ಗುರುವಾರ , ಜುಲೈ 29, 2021
24 °C

‘ರಾಮರಾಜ್’ ನೂತನ ಮಳಿಗೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೊಮ್ಮನಹಳ್ಳಿ: ನಗರದ ಎಚ್ಎಸ್ಆರ್ ಬಡಾವಣೆಯ 27ನೇ ಮುಖ್ಯರಸ್ತೆಯಲ್ಲಿ ‘ರಾಮರಾಜ್ ಕಾಟನ್’ ಸಂಸ್ಥೆಯ ನೂತನ ಮಳಿಗೆ ಶುಕ್ರವಾರ ಆರಂಭವಾಯಿತು.

ವಿಶೇಷವಾಗಿ ಪಂಚೆಗೆ ಹೆಸರುವಾಸಿಯಾಗಿರುವ ‘ರಾಮರಾಜ್’ ದೇಶದಾದ್ಯಂತ 171 ಮಳಿಗೆಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಇದೀಗ ತನ್ನ 14ನೇ ಮಳಿಗೆಯನ್ನು ತೆರೆದಿದೆ.

ಸಂಸ್ಥೆಯ ರಾಯಭಾರಿಯೂ ಆಗಿರುವ ನಟ ರಮೇಶ್ ಅರವಿಂದ್ ಅವರು ಮಳಿಗೆ ಉದ್ಘಾಟಿಸಿದರು. 

ಬಳಿಕ ಮಾತನಾಡಿದ ಅವರು,‘ರಾಮರಾಜ್ ಕಾಟನ್‌ನಲ್ಲಿ ವ್ಯಾಪಾರ ಎಂಬುದು ಒಂದು ಧರ್ಮ. ಲಾಭಕ್ಕಿಂತಲೂ ಹೆಚ್ಚಾಗಿ ಉದ್ಯೋಗ ಸೃಷ್ಟಿ, ಗ್ರಾಹಕರ ಹಿತ ಹಾಗೂ ಭಾರತೀಯ ಸಂಸ್ಕೃತಿ ಉಳಿಸುವ ಉದ್ದೇಶಕ್ಕೆ ಆದ್ಯತೆ ನೀಡಲಾಗಿದೆ. ಆ ಕಾರಣಕ್ಕಾಗಿ ಸಂಸ್ಥೆಯ ರಾಯಭಾರಿ ಆಗಿರುವೆ’ ಎಂದರು.

‘ದಕ್ಷಿಣ ಭಾರತದ ಉಡುಪು ಎಂದರೆ ಸೀರೆ, ಅಂಗಿ, ಪಂಚೆಯ ನೆನಪಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಸಂಸ್ಕೃತಿ, ಆಚಾರ-ವಿಚಾರ ಹಾಗೂ ನಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಸವಾಲಿನ ಕೆಲಸ. ರಾಮರಾಜ್ ಕಾಟನ್ ಇಂತಹ ಸವಾಲನ್ನು ಅವಕಾಶವಾಗಿ ಸ್ವೀಕರಿಸಿ, ಯಶಸ್ವಿಯಾಗಿರುವುದು ಹೆಮ್ಮೆಯ ವಿಚಾರ’ ಎಂದು ಶ್ಲಾಘಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು