ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಲಗಿ: ಗಣೇಶ ಹಬ್ಬದ ಸಂಭ್ರಮ 

Published : 8 ಸೆಪ್ಟೆಂಬರ್ 2024, 13:41 IST
Last Updated : 8 ಸೆಪ್ಟೆಂಬರ್ 2024, 13:41 IST
ಫಾಲೋ ಮಾಡಿ
Comments

ಮೂಡಲಗಿ: ಮೂಡಲಗಿಯಲ್ಲಿ ಶನಿವಾರ ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಸಂಘ, ಸಂಸ್ಥೆ ಮತ್ತು ಸಾರ್ವಜನಿಕ ಉತ್ಸವ ಸಮಿತಿಯವರು ಟ್ರ್ಯಾಕ್ಟರ್‌ನಲ್ಲಿ ಮೂರ್ತಿಯ ಮೆರವಣಿಗೆ ಮಾಡಿದರು. ಹಬ್ಬದ ಅಂಗವಾಗಿ ಹಣ್ಣು, ಹೂವು, ಕಾಯಿ ಮತ್ತು ಮೂರ್ತಿ ಪ್ರತಿಷ್ಠಾಪಿಸುವ ಮಂಟಪದ ಅಲಂಕಾರಕ್ಕಾಗಿ ಬೇಕಾಗುವ ಪರಿಕರಗಳ ಖರೀದಿ ಜೋರಾಗಿತ್ತು.

ಮೂಡಲಗಿಯ ಗಾಂಧಿ ವೃತ್ತ, ಭಾಜಿ ಮಾರ್ಕೆಟ್‌, ಬಸವ ಮಂಟಪ, ಲಕ್ಷ್ಮೀನಗರ, ಜಾನುವಾರು ಪೇಟೆ, ಯಲ್ಲಮ್ಮದೇವಿ ದೇವಸ್ಥಾನ, ವಿದ್ಯಾನಗರ, ಈರಣ್ಣ ನಗರ, ನಾಗಲಿಂಗ ನಗರ, ಬಸವ ಮಂಟಪ, ವೆಂಕಟೇಶ ನಗರ, ಶಿಕ್ಕಲಿಗಾರರ ಸಮುದಾಯ ಹೀಗೆ ಸಾರ್ವಜನಿಕ ಗಣಪತಿಗಳು ಮತ್ತು ಪಟ್ಟಣದಲ್ಲಿ ಎಲ್ಲ ಶಾಲೆ, ಕಾಲೇಜುಗಳಲ್ಲಿ ಗಣಪತಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.

 ಗಾಂಧಿ ವೃತ್ತದ ಬಳಿಯಿತುವ ಪತ್ತಾರ ಓಣಿಯಲ್ಲಿ ಗಣಪತಿ ಮೂರ್ತಿ ಖರೀದಿಗೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಇಲ್ಲಿರುವ ಹತ್ತಾರು ಪತ್ತಾರ ಕುಟುಂಬದವರು ಕಳೆದ ಎಂಟು ದಶಕಗಳ ಪೂರ್ವದಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿವೆ. ಸುತ್ತಲಿನ ಗ್ರಾಮಗಳು ಮತ್ತು ಬೇರೆ ಜಿಲ್ಲೆಯ ಜನರು ಸಹ ಇಲ್ಲಿಂದ ವಿಗ್ರಹ ಪಡೆಯುವುದು ವಿಶೇಷವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT