ಬೆಂಗಳೂರು: ಆಹಾರ ಪದಾರ್ಥಗಳ ಡೆಲಿವರಿ ಉದ್ಯೋಗಿಗಳು ಹಾಗೂ ಪಾದಚಾರಿಗಳನ್ನು ಅಡ್ಡಗಟ್ಟಿ ಮೊಬೈಲ್ ಹಾಗೂ ನಗದು ಸುಲಿಗೆ ಮಾಡುತ್ತಿದ್ದ ಅಣ್ಣ– ತಮ್ಮನನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಜಿಗಣಿ ನಿವಾಸಿಗಳಾದ ಆನಂದ್(25) ಹಾಗೂ ಕಿರಣ್ (24) ಬಂಧಿತರು.

ಬಂಧಿತರಿಂದ ₹4.17 ಲಕ್ಷ ಮೌಲ್ಯದ 20 ಮೊಬೈಲ್ ಹಾಗೂ ಒಂದು ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

‘ಅಷ್ಟಲಕ್ಷ್ಮಿ ಲೇಔಟ್ನಲ್ಲಿ ನೆಲೆಸಿದ್ದ ಸ್ವಿಗ್ಗಿ ಡೆಲಿವರಿ ಹುಡುಗ ನೀಡಿದ ದೂರು ಆಧರಿಸಿ, ಸಹೋದರರನ್ನು ಬಂಧಿಸಲಾಯಿತು. ಗ್ರಾಹಕರಿಗೆ ಆಹಾರ ಡೆಲಿವರಿ ಮಾಡಲು ಲೊಕೇಶನ್ ಹುಡುಕಾಟ ನಡೆಸುತ್ತಿದ್ದ ವೇಳೆ ಆರೋಪಿಗಳು ಮೊಬೈಲ್ ಕಸಿದು ಪರಾರಿ ಆಗಿದ್ದರು. ಈ ಮಧ್ಯೆ ಆರೋಪಿಗಳು ಡಕಾಯಿತಿ ನಡೆಸಿದ್ದರು. ಇಬ್ಬರನ್ನೂ ಬನ್ನೇರುಘಟ್ಟ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದರು. ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ, ಸಹೋದರರೇ ಮೊಬೈಲ್ ಸುಲಿಗೆ ನಡೆಸಿದ್ದು ಗೊತ್ತಾಗಿತ್ತು. ಡಕಾಯಿತಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳನ್ನು ಬಾಡಿ ವಾರಂಟ್ ಮೇಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆಗ ಮೊಬೈಲ್ ಫೋನ್ ಸುಲಿಗೆ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.