ಬೆಂಗಳೂರು: ಖಾಸಗಿ ಕಂಪನಿಗಳಲ್ಲಿ, ಕಾರ್ಖಾನೆಗಳಲ್ಲಿ ಮಾತ್ರವಲ್ಲ, ಸರ್ಕಾರಿ ಸ್ವಾಯತ್ತ ಸಂಸ್ಥೆಗಳಲ್ಲಿಯೂ ನವಜಾತಿವಾದ ಅಸ್ತಿತ್ವದಲ್ಲಿದೆ. ಹೋರಾಟದ ಮೂಲಕ ಈ ವ್ಯವಸ್ಥೆಯನ್ನು ಹಿಮ್ಮೆಟ್ಟಿಸಬೇಕು ಎಂದು ಎಐಸಿಸಿಟಿಯು ರಾಷ್ಟ್ರೀಯ ಉಪಾಧ್ಯಕ್ಷ ಕ್ಲಿಫ್ಟನ್ ಡಿ’ ರೊಜರಿಯೊ ಆಗ್ರಹಿಸಿದರು.

ನಾಲ್ಕು ಕಾರ್ಮಿಕ ಕೋಡ್ಗಳ ವಿರುದ್ಧ ಮತ್ತು ಗುತ್ತಿಗೆ ಕಾರ್ಮಿಕ ವ್ಯವಸ್ಥೆ ರದ್ದತಿಗಾಗಿ ಸರ್ಕಾರಿ ಮತ್ತು ಸಾರ್ವಜನಿಕ ವಲಯದ ಉದ್ಯಮಗಳ ಕಾಯಮೇತರ ಕಾರ್ಮಿಕರ ಸಂಯುಕ್ತ ವೇದಿಕೆಯು ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಅವರು ಮಾತನಾಡಿದರು.

ಆಯಾ ಸಂಸ್ಥೆಗಳ ಬಸ್ಗಳಲ್ಲಿ ಕಾರ್ಮಿಕರನ್ನು ಒಯ್ಯುವಾಗ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರು ನಿಂತುಕೊಳ್ಳಬೇಕು. ಕುಳಿತಿದ್ದರೂ ಕಾಯಂ ನೌಕರರು ಬಂದಾಗ ಬಿಟ್ಟುಕೊಡಬೇಕು. ಕ್ಯಾಂಟೀನ್ಗಳಲ್ಲಿಯೂ ಕಾಯಂ ನೌಕರರಿಗೆ ಮೊದಲು ತಿಂಡಿ. ಎಚ್ಎಎಲ್ ಸಹಿತ ಕೆಲವು ಸಂಸ್ಥೆಗಳಲ್ಲಿ ಕಾರ್ಮಿಕರು ಇದಕ್ಕೆಲ್ಲ ಬಗ್ಗದೇ ಪ್ರತಿಭಟನೆ ನಡೆಸಿ ಬಸ್ಗಳಲ್ಲಿ, ಕ್ಯಾಂಟೀನ್ನಲ್ಲಿ ಇಂಥ ಭೇದ ಮಾಡದಂತೆ ನೋಡಿಕೊಂಡಿದ್ದಾರೆ. ಇನ್ನು ಹಲವು ಕಂಪನಿಗಳಲ್ಲಿ ಈ ಪರಿಸ್ಥಿತಿ ಇದೆ. ಜಾತಿ ಪದ್ಧತಿಗಳಲ್ಲಿ ಗೌರವ, ಅವಕಾಶಗಳಲ್ಲಿ ಯಾವ ರೀತಿಯ ತಾರತಮ್ಯ ಇದೆಯೋ ಅದರ ಇನ್ನೊಂದು ರೂಪ ಇದಾಗಿದೆ ಎಂದು ವಿವರಿಸಿದರು.

ಖಾಸಗಿ ಸಂಸ್ಥೆಗಳಲ್ಲಿ ಮೊದಲು ಗುತ್ತಿಗೆ ಪದ್ಧತಿ ಜಾರಿಗೆ ಬಂತು. ಅದನ್ನೇ ಕ್ರಮೇಣ ಸರ್ಕಾರಿ ಸಂಸ್ಥೆಗಳಲ್ಲಿಯೂ ಅಳವಡಿಸಿಕೊಳ್ಳಲಾಯಿತು. ಕಾಯಂ ಕೆಲಸಗಳಲ್ಲಿ ಗುತ್ತಿಗೆ ಪದ್ಧತಿ ಇರಬಾರದು ಎಂಬ ನಿಯಮ ಇದೆ. ಇದರ ಆಧಾರದಲ್ಲಿ ಕಾಯಂ ಮಾಡಿ ಎಂದು ಕಾರ್ಮಿಕರು ಹಕ್ಕು ಕೇಳುತ್ತಿದ್ದಾರೆ. ಕೇಂದ್ರ ಸರ್ಕಾರ ರೂಪಿಸಿರುವ ಕಾರ್ಮಿಕರ ನಾಲ್ಕು ಕೋಡ್ಗಳು ಜಾರಿಗೆ ಬಂದರೆ ಕಾಯಂ ಮಾಡಿ ಎಂದು ಕೇಳುವ ಹಕ್ಕು ಕೂಡ ಇಲ್ಲದಂತಾಗುತ್ತದೆ ಎಂದು ಎಚ್ಚರಿಸಿದರು.

ಹಾಲಿ ಕಾರ್ಮಿಕ ಕಾಯ್ದೆಗಳನ್ನು ತೆಗೆದು ಜಾರಿ ಮಾಡಲು ಹೊರಟಿರುವ ನಾಲ್ಕು ಕೋಡ್ಗಳನ್ನು ಹಿಂಪಡೆಯಬೇಕು. ಗುತ್ತಿಗೆ, ಹೊರಗುತ್ತಿಗೆ, ಅಲ್ಪ ಅವಧಿಯ ಕೆಲಸ ಪದ್ಧತಿಗಳನ್ನು ರದ್ದುಗೊಳಿಸಬೇಕು. ಇಎಸ್ಐ ಪರಿಮಿತಿಯನ್ನು ರದ್ದು ಮಾಡಬೇಕು. ಕನಿಷ್ಠ ವೇತನ ₹ 42,000 ನೀಡಬೇಕು. ಸಂಘಟನೆ ಮಾಡುವ ಹಕ್ಕು, ಹೋರಾಟದ ಹಕ್ಕು, ಮುಷ್ಕರದ ಹಕ್ಕುಗಳನ್ನು ಎತ್ತಿ ಹಿಡಿಯಬೇಕು ಎಂಬುದೂ ಸೇರಿದಂತೆ ಹಲವು ಬೇಡಿಕೆಗಳನ್ನು ಇಟ್ಟುಕೊಂಡು ದೇಶದಾದ್ಯಂತ ಜುಲೈ 9ರಂದು ಕಾರ್ಮಿಕ ಸಂಘಟನೆಗಳು ಪ್ರತಿಭಟನೆ ನಡೆಸಲಿವೆ ಎಂದರು.

ವಿಜಯಕುಮಾರ್, ಮಣಿಯಮ್ಮ, ಗುರುವಮ್ಮ, ಮೈತ್ರೇಯಿ, ವಿರೂಪಾಕ್ಷ, ಕೃಷ್ಣನ್, ಹೇಮಂತ್ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

* ನಾಲ್ಕು ಕಾರ್ಮಿಕ ಕೋಡ್ ರದ್ಧತಿಗೆ ಆಗ್ರಹ

* ಹೋರಾಟದ ಮೂಲಕ ನವ ಜಾತಿವಾದ ತೊಡೆದು ಕಾಕಿ

* ಜುಲೈ 9ರ ದೇಶದ್ಯಾಂತ ಪ್ರತಿಭಟನೆಗೆ ಕೈಜೋಡಿಸಲು ಕರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.