ಬೆಂಗಳೂರು: ಸಾಲುಮರದ ತಿಮ್ಮಕ್ಕ ಅವರ ಸ್ಮರಣಾರ್ಥ ಪೀಣ್ಯದ ಖಾಸಗಿ ಶಾಲೆಯಲ್ಲಿ ಭಾರತಿದರ್ಶ್ ಫೌಂಡೇಷನ್ ವತಿಯಿಂದ ಆಲದ ಮರದ ಸಸಿ ನೆಡುವಿಕೆ ಮತ್ತು ಶಾಲಾ ಮಕ್ಕಳಿಗೆ ಉಚಿತ ದಂತ ಚಿಕಿತ್ಸಾ ಶಿಬಿರ ಗುರುವಾರ ನಡೆಯಿತು.

ಎಲ್.ಬಿ.ಎಸ್. ಆಟೊಮೇಷನ್ ಸಿಸ್ಟಮ್ ಮಾಲೀಕ ಎನ್.ಕೆ. ಬಸವರಾಜ, ಪಿ.ಎಂ. ಲೀಲಾವತಿ, ಭೂಷಣ್, ಮೋನಿಕಾ ಪ್ರಮೋದ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ ಅವರ ಬದುಕಿನ ಸಾಧನೆಯನ್ನು ನೆನಪಿಸಿಕೊಂಡು, ಆಲದ ಮರದ ಸಸಿಗೆ ನೀರು ಹಾಕಿ ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲಾಯಿತು. 500ಕ್ಕೂ ಹೆಚ್ಚು ಮಕ್ಕಳಿಗೆ ದಂತ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಯಿತು.

‘ಸಾಲು ಮರದ ತಿಮ್ಮಕ್ಕ ಅವರಂಥ ಪರಿಸರವಾದಿಯನ್ನು ನೋಡುವುದು ಬಹಳ ಕಷ್ಟ. ಮಕ್ಕಳಿಲ್ಲದ ಕೊರಗನ್ನು ತೊರೆದು ಹಾಕಲು ಹುಲಿಕಲ್ ಮತ್ತು ಕುದೂರು ತನಕ ತಮ್ಮ ಮಕ್ಕಳೆಂದು ಭಾವಿಸಿ ಒಟ್ಟು 8 ಸಾವಿರ ಆಲದ ಮರದ ಸಸಿ ನೆಟ್ಟರು. ಅಲ್ಲದೆ, ಪ್ರತಿನಿತ್ಯ ಹತ್ತಾರು ಮೈಲಿ ನಡೆದು ನೀರು ಹಾಕುತ್ತಿದ್ದರು. ಆ ಮರಗಳು ಹೆಮ್ಮರವಾಗಿ ಬೆಳೆದು ಈಗ ನೆರಳು, ಗಾಳಿ, ಒಳ್ಳೆಯ ವಾತವರಣ ನೀಡುತ್ತಿವೆ. ರಾಜ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರ ಪ್ರಶಸ್ತಿ ಹೀಗೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಅವರ ಬದುಕು ಯುವ ಪೀಳಿಗೆಗೆ ಆದರ್ಶ’ ಎಂದು ಭಾರತಿದರ್ಶ್ ಫೌಂಡೇಷನ್ನ ಶೈಲೇಂದ್ರ ಪಾಟೀಲ್ ಹೇಳಿದರು.

‘ಸಾಲುಮರದ ತಿಮ್ಮಕ್ಕ ಅವರ ನೆನಪಿನಲ್ಲಿ ಮುಂದಿನ ಎರಡು ವರ್ಷಗಳಲ್ಲಿ 10 ಸಾವಿರ ಆಲದ ಮರದ ಸಸಿಗಳನ್ನು ನೆಡುವ ಗುರಿಯಿದೆ’ ಎಂದೂ ಹೇಳಿದರು.

‘ಉಚಿತವಾಗಿ, ಶಸ್ತ್ರ ಚಿಕಿತ್ಸೆ, ವೃದ್ಧಾಶ್ರಮ ಸೌಲಭ್ಯ, ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಬಡ ರೋಗಿಗಳಿಗೆ ಉಚಿತ ಆಂಬುಲೆನ್ಸ್ ವ್ಯವಸ್ಥೆ, ಕುಡಿಯುವ ನೀರು, ಪ್ಲಾಸ್ಟಿಕ್ ಮುಕ್ತ ಬೆಂಗಳೂರು, ವಿಕಲಾಂಗ ಮಕ್ಕಳ ಸಮಸ್ಯೆ, ಉಚಿತ ಕಾನೂನು ಸಲಹೆಗಾಗಿ ನಮ್ಮ ಜಾಲ ತಾಣವನ್ನು contact@bharathidarshfoundation.com ಸಂಪರ್ಕಿಸಬಹುದು’ ಎಂದೂ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಜುನಾಥ್, ನರಸಮ್ಮ, ಎಂ. ಮುನಿರಾಜು ಮುಂತಾದವರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.