ಬೆಂಗಳೂರು: ಮನೆಯನ್ನು ಭೋಗ್ಯಕ್ಕೆ ಕೊಡಿಸುವ ನೆಪದಲ್ಲಿ ₹25 ಕೋಟಿ ವಂಚಿಸಿದ ಆರೋಪದಡಿ ಕಂಪನಿಯೊಂದರ ಮೂವರು ಏಜೆಂಟ್ಗಳನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವೈಟ್ಫೀಲ್ಡ್ ನಿವಾಸಿಗಳಾದ ರಮಣ್, ನವೀನ್ ಹಾಗೂ ಸುಧೀರ್ ಬಂಧಿತರು.

ಪ್ರಮುಖ ಆರೋಪಿ ವಿವೇಕ್ ಕೇಶವನ್ ದುಬೈನಲ್ಲಿ ತಲೆಮರೆಸಿಕೊಂಡಿದ್ದು, ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಕೆಟಿನಾ ಹೋಮ್ಸ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಎಂಬ ಹೆಸರಿನ ಕಂಪನಿಯನ್ನು ವಿವೇಕ್ ಕೇಶವನ್ ಸ್ಥಾಪಿಸಿದ್ದ. ಈ ಕಂಪನಿಯ ಶಾಖೆಗಳು ಬಾಣಸವಾಡಿ, ಮಾರತ್ತಹಳ್ಳಿ, ವೈಟ್ಫೀಲ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಇದ್ದವು. ಕಟ್ಟಡದ ಮಾಲೀಕರಿಂದ ಕಡಿಮೆ ಬೆಲೆಗೆ ಮನೆಗಳನ್ನು ಭೋಗ್ಯಕ್ಕೆ ಪಡೆದು ಬಳಿಕ ತಮ್ಮ ಕಂಪನಿಯ ಮೂಲಕ ಸಾರ್ವಜನಿಕರಿಗೆ ಆ ಮನೆಗಳನ್ನು ಬಾಡಿಗೆಗೆ ನೀಡಲಾಗುತ್ತಿತ್ತು.

‘ಕಟ್ಟಡದ ಮಾಲೀಕರು ಹಾಗೂ ಬಾಡಿಗೆದಾರರ ನಡುವೆ ಮಧ್ಯವರ್ತಿಗಳಾಗಿ ಕಂಪನಿಯ ಪ್ರತಿನಿಧಿಗಳು ಕೆಲಸ ಮಾಡುತ್ತಿದ್ದರು. ನಗರದ ನೂರಾರು ಕಡೆ ಹಲವು ಮನೆಗಳನ್ನು ಈ ಕಂಪನಿ ಭೋಗ್ಯಕ್ಕೆ ಪಡೆದುಕೊಂಡಿತ್ತು. ಗ್ರಾಹಕರ ವಿಶ್ವಾಸವನ್ನೂ ಕಂಪನಿ ಪ್ರತಿನಿಧಿಗಳು ಗಳಿಸಿದ್ದರು. ಕೋವಿಡ್ ಕಾಲದಲ್ಲಿ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ತೆರಿಗೆ ವಂಚನೆ ಆರೋಪದ ಮೇರೆಗೆ ಕೆಟಿನಾ ಕಂಪನಿಯ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದರು. ಕಂಪನಿಗೆ ಸಂಬಂಧಿಸಿದ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಹಣಕಾಸಿನ ವಹಿವಾಟಿಲ್ಲದೇ ಕಂಪನಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿತ್ತು. ಆ ಸಂದರ್ಭದಲ್ಲಿ ಮನೆಯ ಮಾಲೀಕರಿಗೆ ಭೋಗ್ಯದ ಹಣವನ್ನು ಪಾವತಿಸಲಾಗದೇ ಆರೋಪಿಗಳು ವಂಚಿಸಿದ್ದರು. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ, ಸಂಪಿಗೆಹಳ್ಳಿ, ವೈಟ್ಫೀಲ್ಡ್, ಬಾಣಸವಾಡಿ ಠಾಣೆಗಳಲ್ಲಿ ಆರೋಪಿಗಳ ವಿರುದ್ಧ ವಂಚನೆಯ ಪ್ರಕರಣಗಳು ದಾಖಲಾಗಿದ್ದವು. ಎರಡು ದಿನಗಳ ಹಿಂದೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಇದುವರೆಗೂ ನಡೆದಿರುವ ತನಿಖೆಯಿಂದ ಅಂದಾಜು ₹25 ಕೋಟಿಯಷ್ಟು ವಂಚನೆ ನಡೆದಿದೆ ಎಂಬುದು ಗೊತ್ತಾಗಿದೆ. ಇದು ಬಹುಕೋಟಿ ವಂಚನೆ ಪ್ರಕರಣ ಆಗಿರುವ ಕಾರಣ ಮುಂದಿನ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಮೂಲಗಳು ಹೇಳಿವೆ.

‘ಕಂಪನಿಯ ಮಾಲೀಕ ವಿವೇಕ್, ರಾಜಕಾರಣಿಗಳು ಹಾಗೂ ಸಿನಿಮಾ ನಟ– ನಟಿಯರ ಜತೆಗೆ ಫೋಟೊ ತೆಗೆಸಿಕೊಳ್ಳುತ್ತಿದ್ದ. ಗಣ್ಯರ ಜತೆಗೆ ಇರುವ ಫೋಟೊಗಳನ್ನು ಬಳಸಿಕೊಂಡು ತಾನು ಪ್ರಭಾವಿ ಎಂಬುದಾಗಿ ಬಿಂಬಿಸಿಕೊಳ್ಳುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.