ಬೆಂಗಳೂರು: ಮುರುಗೇಶ್ ಪಾಳ್ಯದ ಅತ್ಯಾಚಾರ ಪ್ರಕರಣದ ಆರೋಪಿ ಕ್ಯಾಬ್ ಡ್ರೈವರ್ ಮತ್ತು ಸಂತ್ರಸ್ತೆ ಮಹಿಳೆಗೂ ಮೊದಲೇ ಪರಿಚಯವಿತ್ತು ಎಂಬ ಅಂಶ ತನಿಖೆಯಿಂದ ತಿಳಿದುಬಂದಿದೆ.

ಆರೋಪಿ ದೇವರಾಜುಉ ಮತ್ತು 24 ವರ್ಷದ ಹೋಟೆಲ್ ಉದ್ಯೋಗಿ, ಸಂತ್ರಸ್ತೆಯು ದೂರವಾಣಿ ಸಂಖ್ಯೆಗಳನ್ನು ಸಹ ಪರಸ್ಪರ ಪಡೆದುಕೊಂಡಿದ್ದರು. ಹೋಟೆಲಿನಿಂದ ಕೆಲಸ ಮುಗಿಸಿ ತೆರಳುವಾಗ ಮತ್ತು ಪಾರ್ಟಿಗಳಿಂದವಿಳಂಬವಾದಾಗ ದೇವರಾಜುಲು ಅವರಿಗೆ ಮಹಿಳೆ ಕರೆ ಮಾಡುತ್ತಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ.

ಆಂಧ್ರಪ್ರದೇಶ ಮೂಲದ ಆರೋಪಿ ದೇವರಾಜುಲು ಸದ್ಯ 5 ದಿನಗಳ ಪೊಲೀಸ್ ಕಸ್ಟಡಿಯಲ್ಲಿದ್ದಾನೆ.

ಕೆಲವು ತಿಂಗಳ ಹಿಂದೆ ಮಹಿಳೆಗೆ ದೇವರಾಜುಲು ಪರಿಚಯವಾಗಿತ್ತು. ಕ್ಯಾಬ್ ಬುಕ್ ಮಾಡಿದ್ದ ಮಹಿಳೆಯು ಸಂಚಾರದ ವೇಳೆ ಪರಿಚಯ ಮಾಡಿಕೊಂಡಿದ್ದರು. ಯಾವಾಗ ಕ್ಯಾಬ್ ಬೇಕಾದರೂ ನನಗೇ ಕಾಲ್ ಮಾಡುವಂತೆ ದೇವರಾಜುಲು ತಿಳಿಸಿದ್ದ. ಬಳಿಕ, ಪರಸ್ಪರ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದರು.

ಬಳಿಕ, ಕೆಲವು ಬಾರಿ ದೇವರಾಜುಲುಗೆ ಕರೆ ಮಾಡಿ ಮಹಿಳೆ ಕ್ಯಾಬ್ ಪಡೆದಿದ್ದರು. ಇತ್ತೀಚಗೆ ಮತ್ತೊಮ್ಮೆ ಕ್ಯಾಬ್ ಬುಕ್ ಮಾಡಿದ್ದರು. ಆದರೆ, ಮಹಿಳೆ ನಿದ್ರೆಗೆ ಜಾರಿದ್ದ ಅವಕಾಶ ದುರುಪಯೋಗಪಡಿಸಿಕೊಂಡ ದೇವರಾಜುಲು ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.

ಆದರೆ, ಎಚ್ಎಸ್ಆರ್ ಲೇಔಟ್ನ ಹೋಟೆಲ್ನಿಂದ ಕರೆದುಕೊಂಡು ಬಂದ ದೇವರಾಜುಲು ಮುರುಗೇಶಪಾಳ್ಯದ ಆಕೆಯ ಅಪಾರ್ಟ್ಮೆಂಟ್ ಕಾಂಪ್ಲೆಕ್ಸ್ನ ಮುಂಭಾಗದಲ್ಲಿಯೇ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಏಕೆ ನಿರ್ಧರಿಸಿದನೆಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿದ್ರೆಗೆ ಜಾರಿದಾಗ ತನ್ನ ಮೇಲೆ ದೇವರಾಜುಲು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಪ್ರಜ್ಞೆ ಬಂದಾಗ ಅವನು ನನ್ನ ಮೇಲೆ ಅತ್ಯಾಚಾರ ನಡೆಸುತ್ತಿರುವುದು ಗಮನಕ್ಕೆ ಬಂದಿತು ಎಂದು ಸಂತ್ರಸ್ತ ಮಹಿಳೆ ಹೇಳಿದ್ಧಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.