ರಾಜರಾಜೇಶ್ವರಿ ನಗರ: ‘ಅಶಕ್ತರು, ನೊಂದವರು ಅನಾಥರ ಸೇವೆ ಮಾಡುವ ಮೂಲಕ ಮಾನವೀಯ ಮೌಲ್ಯಗಳನ್ನು ರೂಡಿಸಿಕೊಳ್ಳಬೇಕು’ ಎಂದು ಕೆಪಿಸಿಸಿ ವಕ್ತಾರೆ ಎಚ್.ಕುಸುಮಾ ಹನುಮಂತ ರಾಯಪ್ಪ ತಿಳಿಸಿದರು.

ಮಾಗಡಿ ಮುಖ್ಯ ರಸ್ತೆಯ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಮಾಜಿ ಸಂಸದ ಡಿ.ಕೆ. ಸುರೇಶ್ ಅವರ ಅಭಿಮಾನಿ ಬಳಗ ವತಿಯಿಂದ ನಿರಾಶ್ರಿತರಿಗೆ ಹಣ್ಣು, ಬೆಡ್ಶೀಟ್, ಕಂಬಳಿ ವಿತರಿಸಿ ಅವರು ಮಾತನಾಡಿದರು.

ಅಧಿಕಾರ, ಅಂತಸ್ತು ಯಾವುದು ಶಾಶ್ವತವಲ್ಲ ಬಡವರ ಅನಾಥರ, ಅಶಕ್ತರ ಸಂಕಷ್ಟಗಳಿಗೆ ಮಿಡಿಯುವ ಮೂಲಕ ಮಾನವ ಧರ್ಮ ಪಾಲಿಸಬೇಕೆಂದು ತಿಳಿಸಿದರು.

ಕೊಟ್ಟಿಗೆಪಾಳ್ಯ ಬಿಬಿಎಂಪಿ ಮಾಜಿ ಸದಸ್ಯ ಮೋಹನ್ ಕುಮಾರ್ ಮಾತನಾಡಿ, ‘ನಿರಾಶ್ರಿತರ ಸೇವೆಯೇ ದೇವರ ಸೇವೆ’ ಎಂದು ಬಣ್ಣಿಸಿದರು. ಸಂದರ್ಭದ ಕಾಲ ಸುಳಿಗೆ ಸಿಲುಕಿ ಬಂಧು ಬಾಂಧವರ ಒಡನಾಟವಿಲ್ಲದೆ ಜೀವನ ಸಾಗಿಸುತ್ತಿರುವ ಅವರ ನೆರವಿಗೆ ಧಾವಿಸ ಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಬೇಕಿದೆ’ ಎಂದರು.

ರಾಜರಾಜೇಶ್ವರಿ ನಗರಸಭಾ ವಿಧಾನಸಭಾ ಕ್ಷೇತ್ರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಂಪುರ ನಾಗೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ. ಅಮರ್ನಾಥ್, ರಮೇಶ್ ಗೌಡ, ಜ್ಯೋತಿ, ರಾಜೇಶ್ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.