ಬೆಂಗಳೂರು: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಇಲಾಖೆಯಿಂದ (ಡಿಎಸ್ಐಆರ್) ಮಾನ್ಯತೆ ಪಡೆದ ಸಂಶೋಧನಾ ಸಂಸ್ಥೆ ‘ಪ್ರಯೋಗ’ ವತಿಯಿಂದ ವಿಜ್ಞಾನ ಸಂಶೋಧನಾ ಕಾರ್ಯಕ್ರಮ ಅನ್ವೇಷಣಾ 2026ಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಈ ಕಾರ್ಯಕ್ರಮವು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಿರಿಯ ವಿಜ್ಞಾನಿಗಳೊಂದಿಗೆ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ. 2026ರ ಆವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಗ್ರೀನ್ ಕೆಮಿಸ್ಟ್ರಿ, ಅಡ್ವಾನ್ಸ್ಡ್ ಆ್ಯಂಡ್ ಫಂಕ್ಷನಲ್ ಮೆಟೀರಿಯಲ್ಸ್, ಫುಡ್ ಆ್ಯಂಡ್ ಅಗ್ರಿಕಲ್ಚರ್, ಅರ್ಥ್ ಸೈನ್ಸ್, ವೆಲ್ನೆಸ್ ಮತ್ತು ಎ ಡೆಡಿಕೇಟೆಡ್ ಥಿಯೆರಟಿಕಲ್ ರಿಸರ್ಚ್ ಟ್ರ್ಯಾಕ್ ಎಂಬ ಆರು ವಿಭಾಗಗಳಲ್ಲಿ 19 ಯೋಜನೆಗಳನ್ನು ಒಳಗೊಂಡಿದೆ.

ಈ ವರ್ಷ ಸಂಸ್ಥೆಯು ವಿದ್ಯಾರ್ಥಿಗಳಿಗೆ ಎರಡು ಹೊಸ ಸಂಶೋಧನಾ ಮಾರ್ಗಗಳನ್ನು ಪ್ರಾರಂಭಿಸುತ್ತಿದೆ. ವರ್ಷವಿಡೀ ನಡೆಯುವ ಪ್ರಾಜೆಕ್ಟ್ ಟ್ರ್ಯಾಕ್ (ಏಪ್ರಿಲ್ 2026-ಮಾರ್ಚ್ 2027) ಉತ್ಸಾಹಿ ವಿದ್ಯಾರ್ಥಿಗಳಿಗೆ ನಿಯಮಿತ ಕ್ಯಾಂಪಸ್ ಭೇಟಿ, ಸಂವಾದ ಮತ್ತು ಮಾರ್ಗದರ್ಶನದೊಂದಿಗೆ ವಿಸ್ತೃತ, ಪೂರ್ಣಪ್ರಮಾಣದ ಸಂಶೋಧನಾ ಅನುಭವ ನೀಡುತ್ತದೆ.

ಜನವರಿ 15 ಅರ್ಜಿ ಸಲ್ಲಿಕೆಗೆ ಕಡೆ ದಿನ. ದೇಶದಾದ್ಯಂತ 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತವಾಗಿ, ಜನವರಿ 18 ರಿಂದ 24 ರ ನಡುವೆ ಆನ್ಲೈನ್ನಲ್ಲಿ ಸ್ಕ್ರೀನಿಂಗ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಬಳಿಕ ಜನವರಿ 28 ರಿಂದ ಫೆಬ್ರವರಿ 5 ರ ವರೆಗೆ ವೈಯಕ್ತಿಕ ಸಂದರ್ಶನಗಳು ಇರಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಏಪ್ರಿಲ್ನಲ್ಲಿ ಪ್ರಾಜೆಕ್ಟ್ಗಳನ್ನು ಪ್ರಾರಂಭಿಸಲಿದ್ದು, ಆಗಸ್ಟ್ನಲ್ಲಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.