ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ಪಾ ಮೇಲೆ ದಾಳಿ: 7 ಯುವತಿಯರ ರಕ್ಷಣೆ

Published 21 ಮೇ 2024, 14:32 IST
Last Updated 21 ಮೇ 2024, 14:32 IST
ಅಕ್ಷರ ಗಾತ್ರ

ಬೆಂಗಳೂರು: ಇಂದಿರಾನಗರದ 12ನೇ ಮುಖ್ಯರಸ್ತೆಯಲ್ಲಿರುವ ಬೆರ್‍ರಿ ಸ್ಪಾದ ಮೇಲೆ ದಾಳಿ ನಡೆಸಿದ ಇಂದಿರಾನಗರ ಠಾಣೆ ಪೊಲೀಸರು, ವಿದೇಶಿ ಹಾಗೂ ಹೊರರಾಜ್ಯದ ಏಳು ಯುವತಿಯರನ್ನು ರಕ್ಷಿಸಿ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ಅಸ್ಸಾಂನ ಸಂತನುಧಾರ್‌ ಬಂಧಿತ ಆರೋಪಿ. ಸ್ಪಾ ಮಾಲೀಕ ಸುರೇಶ್‌ ಎಂಬಾತ ತಲೆಮರೆಸಿಕೊಂಡಿದ್ದು, ಆರೋಪಿಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕ್ರಾಸ್‌ ಮಸಾಜ್‌, ಬಾಡಿ ಟು ಬಾಡಿ ಮಸಾಜ್‌, ಹ್ಯಾಪಿ ಎಂಡಿಂಗ್‌ ಹೆಸರಿನಲ್ಲಿ ಮಸಾಜ್‌ ಮಾಡುವುದಾಗಿ ಸ್ಪಾ ಗ್ರಾಹಕರನ್ನು ಆಕರ್ಷಿಸುತ್ತಿತ್ತು. ಹೊರ ರಾಜ್ಯದಿಂದ ಬಂದ ಯುವತಿಯರನ್ನು ಬಲವಂತವಾಗಿ ಕರೆತಂದು, ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು. ರಕ್ಷಿಸಿದ ಸಂತ್ರಸ್ತೆಯರನ್ನು ಅವರ ಕುಟುಂಬದವರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT