ಕಸ ವಿಲೇವಾರಿ ಮಾಡಲು ಮನವಿ

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಿದ್ಯಾಪೀಠ ವಾರ್ಡ್ ಸಂಖ್ಯೆ 106ರ ಮಂಜುನಾಥ ಕಾಲೊನಿಯಲ್ಲಿ ಮನೆಯ ಹಿಂಭಾಗದಲ್ಲಿ ಕಸದ ರಾಶಿ ಹಾಕಲಾಗುತ್ತಿದೆ. ಇಲ್ಲಿ ಹಾಕಿರುವ ಕಸ ವಿಲೇವಾರಿ ಮಾಡಲು ಪಾಲಿಕೆ ಸಿಬ್ಬಂದಿ ಬರುತ್ತಿಲ್ಲ. ಪಾಲಿಕೆಯ ಮಾರ್ಷಲ್ಗಳಿಗೆ ದೂರು ನೀಡಿದರೂ ಸ್ಪಂದಿಸುತ್ತಿಲ್ಲ. ಮನೆಯ ಹಿಂಭಾಗದಲ್ಲಿ ಕಸ ಹಾಕುತ್ತಿರುವ ಕಾರಣ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕಸದ ರಾಶಿ ವಿಲೇವಾರಿ ಮಾಡಬೇಕು.

-ಮಂಜುನಾಥ ಕಾಲೊನಿ ನಿವಾಸಿಗಳು

ಒಳಚರಂಡಿ ಕಾಮಗಾರಿಗೆ ವೇಗ ನೀಡಿ

ಕಮ್ಮನಹಳ್ಳಿ ವಾರ್ಡ್ ಸಂಖ್ಯೆ 28ರಲ್ಲಿ ಜಲಮಂಡಳಿಯಿಂದ ಸುಬ್ಬಯ್ಯನ ಪಾಳ್ಯದ ಅರಳಿಮರ ರಸ್ತೆಯ ಏಳನೇ ಅಡ್ಡರಸ್ತೆಯಿಂದ ಜೈಲಕ್ಷ್ಮಿ ಶಾಲೆ ರಸ್ತೆ ಹಾಗೂ ರಾಮಸ್ವಾಮಿಪಾಳ್ಯದ ಗ್ರಾಮಕ್ಕೆ ಸಂಪರ್ಕಿಸುವ ಒಳಚರಂಡಿ ಕಾಮಗಾರಿ ಪ್ರಾರಂಭಿಸಿ ಆರು ತಿಂಗಳು ಆಗಿದೆ. ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ. ಕಾಮಗಾರಿಯ ವೇಗ ಹೆಚ್ಚಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

-ಕಲೈವಣ್ಣನ್, ರಾಮಸ್ವಾಮಿಪಾಳ್ಯ

‘ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಿ’

ರಂಗ ಜಂಗಮ, ನಾಲ್ಕು ಕಂಬ ಕ್ರಾಸ್, ದೇವಗಿರಿ ಕ್ರಾಸ್ ಕಡೆಯಿಂದ ಕುಂಬಳಗೋಡಿಗೆ ತೆರಳಲು ಸರಿಯಾದ ಬಿಎಂಟಿಸಿ ಬಸ್ಗಳ ವ್ಯವಸ್ಥೆ ಇಲ್ಲ. ಈ ಭಾಗದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳಿದ್ದು, ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕಾರ್ಖಾನೆಗೆ ತೆರಳುವ ನೌಕರರು ಸಮಸ್ಯೆ ಎದುರಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಮಾರ್ಗದಲ್ಲಿ ಸಂಚರಿಸುವ ಬಸ್ಗಳ ಸಂಖ್ಯೆಯನ್ನು ಹೆಚ್ಚಿಸಬೇಕು.

-ಆರ್. ಶಂಕರಮಣಿ, ಜ್ಯೋತಿಲಕ್ಷ್ಮಿ, ವರುಣ, ಪ್ರಯಾಣಿಕರು

‘ಬೀದಿ ನಾಯಿಗಳ ಹಾವಳಿ ನಿಯಂತ್ರಿಸಿ’

ವಿದ್ಯಾರಣ್ಯಪುರದ ದೊಡ್ಡ ಬೊಮ್ಮಸಂದ್ರದ ಬಳಿ ಇರುವ ಭೀಮನಕಟ್ಟೆ ರಾಘವೇಂದ್ರ ಸ್ವಾಮಿ ಮಠದ ಹತ್ತಿರ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ವೃದ್ಧರು, ಮಹಿಳೆಯರು ಮತ್ತು ಮಕ್ಕಳ ಮೇಲೆ ದಾಳಿ ಮಾಡುತ್ತಿವೆ. ಮಕ್ಕಳು, ವೃದ್ಧರು ಈ ಬೀದಿಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟ ಪಾಲಿಕೆಯ ಅಧಿಕಾರಿಗಳು ಕೂಡಲೇ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕು.

-ಪುರೋಹಿತ್ ಮುರಳಿ, ದೊಡ್ಡ ಬೊಮ್ಮಸಂದ್ರ

‘ರಸ್ತೆ ಗುಂಡಿ ಮುಚ್ಚಿ’

ರಾಜರಾಜೇಶ್ವರಿ ವಿಧಾನಸಭಾ ಕ್ಷೇತ್ರದ ಕೊಟ್ಟಿಗೆಪಾಳ್ಯ ವಾರ್ಡ್ ಸಂಖ್ಯೆ 73ರ ಒಂಬತ್ತನೇಯ ಬ್ಲಾಕ್ಗೆ ಸಂಪರ್ಕಿಸುವ ರಸ್ತೆಯ ಮಧ್ಯದಲ್ಲಿ ಗುಂಡಿ ಬಿದ್ದಿದೆ. ವಾಹನ ಸವಾರರ ಸುರಕ್ಷತೆ ದೃಷ್ಟಿಯಿಂದ ಈ ಗುಂಡಿಯಲ್ಲಿ ಕಟ್ಟಿಗೆ, ಕಸ ಹಾಕಲಾಗಿದೆ. ಇದರಿಂದ ವಾಹನ ಸಂಚಾರಕ್ಕೆ ಅನನುಕೂಲವಾಗಿದೆ. ಗುಂಡಿ ಮುಚ್ಚುವಂತೆ ಮನವಿ ಮಾಡಿದರೂ ಪಾಲಿಕೆಯ ಅಧಿಕಾರಿಗಳು ಸ್ಪಂದಿಸುತ್ತಿಲ್ಲ.

-ರಾಮಣ್ಣ, ಕೊಟ್ಟಿಗೆಪಾಳ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.