ಬೆಂಗಳೂರು: ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ಮತ್ತು ‘ಫ್ರೀಡಂ ಕುಕ್ಕಿಂಗ್ ಆಯಿಲ್’ ಸಹಯೋಗದಲ್ಲಿ ರಾಜಾಜಿನಗರದ ಲುಲು ಮಾಲ್ನಲ್ಲಿ ಆ.31ರಂದು ಬೆಳಿಗ್ಗೆ 9.30ಕ್ಕೆ ‘ಕರುನಾಡ ಸವಿಯೂಟ’ ಸ್ಪರ್ಧೆ (ನಾಲ್ಕನೇ ಆವೃತ್ತಿ) ಆಯೋಜಿಸಲಾಗಿದೆ. ಅಡುಗೆ ಮಾಡಿ ತಂದು, ಸ್ಪರ್ಧಿಸಿ ಬಹುಮಾನ ಗೆಲ್ಲುವ ಅವಕಾಶವೂ ಇದೆ.

ರಾಜ್ಯದ ಅತಿದೊಡ್ಡ ಅಡುಗೆ ಸ್ಪರ್ಧೆಯ ಮೂರು ಆವೃತ್ತಿಗಳು ಈಗಾಗಲೇ ಬೇರೆ ಬೇರೆ ನಗರಗಳಲ್ಲಿ ನಡೆದಿವೆ. ಈಗ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ. ಗೆಳೆಯರು ಅಥವಾ ಕುಟುಂಬ ಸದಸ್ಯರೊಂದಿಗೆ ಆಸಕ್ತರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಅಡುಗೆ ಕೌಶಲದಿಂದ ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾಗಿ, ಆಕರ್ಷಕ ಬಹುಮಾನವನ್ನೂ ಗೆಲ್ಲಬಹುದು.

ಮನೆಯಲ್ಲಿ ತಯಾರಿಸಿದ ಒಂದು ಆಹಾರ ಪದಾರ್ಥವನ್ನು ಸ್ಪರ್ಧೆಗೆ ತರಬಹುದು. ‘ಒಗ್ಗರಣೆ ಡಬ್ಬಿ’ ಮುರುಳಿ ಮತ್ತು ನಿರೂಪಕಿ ಸುಚಿತ್ರಾ ನಡೆಸಿಕೊಡುವ ಅಡುಗೆ ಸಿದ್ಧಪಡಿಸುವುದರ ಕುರಿತ ಮಾಸ್ಟರ್ಕ್ಲಾಸ್ಗೆ ಹಾಜರಾಗಬಹುದು. ಸ್ಪರ್ಧೆಯಲ್ಲಿ ಆಹಾರ ಪದಾರ್ಥಗಳನ್ನು ಸವಿಯಲಿರುವ ಅವರು ತೀರ್ಪು ನೀಡಲಿದ್ದಾರೆ.

ಪ್ರಥಮ ಸ್ಥಾನ ಪಡೆದವರು ₹10,000, ದ್ವಿತೀಯ ಸ್ಥಾನ ಪಡೆದವರು ₹5,000, ಹಾಗೂ ತೃತೀಯ ಸ್ಥಾನ ಪಡೆದವರು ₹3,000 ನಗದು ಬಹುಮಾನ ಪಡೆಯಲಿದ್ದಾರೆ. ಅಲ್ಲದೇ ಮೆಚ್ಚುಗೆ ಪಡೆದವರಿಗೂ ವಿಶಿಷ್ಟ ಬಹುಮಾನ ದೊರೆಯಲಿದೆ. ವಿಜೇತರು ‘ಪ್ರಜಾವಾಣಿ’, ‘ಡೆಕ್ಕನ್ ಹೆರಾಲ್ಡ್’ ದಿನಪತ್ರಿಕೆಗಳಲ್ಲದೇ ‘ಸುಧಾ’ ವಾರಪತ್ರಿಕೆಯಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ಆಸಕ್ತರು, ಮನೆಯಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥದೊಂದಿಗೆ ಅಂದು ಬೆಳಿಗ್ಗೆ 9.30ರ ವೇಳೆಗೆ ಕಾರ್ಯಕ್ರಮದ ಸ್ಥಳದಲ್ಲಿ ಹಾಜರಿರಬೇಕು. ನೀವು ತರುವ ಆಹಾರ ಪದಾರ್ಥವು ಕರ್ನಾಟಕದ ಖಾದ್ಯ ಆಗಿರಬೇಕು. ರುಚಿ, ಹೊಸತನ ಹಾಗೂ ಪ್ರಸ್ತುತಿಯ ಮಾನದಂಡಗಳನ್ನು ಆಧರಿಸಿ ತೀರ್ಪು ನೀಡಲಾಗುತ್ತದೆ. ಆಹಾರ ಪದಾರ್ಥವನ್ನು ಇಡುವುದಕ್ಕೆ ಬೇಕಾದ ತಟ್ಟೆಗಳು, ಪರಿಕರಗಳು ಮತ್ತು ಅಗತ್ಯ ಖಾದ್ಯಾಲಂಕಾರ ಸಾಮಗ್ರಿಗಳನ್ನು ಸ್ಪರ್ಧಿಗಳೇ ತರಬೇಕು.

ಇಲ್ಲಿ ನೀಡಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ನೋಂದಣಿ ಮಾಡಿಕೊಳ್ಳಬಹುದು. ವಿವರಗಳಿಗೆ ಮೊಬೈಲ್ ಸಂಖ್ಯೆ: 7338018541 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.