ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 21ರಿಂದ ನರಸಿಂಹ ಜಯಂತಿ ಮಹೋತ್ಸವ

Published 14 ಮೇ 2024, 16:33 IST
Last Updated 14 ಮೇ 2024, 16:33 IST
ಅಕ್ಷರ ಗಾತ್ರ

ಬೆಂಗಳೂರು; ಬಸವನಗುಡಿಯ ತ್ಯಾಗರಾಜನಗರದ ಅಭಯ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಮೇ 21ರಿಂದ ಮೇ 23ರ ವರೆಗೆ 47ನೇ ವರ್ಷದ ನರಸಿಂಹ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

ಅಭಯ ಲಕ್ಷ್ಮೀ ನರಸಿಂಹ, ಅಶ್ವಥ ಕುಬೇರ ಲಕ್ಷ್ಮೀನರಸಿಂಹ ಮತ್ತು ಕಂಬದ ನರಸಿಂಹನ ವಜ್ರದ ಆಕಾರದ ಸ್ವರೂಪದಿಂದಾಗಿ ಇಲ್ಲಿಗೆ ವಜ್ರಕ್ಷೇತ್ರ ಎಂಬ ಹೆಸರು ಬಂದಿದೆ. ಮೇ 21ರಂದು ನರಸಿಂಹ ತಾರಕ ಹೋಮ, ವಿವಿಧ ಪೂಜಾ ಕಾರ್ಯಗಳು ನೆರವೇರಲಿವೆ.

ಮೇ 22ರಂದು ಕಲ್ಯಾಣೋತ್ಸವ, ಅಶ್ವತ್ಥ ಕುಬೇರ ಲಕ್ಷ್ಮೀನರಸಿಂಹ ದೇವರಿಗೆ ಮಹಾಭಿಷೇಕ ಹಾಗೂ ನಾಣ್ಯ ಅಭಿಷೇಕ, 23ರಂದು ನರಸಿಂಹ ಸ್ತಂಭಕ್ಕೆ ಮಹಾಭಿಷೇಕ ನಡೆಯಲಿದೆ ಎಂದು ದೇವಸ್ಥಾನದ ಟ್ರಸ್ಟಿಗಳಾದ ಅರುಣ್ ಚಿಂತೋಪಂತ್ ಡಿ. ರಮಾಬಾಯಿ, ಎಸ್.ಆರ್. ವಾದಿರಾಜಾಚಾರ್, ಅರ್ಚಕ ನರಹರಿ ಆಚಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT