ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಿಮಾನ ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆ

Last Updated 25 ಜೂನ್ 2021, 20:51 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಬಿಕ್ಕಟ್ಟಿನಿಂದಾಗಿ ವಿಮಾನಯಾನ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದೆ. ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವ ಕಾರಣ ಆದಾಯಕ್ಕೂ ಪೆಟ್ಟು ಬಿದ್ದಿದೆ.

ಲಾಕ್‌ಡೌನ್‌ ತೆರವುಗೊಂಡ ಬಳಿಕ ಭಾರತದಲ್ಲಿ 2020ರ ಮೇ25ರಂದು ದೇಶೀಯ ವಿಮಾನ ಹಾರಾಟ ಪುನರಾರಂಭವಾಗಿತ್ತು. ಅಂದಿನಿಂದ ಈವರೆಗೆ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆಗೆ ಒಟ್ಟು 1.91 ಕೋಟಿ ಮಂದಿ ಪ್ರಯಾಣ ಬೆಳೆಸಿದ್ದಾರೆ. 2019–20ನೇ ಸಾಲಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಇದು ಶೇ 66ರಷ್ಟು ಕಡಿಮೆ.

‘ಪ್ರಸಕ್ತ ಆರ್ಥಿಕ ವರ್ಷ ದೇಶೀಯ ಮಾರ್ಗದಲ್ಲಿ1.45 ಕೋಟಿ ಮಂದಿ ಸಂಚರಿಸಿದ್ದಾರೆ. ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ (2.7 ಕೋಟಿ) ಇದು ಶೇ 63 ರಷ್ಟು ಕ್ಷೀಣಿಸಿದೆ. ಅಂತರರಾಷ್ಟ್ರೀಯ ಮಾರ್ಗಗಳಲ್ಲಿ ಕೇವಲ46 ಸಾವಿರ ಮಂದಿ ಪ್ರಯಾಣ ಬೆಳೆಸಿದ್ದಾರೆ. ಹಿಂದಿನ ವರ್ಷಕ್ಕೆ ತುಲನೆ ಮಾಡಿದರೆ ಇದು ಶೇ 90ರಷ್ಟು ಕಡಿಮೆ. ಕೋವಿಡ್‌ನಿಂದಾಗಿ ಎಲ್ಲ ರಾಷ್ಟ್ರಗಳು ವಿಮಾನ ಯಾನದ ಮೇಲೆ ನಿರ್ಬಂಧ ಹೇರಿದ್ದು ಇದಕ್ಕೆ ಕಾರಣ’ ಎಂದು ಪ್ರಕಟಣೆ ತಿಳಿಸಿದೆ.

‘ವಿಮಾನಗಳ ಸಂಚಾರ ಕೂಡ2.31 ಲಕ್ಷದಿಂದ1.13 ಲಕ್ಷಕ್ಕೆ ತಗ್ಗಿದೆ. ಸರಕು ಸಾಗಣೆಯು3.74 ಲಕ್ಷ ಟನ್‌ನಿಂದ3.26 ಲಕ್ಷ ಟನ್‌ಗೆ ಇಳಿದಿದೆ. ಹೀಗಿದ್ದರೂ ಕೂಡ ಬಿಐಎಎಲ್‌ ತಾನು ಯೋಜಿಸಿರುವಂತೆ ಮೂಲಸೌಕಯ ಯೋಜನೆಗಳನ್ನು ಪೂರ್ಣಗೊಳಿಸಲು ಬದ್ಧವಾಗಿದೆ’ ಎಂದೂ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT