ಭಾನುವಾರ, ಸೆಪ್ಟೆಂಬರ್ 25, 2022
30 °C

14 ಶಿಕ್ಷಕರು ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ (ವಿಜಯನಗರ): ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ವಿಭಾಗದಿಂದ ಒಂಬತ್ತು ಹಾಗೂ ಪ್ರೌಢಶಾಲೆಗಳಿಂದ ಐವರನ್ನು ಆಯ್ಕೆ ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.

ಪ್ರಾಥಮಿಕ ಶಾಲೆ ವಿಭಾಗದಿಂದ ಹೊಸಪೇಟೆ ಕೌಲ್‌ಪೇಟೆ ಶಾಲೆಯ ಸಹಶಿಕ್ಷಕಿ ಶಶಿಕಲಾ ಗಚ್ಚಿನಮನಿ, ತಾಲ್ಲೂಕಿನ ಹಳೆಮಲಪನಗುಡಿಯ ಕೆ. ಸುಧಮ್ಮ, ಹರಪನಹಳ್ಳಿ ತಾಲ್ಲೂಕಿನ ತೆಲಗಿ ಶಾಲೆಯ ನಲಿಕಲಿ ಶಿಕ್ಷಕಿ ಎಚ್‌.ಬಿ.ಎಂ. ಕೊಟ್ರಮ್ಮ, ದುಗ್ಗಾವತಿ ಶಾಲೆಯ ಬಡ್ತಿ ಮುಖ್ಯಶಿಕ್ಷಕ ಜಿ. ಚನ್ನಬಸಪ್ಪ, ಹೂವಿನಹಡಗಲಿ ತಾಲ್ಲೂಕಿನ ನವಲಿ ಶಾಲೆಯ ದೈಹಿಕ ಶಿಕ್ಷಕ ಪ್ರಕಾಶ ಮಣೆಗಾರ, ಕತ್ತೆಬೆನ್ನೂರ ಶಾಲೆಯ ನಾಯಕರ ಮಂಜುನಾಥ, ಕೂಡ್ಲಿಗಿ 1ನೇ ವಾರ್ಡ್‌ ಶಾಲೆಯ ನಿಂಗಮ್ಮ ಎಂ., ಬಿ.ಟಿ. ಗುದ್ದಿ ಶಾಲೆಯ ಕುಮಾರಸ್ವಾಮಿ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ತಂಬ್ರಹಳ್ಳಿ ಶಾಲೆಯ ರೇಣುಕಮ್ಮ.

ಪ್ರೌಢಶಾಲೆ ವಿಭಾಗದಿಂದ ಹೊಸಪೇಟೆ ಹಂಪಿ ರಸ್ತೆ ಪಿ.ಎ.ಎಸ್‌.ಬಿ.ಸಿ ಶಾಲೆಯ ಸಹಶಿಕ್ಷಕ ಕ್ಯಾದಿಗೆಹಾಳ ಉದೇದಪ್ಪ, ಹರಪನಹಳ್ಳಿ ತಾಲ್ಲೂಕಿನ ಮುತ್ತಿಗೆ ರುದ್ರಾಂಬ ಎಂ.ಪಿ. ಪ್ರಕಾಶ ಸರ್ಕಾರಿ ಶಾಲೆಯ ನೇವಾರ ಲಿಂಗರಾಜ, ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ರಾಮನಗರ ಶಾಲೆಯ ಎಂ.ಪಿ.ಎಂ. ಮಂಜುನಾಥ, ಹೂವಿನಹಡಗಲಿ ತಾಲ್ಲೂಕಿನ ಹಿರೇಬನ್ನಿಮಟ್ಟಿ ಶಾಲೆಯ ಎಚ್‌.ಎಂ. ಶಿವಬಸವಸ್ವಾಮಿ, ಕೂಡ್ಲಿಗಿ ತಾಲ್ಲೂಕಿನ ಚಂದ್ರಶೇಖರಪುರ ಶಾಲೆಯ ಎನ್‌.ಎಂ. ಶ್ರೀಕಾಂತ ಅವರಿಗೆ ಸೆ. 5ರಂದು ಮಧ್ಯಾಹ್ನ 2ಕ್ಕೆ ನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು