ಊರಿಗೊಂದೇ ಸ್ಮಶಾನ ಇರಲಿ: ಶ್ರೀನಿವಾಸ್

ದಾಬಸ್ ಪೇಟೆ: ‘ಜಾತಿವಾರು ಸ್ಮಶಾನ ನಿರ್ಮಿಸುವ ಬದಲು, ಊರಿಗೊಂದೇ ಇರಲಿ. ಸಾವಿನಲ್ಲಿ ಭೇದ ಮಾಡುವುದು ಬೇಡ’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಹೇಳಿದರು.
ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿಯ ದೇವರಹೊಸಹಳ್ಳಿ ಗ್ರಾಮಕ್ಕೆ ಭಾನುವಾರ ಭೇಟಿ ನೀಡಿದ್ದ ಅವರಿಗೆ, ಎಸ್ಸಿ ಸಮುದಾಯಕ್ಕಾಗಿ ಒಂದು ಸ್ಮಶಾನ ನಿರ್ಮಿಸಲು ಜಾಗ ಗುರುತಿಸಿಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದಾಗ, ಈ ರೀತಿ ಪ್ರತಿಕ್ರಿಯಿಸಿದರು.
ಶ್ರೀನಿವಾಸ್ ಅವರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ ಗ್ರಾಮಸ್ಥರ ಕುಂದು–ಕೊರತೆ ಆಲಿಸಿದರು.
ಇದೇ ವೇಳೆ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ವಿತರಿಸಲಾಯಿತು.
ಉಪ ತಹಶೀಲ್ದಾರ್ ಕುಮಾರಸ್ವಾಮಿ, ಕಂದಾಯ ಅಧಿಕಾರಿ ಪಂಚಾಕ್ಷರಿ, ಗ್ರಾಮ ಲೆಕ್ಕಿಗ ರೋಹಿತ್ ಹಾಗೂ ಬಾಲಕೃಷ್ಣ ಇದ್ದರು.
ನೆಲಮಂಗಲ ತಹಶೀಲ್ದಾರ್ ಮಂಜುನಾಥ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.