ಬೆಂಗಳೂರು: ಬಿಬಿಎಂಪಿಯ ಎಂಟು ವಲಯಗಳಲ್ಲಿ ದೀರ್ಘಕಾಲದಿಂದ ಆಸ್ತಿ ತೆರಿಗೆ ಪಾವತಿಸದ 608 ಆಸ್ತಿಗಳನ್ನು ಹರಾಜು ಹಾಕಲಾಗುತ್ತಿದೆ ಎಂದು ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ತಿಳಿಸಿದರು.

ಆಸ್ತಿ ತೆರಿಗೆ ಸಂಗ್ರಹಿಸುವ ವಿಷಯವಾಗಿ, ಕಾರಣ ಕೇಳಿ ನೋಟಿಸ್, ಬೇಡಿಕೆ ನೋಟಿಸ್, ಆಸ್ತಿಗಳ ಮುಟ್ಟುಗೋಲು, ವಸತಿಯೇತರ ಆಸ್ತಿಗಳಿಗೆ ಬೀಗಮುದ್ರೆ ಸೇರಿದಂತೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೂ ಹಲವು ಆಸ್ತಿಗಳ ಮಾಲೀಕರು ದೀರ್ಘಕಾಲದಿಂದ ಪಾಲಿಕೆಗೆ ಆಸ್ತಿ ತೆರಿಗೆ ಪಾವತಿಸುತ್ತಿಲ್ಲ. ಈ ಸಂಬಂಧ ಆಸ್ತಿ ತೆರಿಗೆ ಬಾಕಿ ವಸೂಲಿ ಮಾಡಲು ಸುಸ್ತಿದಾರರ ಸ್ಥಿರ ಆಸ್ತಿಗಳನ್ನು ತುರ್ತು ಮಾರಾಟ ಮಾಡಲು, ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದರು.

ಬಿಬಿಎಂಪಿ ಕಾಯ್ದೆ 2020ರ ಸೆಕ್ಷನ್ 156 ಉಪಪ್ರಕರಣ 5ರ ಅಡಿಯಲ್ಲಿ ಹರಾಜು ಮಾಡಲಾಗುತ್ತದೆ. ಹರಾಜಿನಲ್ಲಿ ಲಭ್ಯವಾಗುವ ಮೊತ್ತದಲ್ಲಿ ಪಾಲಿಕೆಗೆ ಸಂದಾಯವಾಗಬೇಕಿರುವ ಪೂರ್ಣ ಬಾಕಿಯನ್ನು ವಸೂಲಿ ಮಾಡಿದ ಬಳಿಕ ಉಳಿಯುವ ಮೊತ್ತವನ್ನು ಮಾಲೀಕರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಆರ್.ಆರ್ ನಗರ ವಲಯ: ಲಗ್ಗೆರೆ, ಆರ್.ಆರ್. ನಗರ, ಲಕ್ಷ್ಮಿದೇವಿನಗರ, ಯಶವಂತಪುರ ಉಪವಿಭಾಗಗಳಲ್ಲಿ ತಲಾ 10, ಕೆಂಗೇರಿ ಹಾಗೂ ಹೇರೋಹಳ್ಳಿ ಉಪ ವಿಭಾಗಗಳಲ್ಲಿ ತಲಾ ಐದು ಆಸ್ತಿಗಳು ಫೆಬ್ರುವರಿ 10ರಂದು ಹರಾಜಾಗಲಿವೆ.

ಪೂರ್ವ ವಲಯ: ಜೆ.ಸಿ ನಗರ, ಮಾರುತಿ ಸೇವಾನಗರ, ಎಚ್ಬಿಆರ್ ಲೇಔಟ್, ಜೀವನ್ ಬಿಮಾನಗರ, ಸಿ.ವಿ. ರಾಮನ್ ನಗರ, ಶಾಂತಿನಗರ, ವಸಂತನಗರ ಉಪ ವಿಭಾಗಗಳಲ್ಲಿ ತಲಾ 10, ಹೆಬ್ಬಾಳ, ಕೆ.ಜಿ ಹಳ್ಳಿ ಉಪ ವಿಭಾಗಗಳಲ್ಲಿ ತಲಾ 11, ಪುಲಕೇಶಿನಗರ, ದೊಮ್ಮಲೂರು ಉಪ ವಿಭಾಗಗಳಲ್ಲಿ ತಲಾ ಒಂಬತ್ತು ಹಾಗೂ ಶಿವಾಜಿನಗರ ಉಪ ವಿಭಾಗದಲ್ಲಿ ಎಂಟು ಆಸ್ತಿಗಳನ್ನು ಫೆ. 13ರಂದು ಹರಾಜು ಮಾಡಲಾಗುತ್ತದೆ.

ಪಶ್ಚಿಮ ವಲಯ: ಚಿಕ್ಕಪೇಟೆ, ಚಂದ್ರಾ ಲೇಔಟ್, ಚಾಮರಾಜಪೇಟೆ, ಗಾಂಧಿನಗರ, ಗೋವಿಂದರಾಜಪುರ, ಜೆ.ಜೆ.ಆರ್. ನಗರ, ಮಲ್ಲೇಶ್ವರ, ಮಹಾಲಕ್ಷ್ಮಿಪುರ, ಮತ್ತಿಕೆರೆ, ನಾಗಪುರ, ರಾಜಾಜಿನಗರ ಹಾಗೂ ಶ್ರೀರಾಮಮಂದಿರ ಉಪ ವಿಭಾಗಗಳಲ್ಲಿ ತಲಾ 10 ಆಸ್ತಿಗಳ ಹರಾಜು ಫೆ. 13ರಂದು ನಡೆಯಲಿದೆ.

ಮಹದೇವಪುರ ವಲಯ: ಹೊರಮಾವು, ಎಚ್ಎಎಲ್, ಕೆ.ಆರ್. ಪುರ, ಮಾರತ್ಹಳ್ಳಿ, ಹೂಡಿ ಹಾಗೂ ವೈಟ್ಫೀಲ್ಡ್ ಸೇರಿದಂತೆ ಉಪ ವಿಭಾಗಗಳಲ್ಲಿ ತಲಾ 10 ಆಸ್ತಿಗಳ ಹರಾಜು ಫೆ. 13ರಂದು ನಡೆಯಲಿದೆ.

ಯಲಹಂಕ ವಲಯ: ಯಲಹಂಕ, ಯಲಹಂಕ ಉಪನಗರ, ಬ್ಯಾಟರಾಯನಪುರ ಹಾಗೂ ವಿದ್ಯಾರಣ್ಯಪುರ ಉಪ ವಿಭಾಗಳಲ್ಲಿ ತಲಾ 10 ಆಸ್ತಿಗಳನ್ನು ಫೆ. 13ರಂದು ಹರಾಜು ಮಾಡಲಾಗುತ್ತದೆ.

ದಾಸರಹಳ್ಳಿ ವಲಯ: ಶೆಟ್ಟಿಹಳ್ಳಿ, ದಾಸರಹಳ್ಳಿ, ಪೀಣ್ಯ ಉಪ ವಿಭಾಗಗಳಲ್ಲಿ ತಲಾ 10 ಹಾಗೂ ಹೆಗ್ಗನಹಳ್ಳಿ ಉಪ ವಿಭಾಗದಲ್ಲಿ 11 ಆಸ್ತಿಗಳ ಹರಾಜು ಪ್ರಕ್ರಿಯೆ ಫೆ. 13ರಂದು ನಡೆಯಲಿದೆ.

ದಕ್ಷಿಣ ವಲಯ: ಬಿಟಿಎಂ ಲೇಔಟ್, ಕೋರಮಂಗಲ, ಬನಶಂಕರಿ, ಪದ್ಮನಾಭನಗರ, ಜಯನಗರ, ಜೆ.ಪಿ. ನಗರ, ಗಾಳಿ ಆಂಜನೇಯ ದೇವಸ್ಥಾನ, ವಿಜಯನಗರ, ಹೊಂಬೇಗೌಡ ನಗರ ಉಪ ವಿಭಾಗಗಳಲ್ಲಿ ತಲಾ 10, ಗಿರಿನಗರ ಉಪ ವಿಭಾಗದಲ್ಲಿ ಎಂಟು, ಬಸವನಗುಡಿ ಉಪ ವಿಭಾಗದಲ್ಲಿ ಆರು ಹಾಗೂ ಕೆಂಪೇಗೌಡ ನಗರ ಉಪ ವಿಭಾಗದಲ್ಲಿ ಐದು ಆಸ್ತಿಗಳನ್ನು ಫೆ. 14ರಂದು ಹರಾಜು ಮಾಡಲಾಗುತ್ತದೆ.

ಬೊಮ್ಮನಹಳ್ಳಿ ವಲಯ: ಬೇಗೂರು, ಉತ್ತರಹಳ್ಳಿ, ಯಲಚೇನಹಳ್ಳಿ, ಬೊಮ್ಮನಹಳ್ಳಿ, ಅರಕೆರೆ, ಎಚ್ಎಸ್ಆರ್ ಲೇಔಟ್ ಹಾಗೂ ಅಂಜನಾಪುರ ಉಪ ವಿಭಾಗಗಳಲ್ಲಿ ತಲಾ 10 ಆಸ್ತಿಗಳು ಫೆ.14ರಂದು ಹರಾಜಾಗಲಿವೆ.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ₹2 ಲಕ್ಷಕ್ಕಿಂತ ಹೆಚ್ಚು ಆಸ್ತಿ ತೆರಿಗೆ ಬಾಕಿ ಇರುವವರಿಂದ ಸುಮಾರು ₹390 ಕೋಟಿ ಪಾವತಿಯಾಗಬೇಕಿದೆ. ಹರಾಜಿನಂತಹ ಬಲವಂತದ ವಸೂಲಾತಿ ಕ್ರಮವನ್ನು ತಪ್ಪಿಸುವ ಸಲುವಾಗಿ ಎಲ್ಲಾ ಆಸ್ತಿ ತೆರಿಗೆದಾರರು ತಕ್ಷಣವೇ ತಮ್ಮ ಆಸ್ತಿ ತೆರಿಗೆ ಬಾಕಿಗಳನ್ನು ಪಾವತಿಸಬೇಕು’ ಎಂದು ಮುನೀಶ್ ಮೌದ್ಗಿಲ್ ವಿನಂತಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.