ಶುಕ್ರವಾರ, ಜನವರಿ 27, 2023
26 °C

ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಮೂರು ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ಶನಿವಾರ ರಾತ್ರಿ ದಾಳಿ ಮಾಡಿದ್ದು, ಮಾಲೀಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

‘ಅವಧಿ ಮೀರಿ ವಹಿವಾಟು ನಡೆಸುತ್ತಿದ್ದ ಮಾಹಿತಿ ಇತ್ತು. ಹೀಗಾಗಿ, ಜೀವನ್‌ಬಿಮಾನಗರದ ಕಶೀಶ್ ಕೆಫೆ, ಕಮರ್ಷಿಯಲ್
ಸ್ಟ್ರೀಟ್‌ನ ಬುರ್ನೌಟ್ ಕೆಫೆ ಹಾಗೂ ಮಡಿವಾಳದ ದಿ ಎಮಿರೆಟ್ಸ್ ಶೇಷಾ ಹೋಟೆಲ್‌ ಆ್ಯಂಡ್ ರೆಸ್ಟೋರೆಂಟ್‌ನ ಹುಕ್ಕಾ ಬಾರ್ ಮೇಲೆ ದಾಳಿ ಮಾಡಲಾಗಿದೆ. ನಗದು, ಹುಕ್ಕಾ ಸಾಮಗ್ರಿ ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು