ಬೆಂಗಳೂರು: ಫುಟ್ಬಾಲ್ ಆಟಗಾರ ಕ್ಯಾಪ್ಟನ್ ಕೃಷ್ಣಾಜಿರಾವ್ ಹೆಸರಿನಲ್ಲಿ ಪ್ರತಿವರ್ಷಫುಟ್ಬಾಲ್ ಪಂದ್ಯಾವಳಿ ಆಯೋಜಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪ್ರಧಾನ ಆಯುಕ್ತ ಪಿ.ಜಿ.ಆರ್ ಸಿಂಧ್ಯ ಹೇಳಿದರು.

ಕ್ಯಾಪ್ಟನ್ ಕೃಷ್ಣಾಜಿರಾವ್ ಯಾದವ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭಾರತದ ಫುಟ್ಬಾಲ್ ತಂಡದ ಮಿಡ್ ಫೀಲ್ಡರ್ ಆಗಿ, ತರಬೇತುದಾರರಾಗಿ, ಕರ್ನಾಟಕ ತಂಡದ ನಾಯಕರಾಗಿ ಫುಟ್ಬಾಲ್ ಕೇತ್ರಕ್ಕೆ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಭಾರತದ ಫುಟ್ಬಾಲ್ ಕ್ರೀಡೆಗೆ ಅವರು ಕೊಡುಗೆ ನೀಡುವ ಮೂಲಕ ಕರ್ನಾಟಕದ ಹೆಸರನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ದಿದ್ದರು. ಅವರ ಅಗಲಿಕೆ ರಾಷ್ಟ್ರಕ್ಕೆ ತುಂಬಲಾರದ ನಷ್ಟ’ ಎಂದರು.

ಫುಟ್ಬಾಲ್ ಮಾಜಿ ಆಟಗಾರ ರವಿಕುಮಾರ್ ಮಾತನಾಡಿ, ‘ನಾಲ್ಕು ದಶಕಗಳಿಂದ ನಾನು ಮತ್ತು ಕೃಷ್ಣಾಜಿ ರಾವ್ ಒಡನಾಡಿಗಳಾಗಿದ್ದೆವು. ಫುಟ್ಬಾಲ್ ಕ್ಷೇತ್ರದಲ್ಲಿ ಅವರು ಮಾಡಿರುವ ಸಾಧನೆ ಮತ್ತು ಅವರ ಶಿಸ್ತುಬದ್ಧ ಜೀವನ ಯುವ ಪೀಳಿಗೆಗೆ ಮಾದರಿ’ ಎಂದು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.