ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತೀ ಸುರಕ್ಷಿತ ವಾಹನ ನೋಂದಣಿ ಫಲಕ: ಆದೇಶ ಹಿಂಪಡೆಯಲು ಒತ್ತಾಯ

Published 13 ಸೆಪ್ಟೆಂಬರ್ 2023, 14:23 IST
Last Updated 13 ಸೆಪ್ಟೆಂಬರ್ 2023, 14:23 IST
ಅಕ್ಷರ ಗಾತ್ರ

ಬೆಂಗಳೂರು: ವಾಹನಗಳ ಮೇಲೆ ಅತೀ ಸುರಕ್ಷಿತ ನೋಂದಣಿ ಫಲಕ (ಎಚ್‌ಎಸ್‌ಆರ್‌ಪಿ) ಅಳವಡಿಸುವ ಬಗ್ಗೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆ ದೋಷಪೂರಿತವಾಗಿದೆ ಎಂದು ಅಖಿಲ ಕರ್ನಾಟಕ ವಾಹನ ನಂಬರ್‌ ಪ್ಲೇಟ್ಸ್‌ ತಯಾರಕರು ಮತ್ತು ಮಾರಾಟಗಾರರ ಸಂಘ ದೂರಿದೆ.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಗೌರವ ಅಧ್ಯಕ್ಷ ಎಸ್.ಎನ್. ಜಿತೇಂದ್ರ, ‘ರಾಜ್ಯ ಸರ್ಕಾರ 2023ರ ಆಗಸ್ಟ್‌ 17ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಅಧಿಕೃತ ವಾಹನ ತಯಾರಕರು ಮಾತ್ರ ನೋಂದಣಿ ಫಲಕ ಅಳವಡಿಸಬೇಕೆಂದು ತಿಳಿಸಿದೆ. ನೋಂದಣಿ ಫಲಕ ತಯಾರಿಸಲು ಅನ್ಯ ರಾಜ್ಯಗಳ ರೋಸ್‌ಮಾಟಾ, ಸಿನೆಕಸ್‌, ಸೆಲೆಕಸ್‌ ಮತ್ತು ಎಫ್‌ಟಿಎ ಎಂಬ ನಾಲ್ಕು ಕಂಪನಿಗಳಿಗೆ ಮಾತ್ರ ಅವಕಾಶ ನೀಡಿದೆ. ಇದು, ಕೇಂದ್ರ ಮೋಟಾರು ವಾಹನ ಕಾಯ್ದೆ ಮತ್ತು ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ತಿಳಿಸಿದರು.

‘ಸರ್ಕಾರದ ಅಂಕಿ–ಅಂಶಗಳ ಪ್ರಕಾರ ರಾಜ್ಯದಲ್ಲಿ ಸದ್ಯ 2,10,78,000 ವಾಹನಗಳಿದ್ದು, ಈ ಎಲ್ಲ ವಾಹನಗಳ ನೋಂದಣಿ ಫಲಕಗಳನ್ನು ಬದಲಾಯಿಸಲು ನವೆಂಬರ್‌ 17ರವರೆಗೆ ಗಡುವು ನೀಡಲಾಗಿದೆ. ಕೇವಲ ನಾಲ್ಕು ಕಂಪನಿಗಳಿಂದ ಇದು ಸಾಧ್ಯವಿಲ್ಲ. ಜತೆಗೆ, ನೋಂದಣಿ ಸಂಖ್ಯೆ ಬದಲಾಯಿಸಲು ದುಪ್ಪಟ್ಟು ಹಣ ಪಡೆಯುತ್ತಿದ್ದಾರೆ’ ಎಂದು ಆರೋಪಿಸಿದರು.

‘ಇದುವರೆಗೆ ಕೇವಲ 14 ರಿಂದ 15 ಸಾವಿರ ವಾಹನಗಳ ನೋಂದಣಿ ಸಂಖ್ಯೆಗಳನ್ನು ಬದಲಾಯಿಸಲಾಗಿದೆ. ರಾಜ್ಯದಲ್ಲಿರುವ ಇತರೆ ಕಂಪನಿಗಳಿಗೆ ಸರ್ಕಾರ ಅವಕಾಶ ಕಲ್ಪಿಸಬೇಕು. ಇಲ್ಲದಿದ್ದರೆ ಎಚ್‌ಎಸ್‌ಆರ್‌ಪಿ ಉದ್ಯಮ ಅವಲಂಬಿಸಿರುವ 25 ಸಾವಿರ ಕುಟಂಬಗಳು ಜೀವನ ನಿರ್ವಹಣೆ ಕಷ್ಟವಾಗಲಿದೆ. ಸರ್ಕಾರ ಕೂಡಲೇ ಈ ಸುತ್ತೋಲೆಯನ್ನು ಹಿಂಪಡೆಯಬೇಕು. ಇಲ್ಲದಿದ್ದರೆ, ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಸ್. ಸತೀಶ್, ಕಾರ್ಯದರ್ಶಿ ಇಮ್ರಾನ್, ಸದಸ್ಯ ಅಕ್ರಂ ಪಾಷಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT