ವಿಶೇಷ ರೈಲುಗಳ ಅವಧಿಯನ್ನು ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ವಿಸ್ತರಿಸಲಾಗುತ್ತದೆ. ಮುಂಗಡವಾಗಿ ಕಾಯ್ದಿರಿಸುವವರಿಗೆ ಇದರಿಂದ ಸಮಸ್ಯೆಯಾಗುತ್ತಿದೆ. ಅಂದರೆ ಸೆಪ್ಟೆಂಬರ್ 30ಕ್ಕೆ ರೈಲಿನ ಅವಧಿ ಮುಕ್ತಾಯಗೊಳ್ಳುವುದಿದ್ದರೆ ಒಂದೆರಡು ದಿನ ಮುಂಚಿತವಾಗಿ ವಿಸ್ತರಣೆಯ ಆದೇಶವನ್ನು ರೈಲ್ವೆಯವರು ಹೊರಡಿಸುತ್ತಾರೆ. ಅಕ್ಟೋಬರ್ ಮೊದಲ ವಾರದಲ್ಲಿ ಸಂಚರಿಸಲು ಸೆಪ್ಟೆಂಬರ್‌ನಲ್ಲಿ ಅಥವಾ ಎರಡು ತಿಂಗಳು ಮುಂಚೆಯೇ ಕಾಯ್ದಿರಿಸಲು ಮುಂದಾದರೆ ವಿಸ್ತರಣೆಯ ಆದೇಶ ಬರುವವರೆಗೆ ಕಾಯ್ದಿರಿಸುವ ಅವಕಾಶ ನೀಡಿರುವುದಿಲ್ಲ ಎಂದು ರೈಲು ಪ್ರಯಾಣಿಕ ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ದಾವಣಗೆರೆಯ ರೇವಣಸಿದ್ದಪ್ಪ ತಿಳಿಸಿದರು.