ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಮವಾರ 1,53,965 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಇದರಲ್ಲಿ 10 ಸಾವಿರಕ್ಕೂ ಹೆಚ್ಚು ಪಿಒಪಿ ಮೂರ್ತಿಗಳಾಗಿವೆ.
ದಕ್ಷಿಣ ವಲಯದಲ್ಲಿ ಅತಿಹೆಚ್ಚು ಮೂರ್ತಿಗಳನ್ನು ಸೋಮವಾರ ವಿಸರ್ಜಿಸಲಾಗಿದ್ದು, ಪಿಒಪಿ ಮೂರ್ತಿಗಳ ಸಂಖ್ಯೆಯೂ ಈ ವಲಯದಲ್ಲೇ ಹೆಚ್ಚಾಗಿದೆ. ದಾಸರಹಳ್ಳಿ ವಲಯದಲ್ಲಿ ಅತಿ ಕಡಿಮೆ ಮೂರ್ತಿಗಳು ವಿಸರ್ಜನೆಯಾಗಿವೆ. ಮಹದೇವಪುರದಲ್ಲಿ 18 ಪಿಒಪಿ ಮೂರ್ತಿಗಳು ವಿಸರ್ಜನೆಯಾಗಿವೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.
1,53,965- ಒಟ್ಟು ಮೂರ್ತಿಗಳ ವಿಸರ್ಜನೆ
1,43,608- ಮಣ್ಣಿನ ಮೂರ್ತಿಗಳು
10,357- ಪಿಒಪಿ ಮೂರ್ತಿಗಳು
90,113 - ಮಣ್ಣಿನ ಮೂರ್ತಿಗಳು
8,843 - ಪಿಒಪಿ ಮೂರ್ತಿಗಳು
19,037 – ಮಣ್ಣಿನ ಮೂರ್ತಿಗಳು
714 – ಪಿಒಪಿ ಮೂರ್ತಿಗಳು
32,730 – ಮಣ್ಣಿನ ಮೂರ್ತಿಗಳು
800 – ಪಿಒಪಿ ಮೂರ್ತಿಗಳು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.