ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ತುರ್ತು ಸೇವೆಗೆ ‘12 ಗಂಟೆ ಪಾಸ್’

Last Updated 3 ಏಪ್ರಿಲ್ 2020, 21:09 IST
ಅಕ್ಷರ ಗಾತ್ರ

ಬೆಂಗಳೂರು: ವೈದ್ಯಕೀಯ ಸೇವೆ ಹಾಗೂ ಇತರೆ ತುರ್ತು ಕೆಲಸಗಳಿಗಾಗಿ ಮನೆಯಿಂದ ಹೊರಗೆ ಹೋಗುವ ವ್ಯಕ್ತಿಗಳಿಗೆ 12 ಗಂಟೆ ಮಿತಿಯ ಪಾಸ್‌ಗಳನ್ನು ಪೊಲೀಸರು ವಿತರಿಸುತ್ತಿದ್ದಾರೆ.

ನಗರದ ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಈ ಪಾಸ್‌ಗಳನ್ನು ನೀಡಲಾಗುತ್ತಿದೆ. ಪಾಸ್‌ ಪಡೆಯುವ ವ್ಯಕ್ತಿಯು ಠಾಣೆಗೆ ಹೋಗಿ ತುರ್ತು ಸೇವೆ ಬಗ್ಗೆ ತಿಳಿಸಬೇಕು. ಯಾವುದಾದರೂ ಗುರುತಿನ ಚೀಟಿಯ ಅಸಲು ಪ್ರತಿಯನ್ನು ಠಾಣೆಯಲ್ಲಿ ಠೇವಣಿ ಇಟ್ಟು ಪಾಸ್‌ ಪಡೆಯಬಹುದು.

‘ಗರ್ಭಿಣಿ, ಬಾಣಂತಿ, ಅಪಘಾತ, ಹೃದಯಾಘಾತ ಸೇರಿ ಹಲವು ತುರ್ತು ಸಂದರ್ಭಗಳಲ್ಲಿ ಜನರು ನಗರದಲ್ಲಿ ಸಂಚರಿಸಲೇ ಬೇಕು. ನಿಷೇಧಾಜ್ಞೆ ವೇಳೆ ಅಂಥವರಿಗೆ ತೊಂದರೆ ಆಗುವುದು ಗಮನಕ್ಕೆ ಬಂದಿತ್ತು. ಹೀಗಾಗಿ, 12 ಗಂಟೆಗಳ ಪಾಸ್‌ ಪರಿಚಯಿಸಿದ್ದೇವೆ’ ಎಂದು ನಗರದ ಹೆಚ್ಚುವರಿ ಕಮಿಷನರ್ (ಆಡಳಿತ) ಹೇಮಂತ್‌ ನಿಂಬಾಳ್ಕರ್ ತಿಳಿಸಿದರು.

‘ಅಗತ್ಯ ವಸ್ತುಗಳ ಸೇವೆಗಳಿಗೆ ಆನ್‌ಲೈನ್ ಮೂಲಕ ಪಾಸ್‌ ನೀಡಲಾಗುತ್ತಿದೆ. ವೈದ್ಯಕೀಯ ತುರ್ತು ಸೇವೆ ಪಡೆಯುವವರಿಗೆ, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಪಾಸ್‌ ಪಡೆಯಲು ತಡವಾಗುತ್ತದೆ. ಹೀಗಾಗಿ, ಆಯಾ ಠಾಣೆ ಇನ್‌ಸ್ಪೆಕ್ಟರ್‌ ಮೂಲಕ ಸ್ಥಳದಲ್ಲೇ 12 ಗಂಟೆಗಳ ಪಾಸ್ ನೀಡಲು ಸೂಚಿಸಲಾಗಿದೆ. ಅದಕ್ಕಾಗಿ ಪ್ರತಿ ಠಾಣೆಗೆ ತಲಾ 200 ಪಾಸ್‌ ನೀಡಲಾಗಿದೆ’ ಎಂದರು.

'12 ಗಂಟೆಯ ನಂತರ ಪಾಸನ್ನು ಠಾಣೆಗೆ ಹಿಂದಿರುಗಿಸಬೇಕು. ನಂತರವೇ ಗುರುತಿನ ಚೀಟಿಯನ್ನು ವಾಪಸು ಕೊಡಲಾಗುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT