ಚಾಮರಾಜಪೇಟೆಯ 5ನೇ ಮುಖ್ಯ ರಸ್ತೆಯನ್ನು ಸಂಪರ್ಕಿಸುವ 6ನೇ ಅಡ್ಡರಸ್ತೆಯಲ್ಲಿಯೂ ಕಾಮಗಾರಿ ನಡೆಯುತ್ತಿದೆ
ಪ್ರಜಾವಾಣಿ ಚಿತ್ರ: ರಂಜು ಪಿ.
ಬಸ್ ತಂಗುದಾಣ ಇದೆ ಎಂಬುದು ಗೊತ್ತೇ ಆಗದಂತೆ ಮಣ್ಣು ಕಸ ಸುರಿದಿರುವುದು
ಪ್ರಜಾವಾಣಿ ಚಿತ್ರ: ರಂಜು ಪಿ.
ಇಲ್ಲಿ ಶ್ರೀರಾಮ ಶಿಶುವಿಹಾರ ಶಕುಂತಲಾದೇವಿ ಹಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀದೇವಿ ರಾಮಣ್ಣ ಪ್ರೌಢಶಾಲೆಗಳಿವೆ. ಶಾಲೆಗೆ ಪ್ರವೇಶವೇ ಇಲ್ಲದಂತೆ ಅಗೆದು ಹಾಕಿದ್ದಾರೆ. ಪಕ್ಕದಲ್ಲೇ ಇರುವ ಸಿದ್ದಾರೂಢ ಪ್ರೌಢಶಾಲೆಯ ಬಳಿ ದೊಡ್ಡ ಹೊಂಡವನ್ನೇ ತೋಡಿದ್ದಾರೆ. ಹೀಗೆ ಮಾಡಿದರೆ ಮಕ್ಕಳು ಶಿಕ್ಷಕರು ಶಾಲೆಗೆ ಬರುವುದು ಹೇಗೆ? ಮಕ್ಕಳನ್ನು ಕರೆದುಕೊಂಡು ಹೋಗಲು ಹೆತ್ತವರು ಬರುವುದು ಹೇಗೆ?
-ಗೌರಮ್ಮ ಸ್ಥಳೀಯರು
ಒಂದು ಕಡೆ ಅಗೆದು ಪೈಪ್ ಅಳವಡಿಸಿ ಸರಿಯಾಗಿ ಮುಚ್ಚಿ ಮುಂದಕ್ಕೆ ಸಾಗಿದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲ ಕಡೆ ಅಗೆದು ಹೋಗಿ ಬಿಡುತ್ತಾರೆ. ಆಮೇಲೆ ಇನ್ನಾವತ್ತೋ ಒಂದು ದಿನ ಬಂದು ಪೈಪ್ ಅಳವಡಿಸುತ್ತಾರೆ. ಸರಿಯಾಗಿ ಮಣ್ಣು ಹಾಕಿ ಮುಚ್ಚುವುದೂ ಇಲ್ಲ. ಮಣ್ಣು ಒಟ್ಟಾರೆ ಹಾಕುವ ಬದಲು ಜೆಸಿಬಿಯಲ್ಲಿ ಸಮತಟ್ಟುಗೊಳಿಸಿ ಅಂದರೂ ಕೇಳುವುದಿಲ್ಲ. ಸಂಚಾರಕ್ಕೆ ತೊಡಕಾಗಿದೆ. ಜನರಿಗೆ ನಡೆದಾಡಲೂ ಕಷ್ಟವಾಗಿದೆ.
-ಲೋಕೇಶ್ ಟೈಲರ್
ನಾವು ಅಭಿವೃದ್ಧಿಯನ್ನು ವಿರೋಧಿಸುತ್ತಿಲ್ಲ. ಆದರೆ ನಿಧಾನವಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದೇವೆ. ಈ ರೀತಿ ಮಣ್ಣು ಅಗೆದು ಹಾಕಿ ಹೋದರೆ ನಾವೆಲ್ಲ ಅತ್ತಿತ್ತ ಹೋಗುವುದು ಹೇಗೆ? ಮನೆಗಳಿಗೆ ಅಂಗಡಿಗಳಿಗೆ ಹೋಗದ ಹಾಗೆ ಮಾಡಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು.