ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮದ್ರಾಸ್ ಮ್ಯೂಸಿಕ್ ಅಕಾಡೆಮಿ 3 ವರ್ಷದ ಕೋರ್ಸ್‌ಗೆ ಅರ್ಜಿ ಆಹ್ವಾನ

Published 6 ಜೂನ್ 2024, 0:13 IST
Last Updated 6 ಜೂನ್ 2024, 0:13 IST
ಅಕ್ಷರ ಗಾತ್ರ

ಬೆಂಗಳೂರು: ‘ದಿ ಮ್ಯೂಸಿಕ್‌ ಅಕಾಡೆಮಿ, ಮದ್ರಾಸ್‌’ ನಡೆಸುವ ಕರ್ನಾಟಕ ಸಂಗೀತದ ಮೂರು ವರ್ಷಗಳ ಅಡ್ವಾನ್ಸ್ಡ್‌ ಡಿಪ್ಲೊಮಾ ಕೋರ್ಸ್‌ಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಜೂನ್ 25 ಕೊನೆಯ ದಿನಾಂಕವಾಗಿದೆ. ಡಿಪ್ಲೊಮಾದಲ್ಲಿ ಪ್ರತಿ ವರ್ಷ ಎರಡು ಸೆಮಿಸ್ಟರ್‌ಗಳು ಇರುತ್ತವೆ (ಜುಲೈ ಮಧ್ಯದಿಂದ ನವೆಂಬರ್ ಅಂತ್ಯದವರೆಗೆ ಮತ್ತು ಜನವರಿ ಮಧ್ಯಭಾಗದಿಂದ ಏಪ್ರಿಲ್ ಅಂತ್ಯದವರೆಗೆ). ‘ದಿ ಮ್ಯೂಸಿಕ್ ಅಕಾಡೆಮಿ’ಯಲ್ಲಿ ಜುಲೈನಿಂದ ತರಗತಿಗಳು ಆರಂಭವಾಗಲಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ನಡೆಯುತ್ತವೆ.

12ನೇ ತರಗತಿ ಅಥವಾ ದ್ವಿತೀಯ ಪಿಯು ಶಿಕ್ಷಣದಲ್ಲಿ ಉತ್ತೀರ್ಣರಾಗಿರುವವರು ಮತ್ತು 18ರಿಂದ 30 ವರ್ಷದ ಒಳಗಿರುವವರು ಪ್ರವೇಶ ಪಡೆಯಲು ಅರ್ಹರು. ಆಕಾಂಕ್ಷಿಗಳು ವರ್ಣಗಳು, ಕೃತಿಗಳನ್ನು ಹಾಡಬಲ್ಲವರಾಗಿರ
ಬೇಕು ಮತ್ತು ಸಂಗೀತ ಕಲಿಕೆಗೆ ಅಗತ್ಯವಿರುವ ಮೂಲ ‘ಮನೋಧರ್ಮ’ ಹೊಂದಿರಬೇಕು. ಅರ್ಜಿಯು ಮ್ಯೂಸಿಕ್ ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಭ್ಯರ್ಥಿಗಳನ್ನು ಅರ್ಜಿಯೊಂದಿಗೆ ತಮ್ಮ ಸ್ವ–ವಿವರ ಮತ್ತು ತಮ್ಮ ಸಂಗೀತ ತರಬೇತಿಯ ವಿವರಗಳನ್ನು ಇ–ಮೇಲ್ ಮೂಲಕ ಕಳಿಸಬೇಕು.

ಹೆಚ್ಚಿನ ಮಾಹಿತಿಗಾಗಿ www.musicacademymadras.in ಲಾಗಿನ್ ಆಗಿ ಅಥವಾ 044-2811 2231 / 2811 6902 / 2811 5162 ಸಂಖ್ಯೆಗಳಿಗೆ ಕರೆ ಮಾಡಿ.

‘ದಿ ಮ್ಯೂಸಿಕ್ ಅಕಾಡೆಮಿ’ಯು 2010ರಲ್ಲಿ ಕರ್ನಾಟಕ ಸಂಗೀತ ಕಲಿಕೆಯ ಉನ್ನತ ಶಾಲೆಯನ್ನು ಆರಂಭಿಸಿತು. ಇದು ಸಂಗೀತದಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ದಿಸೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದೆ. ಸಂಗೀತ ಕ್ಷೇತ್ರದ ಧೀಮಂತರಿಂದ ಕಲಿಯುವುದರಿಂದ ವಿದ್ಯಾರ್ಥಿಗಳಿಗೆ ರಂಗದ ಮೇಲೆ ಪ್ರದರ್ಶನ ನೀಡಲು ನೆರವಾಗುತ್ತದೆ. ಮೂರು ವರ್ಷಗಳ ತರಬೇತಿಯ ಕೊನೆಯಲ್ಲಿ ವಿದ್ಯಾರ್ಥಿ
ಗಳನ್ನು ತಾವು ಕಲಿತ ಸಂಯೋಜನೆ ಮತ್ತು ನೆರವಲ್ ಪ್ರಸ್ತುತಿಯನ್ನು ಆಧರಿಸಿ ಪರೀಕ್ಷೆಗೊಳಪಡಿಸಲಾ
ಗುವುದು. ಅಲ್ಲದೇ, ಅವರು ಆಹ್ವಾನಿತ ಶ್ರೋತೃಗಳ ಎದುರು ಕಛೇರಿಯನ್ನೂ ನೀಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT