ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಟರ್ಮಿನಲ್-2ನಲ್ಲಿ ವಿಮಾನ ಸಂಚಾರ ಆರಂಭ

Published 12 ಸೆಪ್ಟೆಂಬರ್ 2023, 23:35 IST
Last Updated 12 ಸೆಪ್ಟೆಂಬರ್ 2023, 23:35 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌-2 ಕಾರ್ಯಾಚರಣೆ ಮಂಗಳವಾರ ಆರಂಭವಾಯಿತು.

ಜೆಡ್ಡಾದಿಂದ ‘ಸೌದಿಯಾ ಏರ್‌ಲೈನ್ಸ್’ ವಿಮಾನ ಪ್ರಥಮವಾಗಿ ಟರ್ಮಿನಲ್‌–2ನಲ್ಲಿ ಬಂದಿಳಿಯಿತು. ‘ಎಸ್‌ವಿ866’ ವಿಮಾನ ಮಂಗಳವಾರ ಬೆಳಿಗ್ಗೆ 10.15ಕ್ಕೆ ಆಗಮಿಸಿತು. 

ಇಂಡಿಗೊದ 6ಎ1167 ವಿಮಾನ ಕೊಲೊಂಬೊದಿಂದ ಮಧ್ಯಾಹ್ನ 12.10ಕ್ಕೆ ಬಂದಿಳಿಯಿತು. ಭಾರತ ವಿಮಾನ ಸಂಸ್ಥೆಯ ಪ್ರಥಮ ವಿಮಾನ ಇದಾಗಿತ್ತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದರು.

ಟರ್ಮಿನಲ್‌–2ಗೆ ಪ್ರಥಮ ವಿಮಾನದಲ್ಲಿ ಬಂದಿಳಿದ ಪ್ರಯಾಣಿಕರಿಗೆ ಡೊಳ್ಳು ಕುಣಿತ ಹಾಗೂ ಯಕ್ಷಗಾನ ಪ್ರದರ್ಶನದ ಮೂಲಕ ಸ್ವಾಗತ ಕೋರಲಾಯಿತು. ‘ಸೌದಿಯಾ’ ವಿಮಾನ ಎಸ್‌ವಿ867 ಜೆಡ್ಡಾಗೆ ಬೆಳಿಗ್ಗೆ 11.50ಕ್ಕೆ ಟರ್ಮಿನಲ್‌–2ನಿಂದ ನಿರ್ಗಮಿಸಿತು.

ಟರ್ಮಿನಲ್‌–1ನಲ್ಲಿ ಮಂಗಳವಾರದಿಂದ ದೇಶೀಯ ವಿಮಾನಗಳ ಕಾರ್ಯಾಚರಣೆ ಮಾತ್ರ ಮುಂದುವರಿದಿದೆ. ಇಂಡಿಗೊ, ಆಕಾಶ ಏರ್‌, ಅಲೈಯನ್ಸ್‌ ಏರ್‌ ಮತ್ತು ಸ್ಪೈಸ್‌ಜೆಟ್‌ ವಿಮಾನಗಳು ಹಾರಾಟ ನಡೆಸಿದವು. ಟರ್ಮಿನಲ್‌–2 ಅಂತರರಾಷ್ಟ್ರೀಯ ವಿಮಾನಗಳಿಗೆ ಸೀಮಿತವಾಗಿದ್ದರೂ, ಏರ್‌ಏಷಿಯಾ, ಏರ್‌ ಇಂಡಿಯಾ, ಸ್ಟಾರ್‌ ಏರ್‌ ಮತ್ತು ವಿಸ್ತಾರದ ದೇಶೀಯ ವಿಮಾನಗಳೂ ಕಾರ್ಯಾಚರಣೆ ನಡೆಸಲಿವೆ ಎಂದು ಅಧಿಕಾರಿಗಳು ತಿಳಿಸಿದರು.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಹ್ಯಾರಿ ಮರಾರ್‌ ಮಾತನಾಡಿ, ‘ಟರ್ಮಿನಲ್‌–2  ಆಧುನಿಕ ಮೂಲಸೌಕರ್ಯಗಳನ್ನು ಹೊಂದಿದ್ದು, ಉತ್ತಮ ಮಳಿಗೆಗಳ ಆಯ್ಕೆಯನ್ನೂ ಹೊಂದಿದೆ. ನಾಗರಿಕರ ಪ್ರಯಾಣವನ್ನು ಮರುವಿಮರ್ಶಿಸಲಾಗಿದೆ’ ಎಂದರು.

ಆಗಸ್ಟ್‌ 31ರಂದು ಟರ್ಮಿನಲ್–2 ಕಾರ್ಯಾಚರಣೆ ಮಾಡಲಿದೆ ಎಂದು ಈ ಮೊದಲು ಪ್ರಕಟಿಸಲಾಗಿತ್ತು. ಒಂದು ದಿನದ ಮೊದಲು ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಕಳೆದ ನವೆಂಬರ್‌ನಲ್ಲಿ ಉದ್ಯಾನವನ್ನು ಉದ್ಘಾಟಿಸಲಾಗಿತ್ತು. 2,55,551 ಚದರ ಮೀಟರ್‌ ವ್ಯಾಪ್ತಿಯಲ್ಲಿರುವ ಟರ್ಮಿನಲ್‌–2ನಲ್ಲಿ ವಾರ್ಷಿಕ 2.5 ಕೋಟಿ ಪ್ರಯಾಣಿಕರ‌ನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟನೆ ಸಮಾರಂಭದಲ್ಲಿ ಮಂಗಳವಾರ ಡೊಳ್ಳು ಕುಣಿತ ಹಾಗೂ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2 ಉದ್ಘಾಟನೆ ಸಮಾರಂಭದಲ್ಲಿ ಮಂಗಳವಾರ ಡೊಳ್ಳು ಕುಣಿತ ಹಾಗೂ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT