ ಸಾಹಿತಿ ಡಾ. ವಸುಂದರಾ ಭೂಪತಿ, ಗಣಿ ಉದ್ಯಮಿ ಬಾವಿಹಳ್ಳಿ ನಾಗನಗೌಡ, ಪ್ರೆಸ್ಟೀಜ್ ಗ್ರೂಪ್ನ ಗೌರವಾಧ್ಯಕ್ಷ ಇರ್ಫಾನ್ ರಜಾಕ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹಲೊತ್ ಮಾತನಾಡಿ, ‘ವೇದ, ಉಪನಿಷತ್ತು, ಆಯುರ್ವೇದ, ಯೋಗ, ವಾಸ್ತು, ತತ್ವಶಾಸ್ತ್ರ, ನ್ಯಾಯಶಾಸ್ತ್ರ ಎಲ್ಲವೂ ನಮ್ಮ ಅಮೂಲ್ಯ ಪರಂಪರೆ. ಹೊಸ ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯಲ್ಲಿ ಅವುಗಳಿಗೆ ಮತ್ತೆ ಸ್ಥಾನ ನೀಡಿದೆ. ಭಾರತ ‘ವಿಶ್ವ ಗುರು’ ಆಗುವತ್ತ ಮುನ್ನಡೆದಿದೆ. ಈ ಪ್ರಯಾಣದಲ್ಲಿ ಯುವಕರು ಪ್ರಮುಖ ಶಕ್ತಿಯಾಗಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.