ಬೆಂಗಳೂರು: ಪೊಲೀಸರ ಸೋಗಿನಲ್ಲಿ ಬಂದು ವ್ಯಾಪಾರಿಯೊಬ್ಬರನ್ನು ಅಪಹರಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ಧಾರೆ.

ಮುಜಮಿಲ್ ಅಲಿಯಾಸ್ ಮುಜ್ಜು, ಸೈಯದ್ ಶಿಫಾಸ್ ಹಾಗೂ ಯೂಸುಫ್ ಬಂಧಿತ ಆರೋಪಿಗಳು.

‘ಬಾಗಲೂರಿನ ಮೆಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ನಲ್ಲಿ ರೌಡಿಶೀಟರ್ ಮುಜಾಮಿಲ್, ಹಫ್ತಾ ವಸೂಲಿಗೆ ಮುಂದಾಗಿದ್ದ. ತನ್ನ ಸಹಚರರಿಗೆ ಹಫ್ತಾ ಕೊಡಲು ನಿರಾಕರಿಸಿದ್ದ ಗುಜರಿ ವ್ಯಾಪಾರಿಯನ್ನು ಅಪಹರಿಸಲು ಸಂಚು ರೂಪಿಸಿದ್ದ. ಮಧ್ಯರಾತ್ರಿ ಕಾರಿನಲ್ಲಿ ಬಂದಿದ್ದ ಆರೋಪಿಗಳು, ಪೊಲೀಸರ ಸೋಗಿನಲ್ಲಿ ಕಾರಿಗೆ ಗುಜರಿ ವ್ಯಾಪಾರಿಯನ್ನು ಹತ್ತಿಸಿಕೊಂಡಿದ್ದರು. ಕಾರು ಸ್ವಲ್ಪ ದೂರಕ್ಕೆ ಚಲಿಸಿದ ಮೇಲೆ ಗುಜರಿ ವ್ಯಾಪಾರಿಗೆ ಅನುಮಾನ ಮೂಡಿತ್ತು. ಕಾರಿನಿಂದ ಇಳಿದು ತಪ್ಪಿಸಿಕೊಳ್ಳಲು ಮುಂದಾಗಿದ್ದರು. ಆರೋಪಿಗಳು, ವ್ಯಾಪಾರಿಯನ್ನು ಅಟ್ಟಿಸಿಕೊಂಡು ಹೋದರು. ಅದೇ ರಸ್ತೆಯಲ್ಲಿ ಗಸ್ತಿನಲ್ಲಿದ ಅಸಲಿ ಪೊಲೀಸರು, ವ್ಯಾಪಾರಿಯನ್ನು ರಕ್ಷಿಸಿ ಮೂವರನ್ನು ಬಂಧಿಸಿದ್ದರು’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.