ಸೋಮವಾರ, ಮೇ 17, 2021
21 °C
ಕೃಷ್ಣಾ ನದಿಯ ಒಳಹರಿವು ಇಳಿಮುಖ

ಬೆಳಗಾವಿ: ಘಟಪ್ರಭಾ, ಮಲಪ್ರಭಾ ಜಲಾಶಯಗಳ ಹೊರಹರಿವು ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಜಿಲ್ಲೆಯಂತೆ ನೆರೆಯ ದಕ್ಷಿಣ ಮಹಾರಾಷ್ಟ್ರದಲ್ಲೂ ಶುಕ್ರವಾರ ಮಳೆಯ ಅಬ್ಬರ ಕಡಿಮೆಯಾಗಿದೆ. ಅಲ್ಲಿಂದ ಕೃಷ್ಣಾ ನದಿಗೆ ಹರಿದು ಬರುತ್ತಿದ್ದ ಒಳಹರಿವು ತೀವ್ರ ಗತಿಯಲ್ಲಿ ಕಡಿಮೆಯಾಗಿದೆ. 1.73 ಲಕ್ಷ ಕ್ಯುಸೆಕ್‌ ನೀರು ಹರಿದು ಬಂದಿದ್ದು, ಹಿಂದಿನ ದಿನಕ್ಕೆ ಹೋಲಿಸಿದರೆ 25 ಸಾವಿರ ಕ್ಯುಸೆಕ್‌ ಕಡಿಮೆಯಾಗಿದೆ. 

ಇದೇ ರೀತಿ, ಘಟಪ್ರಭಾ ಹರಿವು ಕೂಡ ಕಡಿಮೆಯಾಗಿದೆ. 19,775 ಕ್ಯುಸೆಕ್‌ ಒಳಹರಿವು ಇದೆ. ಹಿಂದಿನ ದಿನ 31,627 ಕ್ಯುಸೆಕ್‌ ಇತ್ತು. ಹಿಡಕಲ್‌ ಬಳಿಯ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದಲ್ಲೂ ಗಣನೀಯವಾಗಿ ಇಳಿಕೆಯಾಗಿದೆ. 35 ಸಾವಿರ ಕ್ಯುಸೆಕ್‌ನಷ್ಟಿದ್ದ ಹೊರಹರಿವು, 12 ಸಾವಿರಕ್ಕೆ ಇಳಿದಿದೆ. 

ಮಲಪ್ರಭಾ ನದಿಯ ಒಳಹರಿವಿನಲ್ಲಿ ಕೊಂಚ ಏರಿಕೆಯಾಗಿದೆ. ನಿನ್ನೆ 5,644 ಕ್ಯುಸೆಕ್‌ ಇದ್ದ ಪ್ರಮಾಣವು 9,720 ಕ್ಯುಸೆಕ್‌ಗೆ ಏರಿಕೆಯಾಗಿದೆ. ಸವದತ್ತಿ ಬಳಿ ನದಿಗೆ ನಿರ್ಮಿಸಲಾಗಿರುವ ನವಿಲುತೀರ್ಥ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣದಲ್ಲಿ ಇಳಿಕೆಯಾಗಿದೆ. 2,264 ಕ್ಯುಸೆಕ್‌ ನೀರು ಹೊರಬಿಡಲಾಗಿದೆ. ಕಳೆದ ಕೆಲವು ದಿನಗಳಿಂದ ಪ್ರವಾಹದ ಭೀತಿ ಎದುರಿಸುತ್ತಿದ್ದ ನದಿ ದಂಡೆಯ ಗ್ರಾಮಗಳು ನಿರಾಳವಾಗಿವೆ.

ಜಲಾಶಯಗಳ ನೀರಿನ ಮಟ್ಟ

ಜಲಾಶಯಗರಿಷ್ಠ ಮಟ್ಟಇಂದಿನ ಮಟ್ಟಒಳಹರಿವುಹೊರಹರಿವು
ಮಲಪ್ರಭಾ2,079.502,077.259,7202,264
ಘಟಪ್ರಭಾ2,1752,173.3319,77512,645

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು