ಬೆಂಗಳೂರು: ನಗರ ಪಾಲಿಕೆಗಳ ಆಡಳಿತದಲ್ಲಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುತ್ತಿದ್ದರೂ, ಚುನಾವಣೆ ಆಗುವವರೆಗೂ ಮುಖ್ಯ ಆಯುಕ್ತರ ಅಡಿಯಲ್ಲೇ ಐದೂ ನಗರ ಪಾಲಿಕೆಗಳ ಆಯುಕ್ತರು ಕಾರ್ಯನಿರ್ವಹಿಸಲಿದ್ದಾರೆ.

ಜಿಬಿಎ ಹಾಗೂ ನಗರ ಪಾಲಿಕೆಯ ಪ್ರಸ್ತಾವಿತ ಕಾರ್ಯನಿರ್ವಹಣೆಯ ಪಟ್ಟಿಯಂತೆ (ಆರ್ಗನೈಸೇಷನ್ ಚಾರ್ಟ್) ಬೃಹತ್ ಕಾಮಗಾರಿಗಳನ್ನು ನಿರ್ವಹಿಸುವ ಬಿ–ಸ್ಮೈಲ್ ಸೇರಿದಂತೆ ಜಿಬಿಎನಲ್ಲಿ ತಾಂತ್ರಿಕ ಜಾಗೃತಿ ಕೋಶ (ಟಿವಿಸಿಸಿ), ಗುಣಮಟ್ಟ ನಿಯಂತ್ರಣ (ಕ್ಯೂಸಿ), ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತ (ಬಿಎಸ್ಡಬ್ಲ್ಯುಎಂಎಲ್), ಯೋಜನೆ ವಿಭಾಗಗಳು ಜಿಬಿಎ ಮುಖ್ಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ.

ಟಿವಿಸಿಸಿ, ಕ್ಯೂಸಿ, ಬಿಎಸ್ಡಬ್ಲ್ಯುಎಂಎಲ್, ಯೋಜನೆ ವಿಭಾಗಗಳ ಮುಖ್ಯ ಎಂಜಿನಿಯರ್ಗಳಿಗೆ ತಲಾ ಒಬ್ಬರು ಅಧೀಕ್ಷಕ ಎಂಜಿನಿಯರ್ (ಎಸ್ಇ), ತಲಾ 10 ಕಾರ್ಯಪಾಲಕ ಎಂಜಿನಿಯರ್ (ಇಇ), ತಲಾ 20 ಸಹಾಯಕ ಕಾರ್ಯಪಾಲಕ ಎಂಜಿನಿಯರ್ (ಎಇಇ), ತಲಾ 20 ಸಹಾಯಕ ಎಂಜಿನಿಯರ್ (ಎಇ) ಇರಲಿದ್ದಾರೆ. ಬಿ–ಸ್ಮೈಲ್ನಲ್ಲಿ ಸಿಒಒ ಜೊತೆಗೆ ನಾಲ್ವರು ಮುಖ್ಯ ಎಂಜಿನಿಯರ್, ನಾಲ್ವರು ಎಸ್ಇ, 20 ಇಇ, 30 ಎಇಇ, 50 ಎಇಗಳಿರುತ್ತಾರೆ.

ಜಿಬಿಎ ಮುಖ್ಯ ಆಯುಕ್ತರಡಿ ಐದು ಪಾಲಿಕೆಗಳ ಆಯುಕ್ತರು ಕಾರ್ಯನಿರ್ವಹಿಸಬೇಕಿದೆ. ನಗರ ಪಾಲಿಕೆಯ ಹೆಚ್ಚುವರಿ ಆಯುಕ್ತರು ಕಂದಾಯ, ಆಸ್ತಿ, ಮಾರುಕಟ್ಟೆ, ಆಡಳಿತ, ಹಣಕಾಸು, ಜಾಹೀರಾತು, ಸರ್ವೆ, ಮಾಹಿತಿ ತಂತ್ರಜ್ಞಾನ ವಿಭಾಗದ ಜವಾಬ್ದಾರಿ ನೀಡಲಾಗಿದೆ. ಜಂಟಿ ಆಯುಕ್ತರಿಗೆ ಯೋಜನೆ, ಆರೋಗ್ಯ–ಸ್ವಾಸ್ಥ್ಯ, ಶಿಕ್ಷಣ, ಅರಣ್ಯ–ತೋಟಗಾರಿಕೆ– ಕೆರೆ, ನಗರ ಯೋಜನೆ, ಟಿಡಿಆರ್, ಕಲ್ಯಾಣ ವಿಭಾಗಗಳನ್ನು ಹಂಚಲಾಗಿದೆ. ಜಿಬಿಎನಲ್ಲಿರುವ ವಿಶೇಷ ಆಯುಕ್ತರು ಹೆಚ್ಚುವರಿ– ಜಂಟಿ ಆಯುಕ್ತರು ಹೊಂದಿರುವ ಜವಾಬ್ದಾರಿಗಳನ್ನೇ ಹೊಂದಿದ್ದು, ಅವರು ಇವರ ಮೇಲೆ ಹಿಡಿತ ಸಾಧಿಸಲಿದ್ದಾರೆ.

ನಗರ ಪಾಲಿಕೆಗಳಲ್ಲಿ ತಲಾ ಮೂವರು ಮುಖ್ಯ ಎಂಜಿನಿಯರ್ಗಳಿರುತ್ತಾರೆ. ಯೋಜನೆ ಹಾಗೂ ವಲಯ ಮಟ್ಟದ ಕಾಮಗಾರಿಗಳನ್ನು ಇವರು ನಿರ್ವಹಿಸಲಿದ್ದಾರೆ. ವಾರ್ಡ್ ಎಂಜಿನಿಯರಿಂಗ್ ಕಾಮಗಾರಿ, ತ್ಯಾಜ್ಯ ನಿರ್ವಹಣೆ, ಬೀದಿ ದೀಪ, 50 x 80 ಅಡಿಗಳವರೆಗಿನ ಕಟ್ಟಡಗಳಿಗೆ ನಕ್ಷೆ ಅನುಮೋದನೆಗೆ ಸಿಒ– ವಾರ್ಡ್ ಎಂಬ ಹುದ್ದೆ ಸೃಷ್ಟಿಸಲಾಗಿದೆ.

ಕಾರ್ಯಾಚರಣೆಗೆ ಸಿದ್ಧತೆ: ಮಹೇಶ್ವರ್ ರಾವ್

‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ (ಜಿಬಿಎ) ಕಾರ್ಯಕಲಾಪಗಳನ್ನು ನಡೆಸಲು ಸಜ್ಜಾಗಿದ್ದು ಐದು ನಗರ ಪಾಲಿಕೆಗಳ ರಚನೆಯ ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ನಿಯೋಜಿತ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು. ‘198 ವಾರ್ಡ್ಗಳು ನಗರ ಪಾಲಿಕೆಗಳಿಗೆ ವಿಂಗಡಣೆಯಾಗಲಿದ್ದು ಅದರಂತೆಯೇ ಕಾರ್ಯನಿರ್ವಹಿಸಲಿವೆ. ಕಾಮಗಾರಿಗಳು ಅಥವಾ ಬಿಲ್ ಪಾವತಿಗೆ ಅಷ್ಟೇನು ತೊಂದರೆಯಾಗದು. ಬಿಬಿಎಂಪಿ ಬಜೆಟ್ ಅನ್ನೇ ಮುಂದುವರಿಸಲಾಗುತ್ತದೆ. ನಗರ ಪಾಲಿಕೆಗಳು ರಚನೆಗೊಂಡ ಮೇಲೆ ಅವರಿಗೆ ಅನುಸಾರವಾಗಿ ಪುನರ್ ವಿಮರ್ಶೆ ಮನವಿಯನ್ನು ಸಲ್ಲಿಸಿದರೆ ಜಿಬಿಎ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುತ್ತದೆ’ ಎಂದು ಸುದ್ದಿಗಾರರಿಗೆ ಸೋಮವಾರ ಮಾಹಿತಿ ನೀಡಿದರು.

‘ಟೇಬಲ್ಗಳು ಹೆಚ್ಚಾಗಲಿವೆ’

ನಗರ ಪಾಲಿಕೆಯ ಆಡಳಿತದ ಮೇಲೆ ಜಿಬಿಎ ನಿಯಂತ್ರಣವಿರುವುದಿಲ್ಲ ಎಂದು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಗೆ ತಿದ್ದುಪಡಿಯನ್ನೂ ತರಲಾಗಿದೆ. ಆದರೆ ಈಗ ಪ್ರಸ್ತಾಪಿಸಿರುವ ಕಾರ್ಯಾಚರಣೆ ಪಟ್ಟಿಯಲ್ಲಿ ನಗರ ಪಾಲಿಕೆಗಳ ಎಲ್ಲ ಕಾರ್ಯವ್ಯಾಪ್ತಿಯೂ ಜಿಬಿಎ ಆಣತಿಯಂತೆಯೇ ನಡೆಯಲಿದೆ. ಮುಖ್ಯ ಆಯುಕ್ತರಲ್ಲದೆ ಜಿಬಿಎಯಲ್ಲಿರುವ ವಿಶೇಷ ಆಯುಕ್ತರು ಪಾಲಿಕೆಗಳ ಎಲ್ಲ ವಿಭಾಗಗಳ ಮೇಲೆ ನಿಗಾ ವಹಿಸಿ ನಿಯಂತ್ರಣ ಸಾಧಿಸಲಿದ್ದಾರೆ. ‘ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆದು ಕಾರ್ಪೊರೇಟರ್ಗಳು ಬರುವವರೆಗೂ ಅಧಿಕಾರಿಗಳದ್ದೇ ಆಟವಾಗಿರುತ್ತದೆ. ಈಗಾಗಲೇ ಬಿಬಿಎಂಪಿಗೆ ಚುನಾವಣೆಯಾಗದೆ ಐದು ವರ್ಷವಾಗುತ್ತಿದೆ. ಗ್ರೇಟರ್ ಬೆಂಗಳೂರಾಗಿ ಐದು ನಗರ ಪಾಲಿಕೆಗಳಾದ ಮೇಲೆ ಕಾಮಗಾರಿಯೊಂದಕ್ಕೆ ಹಲವು ಅಧಿಕಾರಿಗಳ ಒಪ್ಪಿಗೆ ಪಡೆಯುವ ಟೇಬಲ್ಗಳು ಹೆಚ್ಚಾಗಲಿವೆ’ ಎಂದು ಇಬ್ಬರು ಮಾಜಿ ಮೇಯರ್ಗಳು ಅಭಿಪ್ರಾಯಪಟ್ಟರು.

ಆಯಾ ಪಾಲಿಕೆಗೆ ಎ, ಬಿ, ಸಿ, ಡಿ ನೌಕರರು

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎ, ಬಿ, ಸಿ, ಡಿ ವೃಂದದ ನೌಕರರು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಯು ಹೊಸದಾಗಿ ರಚನೆಯಾಗುವ ಯಾವ ನಗರ ಪಾಲಿಕೆಗೆ ಬರುತ್ತದೋ ಅದರಡಿ ಕೆಲಸ ನಿರ್ವಹಿಸುವಂತೆ ನಗರಾಭಿವೃದ್ಧಿ ಇಲಾಖೆ ಸೋಮವಾರ ಅಧಿಸೂಚನೆ ಹೊರಡಿಸಿದೆ.

ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಬಿಬಿಎಂಪಿ ನಿರಶನಗೊಂಡಿರುವುದ ರಿಂದ, ಬಿಬಿಎಂಪಿಗೆ ಮಂಜೂರಾಗಿರುವ ವಿವಿಧ ವೃಂದದ ಹುದ್ದೆಗಳನ್ನು ಮರು ಹಂಚಿಕೆ ಮಾಡಲಾಗಿದೆ.

ಜಿಬಿಎಗೆ ಅಥವಾ ಇತರೆ ನಗರ ಪಾಲಿಕೆಗೆ ವರ್ಗಾಯಿಸಲು ನಿರ್ದಿಷ್ಟ ಆದೇಶ ಹೊರಡಿಸಿದರೆ ಮಾತ್ರ ಅವರು ಬೇರೆಡೆಗೆ ಹೋಗಬಹುದು. 198 ವಾರ್ಡ್ ಕಚೇರಿಗಳು ಯಾವ ನಗರ ಪಾಲಿಕೆಗಳ ವ್ಯಾಪ್ತಿಗೆ ಬರುತ್ತವೋ ಅಲ್ಲಿಯೇ ಆ ಸಿಬ್ಬಂದಿಯ ಕೆಲಸ ಮುಂದುವರಿಯುತ್ತದೆ.

ಬಿಬಿಎಂಪಿ ಕೇಂದ್ರ ಕಚೇರಿ ಅಥವಾ ಯಾವುದೇ ಕಚೇರಿಯಲ್ಲಿರುವ ಸಿಬ್ಬಂದಿಯ ಹುದ್ದೆ ಮುಂದುವರಿಸಿರುವ ಆದೇಶವಿಲ್ಲದಿದ್ದರೆ, ಅಂತಹವರು ಸರ್ಕಾರ ಅಥವಾ ಜಿಬಿಎಯಲ್ಲಿ ಸ್ಥಳ ನಿರೀಕ್ಷಣೆಗಾಗಿ ವರದಿ ಮಾಡಿಕೊಳ್ಳಬೇಕು.ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ಅಧಿಕಾರಿಗಳು ಜಿಬಿಎ ಮುಖ್ಯ ಆಯುಕ್ತರ ಬಳಿ ವರದಿ ಮಾಡಿಕೊಂಡು, ಐದು ನಗರ ಪಾಲಿಕೆಗಳು, ಬಿ-ಸ್ಮೈಲ್ ಗೆ ಕಡತಗಳನ್ನು ವರ್ಗಾಯಿಸುವ ಪೂರ್ಣ ಜವಾಬ್ದಾರಿ ನಿಭಾಯಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ವ್ಯವಸ್ಥಾಪಕರು, ಎಫ್ ಡಿಎ, ಎಸ್ ಡಿಎ, ಸ್ಟೆನೊಗ್ರಾಫರ್, ಚಾಲಕರು ಮತ್ತು ಗ್ರೂಪ್-ಡಿ ನೌಕರರು (1,820), ಲೆಕ್ಕಾಧಿಕಾರಿಗಳು (44), ಆಡಳಿತ ವಿಭಾಗ (3), ಕ್ಲಿನಿಕಲ್ ಹೆಲ್ತ್, ಕೌನ್ಸಿಲ್, ಶಿಕ್ಷಣ, ಮುಖ್ಯ- ಅಧೀಕ್ಷಕ- ಕಾರ್ಯಪಾಲಕ, ಸಹಾಯಕ, ಕಿರಿಯ ಎಂಜಿನಿಯರ್ ಗಳು, ಅರಣ್ಯ, ಕಾನೂನು ಘಟಕ, ತೋಟಗಾರಿಕೆ, ಮಾಹಿತಿ ತಂತ್ರಜ್ಞಾನ, ಸಾರ್ವಜನಿಕ ಆರೋಗ್ಯ, ಸಾರ್ವಜನಿಕ ಸಂಪರ್ಕಾಧಿಕಾರಿ, ಕಂದಾಯ, ಆಸ್ತಿ, ಜಾಹೀರಾತು, ಟಿಡಿಆರ್, ಮಾರುಕಟ್ಟೆ, ನೈರ್ಮಲ್ಯ, ಪೌರಕಾರ್ಮಿಕರು, ಸರ್ವೆ, ನಗರ ಯೋಜನೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಜಿಬಿಎ ಹಾಗೂ ಐದು ನಗರ ಪಾಲಿಕೆಗಳು, ವಲಯ ಕಚೇರಿಗಳಿಗೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ.

‘ಉಪ ಆಯುಕ್ತರಿಗೆ ಆಯುಕ್ತರ ಹೊಣೆ’

ಬೆಂಗಳೂರು: ‘ಆಡಳಿತಾತ್ಮಕ ಅನುಭವ ಇರುವ, ಉಪ ಆಯುಕ್ತ ರುಗಳಾಗಿ ಕೆಲಸ ನಿರ್ವಹಿಸಿರುವ ಹಿರಿಯ ಅಧಿಕಾರಿಗಳನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳಿಗೆ ಆಯುಕ್ತರನ್ನಾಗಿ ನೇಮಿಸಲು ತೀರ್ಮಾನಿಸಲಾಗಿದೆ’ ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಅಧಿಕಾರಿಗಳ ಜೊತೆ ಸೋಮವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಯಾವ, ಯಾವ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು’ ಎಂದರು.

‘ಸ್ಥಳೀಯವಾಗಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನೇ ಪಾಲಿಕೆಗಳಿಗೆ ನಿಯೋಜನೆ ಮಾಡಲಾಗುವುದು’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.